ಮಡಿಕೇರಿ, ಮಾ. ೧೧: ಕಳೆದ ಐದು ತಿಂಗಳಿನಿAದ ವೇತನ ಪಾವತಿಯಾಗದಿರುವ ಹಿನ್ನೆಲೆಯಲ್ಲಿ ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇ ಜಿನ ಅತಿಥಿ ಉಪನ್ಯಾಸಕರು ನಡೆಸುತ್ತಿ ರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಹತ್ತನೇ ದಿನಕ್ಕೆ ಕಾಲಿರಿಸಿದ್ದು, ಇಂದು ಕಾಲೇಜಿನ ವಿದ್ಯಾರ್ಥಿಗಳು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.

ಮಂಗಳೂರು ವಿವಿ ಅಧೀನದಲ್ಲಿ ರುವ ಫೀ. ಮಾ. ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು ಗಳಾಗಿ ಸುಮಾರು ೬೫ಮಂದಿ ಸೇವೆ ಸಲ್ಲಿಸುತ್ತಿದ್ದು, ಇವರುಗಳಿಗೆ ಕಳೆದ ಐದು ತಿಂಗಳಿನಿAದ ವೇತನ ಪಾವತಿಯಾಗಿರುವದಿಲ್ಲ. ಹಾಗಾಗಿ ಎಲ್ಲ ಉಪನ್ಯಾಸಕರುಗಳು ಕಳೆದ ಹತ್ತು ದಿನಗಳಿಂದ ತರಗತಿ ಬಹಿಷ್ಕರಿಸಿ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಉಪನ್ಯಾಸಕರು ಗಳಿಲ್ಲದೆ ತರಗತಿ ನಡೆಯದೇ ಇರುವ ಕಾರಣ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಗಳು ಕೂಡ ಪ್ರತಿಭಟನೆ ಯಲ್ಲಿ ಭಾಗವಹಿಸಿ ಉಪನ್ಯಾಸಕರು ಗಳಿಗೆ ಬೆಂಬಲವಾಗಿ ನಿಂತರು. ಪರೀಕ್ಷಾ ಸಮಯ ಎದುರಾಗುತ್ತಿದ್ದ ಈ ಸಮಯದಲ್ಲಿ ತರಗತಿಗಳು ನಡೆಯದೇ ಇರುವದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾ ಗುತ್ತಿದೆ. ಹಾಗಾಗಿ ಕೂಡಲೇ ಉಪನ್ಯಾ ಸಕರಿಗೆ ವೇತನ ಪಾವತಿ ಮಾಡು ವದರೊಂದಿಗೆ ಸಮಸ್ಯೆ ಪರಿಹಾರ ಮಾಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ತರಗತಿಗಳು ನಡೆ ಯದೇ ಇರುವ ಕಾರಣ ಬಹುತೇಕ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿ ಸದೆ ಗೈರು ಹಾಜರಾಗುತ್ತಿದ್ದಾರೆ. ಇದು ವಿವಿಯ ಗಮನಕ್ಕೆ ಬಂದಿದ್ದರೂ ಯಾವದೇ ಕ್ರಮ ಕೈಗೊಳ್ಳದಿರುವದು ಮಾತ್ರ ವಿಪರ್ಯಾಸವೇ ಸರಿ.