ಮಡಿಕೇರಿ: ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ೫ ವರ್ಷದೊಳಗಿನ ಪುಟಾಣಿಗಳಿಗೆ ಲಸಿಕೆ ಹಾಕಲಾಯಿತು.
ಮಡಿಕೇರಿಯ ಅಶೋಕಪುರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಪೋಲಿಯೋ ಲಸಿಕೆಯನ್ನು ಆ ವ್ಯಾಪ್ತಿಯ ೫ ವರ್ಷದೊಳಗಿನ ಮಕ್ಕಳಿಗೆ ಹಾಕಲಾಯಿತು.
ಈ ಸಂದರ್ಭ ಮಾತನಾಡಿದ ರೋಟರಿ ವಲಯ ೬ ರ ಸಹಾಯಕ ಗವರ್ನರ್ ದೇವಣಿರ ತಿಲಕ್, ಅಂರ್ರಾಷ್ಟಿçÃಯ ಮಟ್ಟದಲ್ಲಿ ಪೋಲಿಯೋ ನಿವಾರಣೆಗಾಗಿ ರೋಟರಿ ಸಂಸ್ಥೆಯು ಬೃಹತ್ ಆಂದೋಲನ ಕೈಗೊಂಡಿದೆ. ಇದರ ಪರಿಣಾಮವಾಗಿಯೇ ಇಂದು ಬಹುತೇಕ ದೇಶಗಳಲ್ಲಿ ಪೋಲಿಯೋ ಕಣ್ಮರೆಯಾಗಿದೆ ಎಂದು ತಿಳಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ನ ಪಲ್ಸ್ ಪೋಲಿಯೋ ಯೋಜನೆಯ ನಿರ್ದೇಶಕ ಡಾ. ಚೇತನ್ ಶೆಟ್ಟಿ ಮಾತನಾಡಿ, ಪೋಲಿಯೋ ನಿರೋಧಕ ಲಸಿಕೆಯಲ್ಲಿ ಬಹಳಷ್ಟು ಆರೋಗ್ಯಕಾರಿ ಅಂಶಗಳಿದೆ. ಲಸಿಕೆ ಹಾಕುವ ಮಗುವಿನಲ್ಲಿ ರೋಗ ನಿರೋಧಕ ಶಕ್ತಿಯು ಪ್ರಬಲವಾಗಿ ರೂಪುಗೊಳ್ಳುತ್ತದೆ. ಹೀಗಾಗಿ ೫ ವರ್ಷದೊಳಗಿನ ಪ್ರತೀ ಮಗುವೂ ಪೋಲಿಯೋ ಲಸಿಕೆ ಹಾಕಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.
ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಎಚ್.ಟಿ. ಮಾತನಾಡಿ, ಪಾಕಿಸ್ತಾನ್, ಅಪ್ಘಾನಿಸ್ತಾನ್, ಆಫ್ರಿಕಾ ದೇಶಗಳಲ್ಲಿನ ಕೆಲವು ಪ್ರಕರಣ ಹೊರತುಪಡಿಸಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಕೆಲವು ವರ್ಷಗಳಿಂದ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ, ಈಗಾಗಲೇ ಭಾರತ ಪೋಲಿಯೋ ಮುಕ್ತ ದೇಶವಾಗಿದೆ. ಪೋಲಿಯೋ ನಿವಾರಣೆಯಲ್ಲಿ ರೋಟರಿ ಸಂಸ್ಥೆಯು ಜಾಗತಿಕ ಮಟ್ಟದಲ್ಲಿಯೇ ಪ್ರಮುಖ ಪಾತ್ರ ವಹಿಸಿದೆ ಎಂದು ಮಾಹಿತಿ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ನಿರ್ದೇಶಕರಾದ ಅಂಬೆಕಲ್ ವಿನೋದ್, ಪ್ರಸಾದ್ ಗೌಡ, ಜಗದೀಶ್ ಪ್ರಶಾಂತ್, ಪೊನ್ನಚ್ಚನ ಮಧುಸೂದನ್, ಅಂಗನವಾಡಿ ಕೇಂದ್ರದ ಶಿಕ್ಷಕಿ ಮೀರಾ ಎಸ್. ಅರೆವೈದ್ಯಕೀಯ ವಿದ್ಯಾರ್ಥಿನಿಯರಾದ ಶ್ರುತಿ, ಶಿಪಾನ್ ಹಾಜರಿದ್ದರು.
