ವೀರಾಜಪೇಟೆ, ಮಾ. ೧೧: ಪುರಸಭೆಯಲ್ಲಿ ೨೦೨೪-೨೫ ನೇ ಸಾಲಿಗೆ ರೂ ೫೦.೩೩ ಲಕ್ಷ ರೂಗಳ ಉಳಿತಾಯ ಬಜೆಟ್ ಮಂಡಿಸಲಾಯಿತು.

ಪುರಸಭೆಯ ಕಚೆೆÃರಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ ಅಧ್ಯಕ್ಷತೆಯಲ್ಲಿ ೨೦೨೪-೨೫ ನೇ ಸಾಲಿನ ಆಯವ್ಯಯವನ್ನು ಮುಖ್ಯಾಧಿಕಾರಿ ಚಂದ್ರಕುಮಾರ್ ಮಂಡಿಸಿದರು.

೨೦೨೪-೨೫ನೇ ಸಾಲಿನ ಆಯವ್ಯಯಗಳಾದ ಆರಂಭಿಕ ಶಿಲ್ಕು ರೂ. ೪೮೦.೬೨ ಲಕ್ಷಗಳು, ನಿರೀಕ್ಷಿತ ಆದಾಯ ೮೭೨.೩೧, ಒಟ್ಟು ೧೩೫೨.೯೩ ಲಕ್ಷ ನಿರೀಕ್ಷಿತ ವೆಚ್ಚ ೧೩೦೨.೬೦ ಲಕ್ಷ, ನಿರೀಕ್ಷಿತ ಉಳಿತಾಯ ರೂ. ೫೦.೩೩ ಲಕ್ಷ ಬಜೆಟ್ ಮಂಡಿಸಲಾಯಿತು.

ಸದಸ್ಯರಾದ ಪೃಥ್ವಿನಾಥ್ ಮಾತನಾಡಿ, ನೀರಿನ ಕರ ರೂ. ೧೩೦ ರೂ ಪೈಕಿ ೧೦ ರೂಪಾಯಿ ಆದರೂ ಕಡಿತಗೊಳಿಸಿಸುವಂತೆ ಹೇಳಿದರು. ನೀರಿನ ಅಭಾವ ಈಗಾಗಲೇ ಪ್ರಾರಂಭವಾಗಿದೆ ಎಂದು ಗಮನ ಸೆಳೆದರು. ಸದಸ್ಯ ಅಗಸ್ಟಿನ್ ಬೆನ್ನಿ ಮಾತನಾಡಿ, ನೆಹರು ನಗರದ ಬಡಾವಣೆಯಲ್ಲಿ ಇಂದಿಗೂ ಐದು ದಿನಕ್ಕೆ ಒಮ್ಮೆ ಮಾತ್ರ ನೀರು ಬರುತ್ತಿದೆ ಎಂದರಲ್ಲದೆ, ಕ್ರಮಕ್ಕೆ ಒತ್ತಾಯಿಸಿದರು.

ಪಟ್ಟಣಕ್ಕೆ ಸಮಗ್ರ ನೀರು ಪೂರೈಕೆಗೆ ಈಗಿನ ೫೮ ಕೋಟಿ ರೂಗಳ ಕಾಮಗಾರಿ ಮುಗಿಯಬೇಕು ಅದಕ್ಕೆ ವರ್ಷಗಳಾದರು ಬೇಕು. ಅಲ್ಲಿಯವರಗೆ ನೀರಿನ ತೆರಿಗೆ ತಗ್ಗಿಸಿ ಎಂದು ಸದಸ್ಯ ರಂಜಿ ಪೂಣಚ್ಚ ಪ್ರಸ್ತಾಪಿಸಿದರು. ಸದಸ್ಯರುಗಳಾದ ಮಹಮ್ಮದ್ ರಾಫಿ, ಎಸ್.ಎಚ್. ಮತ್ತೀನ್, ಡಿ.ಪಿ. ರಾಜೇಶ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಆಡಳಿತಾಧಿಕಾರಿ ೧೦ ರೂ ನೀರಿನ ದರ ಕಡಿತಗೊಳಿಸುವುದಾಗಿ ಹೇಳಿದರು.

ಆಡಳಿತಾಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ ಮಾತನಾಡಿದರು. ಸಭೆಯಲ್ಲಿ ಸದಸ್ಯರುಗಳಾದ ಫಸಿಯಾ ತಬ್ಸಮ್, ಪೂರ್ಣಿಮಾ, ರಜನಿಕಾಂತ್, ಸುಭಾಶ್ ಮಹದೇವ್, ಆಶಾ ಸುಬ್ಬಯ್ಯ, ಸುನೀತ ಜೂನಾ, ಅನಿತಾ, ಮಹಮ್ಮದ್ ರಾಫಿ, ಸೇರಿದಂತೆ ಇತರರು ಇದ್ದರು.