ಮಡಿಕೇರಿ, ಮಾ. ೧೧: ಭಾರತೀಯ ಜನತಾ ಪಾರ್ಟಿಯ ಎಸ್.ಸಿ. ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಸೋ.ಪೇಟೆಯ ಪಿ.ಕೆ. ಚಂದ್ರು ಹಾಗೂ ಚೇತನ್ ಶಿವಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎಸ್.ಸಿ. ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ. ರವಿ ತಿಳಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಅರೆಕಾಡಿನ ಚೆನ್ನಿಗಯ್ಯ ಹೆಚ್.ಡಿ, ವೀರಾಜಪೇಟೆ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಅಭಿಜಿತ್ ಹೆಚ್.ಎ, ಸೋಮವಾರಪೇಟೆ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಜಗನ್ನಾಥ್ ಜಿ. ಚೌಡ್ಲು ಹಾಗೂ ಮಡಿಕೇರಿ ನಗರ ಮಂಡಲ ಅಧ್ಯಕ್ಷರನ್ನಾಗಿ ಮುಕುಂದ ಹೆಚ್.ಜಿ ಅವರುಗಳನ್ನು ನೇಮಕ ಮಾಡಿರುವುದಾಗಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.