ಮಾಲ್ದಾರೆ ಸಿದ್ದಾಪುರ: ಮಾಲ್ದಾರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಕುಂಞಣ್ಣ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ವೈದ್ಯಾಧಿಕಾರಿ ಶಾರುಖ್, ಪ್ರಮುಖರಾದ ವಲ್ಸಲ, ವಿದ್ಯಾ, ಕಾಂತಿ, ಸರಸ್ವತಿ, ರಾಜೀಶ್ ಸೇರಿದಂತೆ ಮತ್ತಿತರರು ಇದ್ದರು.
ಪಾಲಿಬೆಟ್ಟಪಾಲಿಬೆಟ್ಟ: ಪಾಲಿಬೆಟ್ಟದ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಮಕ್ಕಳಿಗೆ ಲಸಿಕೆ ನೀಡುವುದರ ಮೂಲಕ ಉದ್ಘಾಟಿಸಿದರು. ಸಮುದಾಯ ಆರೋಗ್ಯ ಕೇಂದ್ರದ ಆಢಳಿತಾಧಿಕಾರಿ ಡಾ. ವಿಶ್ವಾಸ್, ಡಾ. ಸುನಿಲ್, ಡಾ. ಜಗದೀಶ್, ಕಾಂಗ್ರೆಸ್ ವಲಯ ಅಧ್ಯಕ್ಷ ಎಂ.ಎA. ಸಾಬು ಕಾಳಪ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಎಂ.ಬಿ. ಪವಿತ್ರ, ಅಬ್ದುಲ್ ನಾಸಿರ್, ಪ್ರಮುಖರುಗಳಾದ ರಿನೀಶ್, ಸಿಬ್ಬಂದಿಗಳಾದ ಕಾರ್ಯಪ್ಪ, ದಿನೇಶ್, ಚಂಗಪ್ಪ ಹಾಗೂ ದಾದಿಯರು ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.
ಸೋಮವಾರಪೇಟೆ ಆರೋಗ್ಯ ಇಲಾಖೆಸೋಮವಾರಪೇಟೆ: ಆರೋಗ್ಯ ಇಲಾಖೆಯ ವತಿಯಿಂದ ಆಯೋಜನೆಗೊಂಡ ಪಲ್ಸ್ ಪೋಲಿಯೋ ಲಸಿಕೆ ವಿತರಣಾ ಅಭಿಯಾನದಲ್ಲಿ, ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿನಾದ್ಯಂತ ಒಟ್ಟು ೧೧,೨೬೭ ಮಕ್ಕಳಿಗೆ ಲಸಿಕೆ ನೀಡಲಾಯಿತು ಎಂದು ತಾಲೂಕು ಆರೋಗ್ಯಾಧಿಕಾರಿ ಇಂದೂಧರ್ ತಿಳಿಸಿದರು. ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ೧, ಪ್ರಾಥಮಿಕ ಆರೋಗ್ಯ ಕೇಂದ್ರಗಳು ೧೩, ಸಮುದಾಯ ಆರೋಗ್ಯ ಕೇಂದ್ರ ೨, ಅಂಗನವಾಡಿ ೬೭, ಜನನಿಬಿಡತೆಯ ೯ ಬಸ್ ನಿಲ್ದಾಣಗಳಲ್ಲಿ ಪೋಲಿಯೋ ಲಸಿಕೆ ವಿತರಣೆಯ ಬೂತ್ ತೆರೆದು, ನವಜಾತ ಶಿಶುವಿನಿಂದ ಹಿಡಿದು ೫ ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ನೀಡಲಾಯಿತು.
ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಸ್ವಯಂ ಸೇವಕರು, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ೬೧೬ ಮಂದಿ ಲಸಿಕಾ ಅಭಿಯಾನದಲ್ಲಿ ಭಾಗಿಯಾಗಿದ್ದರು.