ಮಡಿಕೇರಿ, ಮಾ. ೧೧: ಭಾಗಮಂಡಲದ ಜನರ ಹಲವು ವರ್ಷಗಳ ಬೇಡಿಕೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಸ್ಪಂದನ ನೀಡಿದ್ದು, ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭಾಗಮಂಡಲದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಸಂದರ್ಭ ವಿದ್ಯುತ್ ಉಪಕೇಂದ್ರಕ್ಕಾಗಿ ಮೀಸಲಿಟ್ಟಿರುವ ಜಾಗವನ್ನು ಪರಿಶೀಲಿಸಿದರು. ಪದಕಲ್ಲು ಗ್ರಾಮದಲ್ಲಿ ೩ ಎಕರೆ ಪ್ರದೇಶದಲ್ಲಿ ೬೬/೧೧ ಕೆ.ವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಯಾಗಲಿದ್ದು, ಸ್ಥಳ ಪರಿಶೀಲಿಸಿದ ಶಾಸಕರು, ಟೆಂಡರ್ ಪ್ರಕ್ರಿಯೆಗೆ ಸೂಚನೆ ನೀಡಿದರು.
ಈ ಸಂದರ್ಭ ಶಾಸಕರ ಕರ್ತವ್ಯಾಧಿಕಾರಿ ಮುತ್ತಣ್ಣ ಹಾಗೂ ಕುಂದಚೇರಿ ಗ್ರಾ.ಪಂ ಸದಸ್ಯ ಕೆ.ಯು. ಹಾರಿಸ್ ಪದಕಲ್ಲು ಅವರು ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಯೋಜನೆ ಕುರಿತು ಮಾಹಿತಿ ನೀಡಿದರು.
ಚೆಟ್ಟಿಮಾನಿ (ಕುಂದಚೇರಿ) ಪಂಚಾಯಿತಿ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಇದೇ ಸಂದರ್ಭ ಚಾಲನೆ ನೀಡಿದರು. ಕೋಪಟ್ಟಿ, ಸಿಂಗತ್ತೂರು, ಕುಂದಚೇರಿ ಮತ್ತು ಪದಕಲ್ಲು ಗ್ರಾಮದ ೧.೨೬ ಕೋಟಿ ವೆಚ್ಚದ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿಗೆ ಪದಕಲ್ಲು ಗ್ರಾಮದ ನವಗ್ರಾಮದಲ್ಲಿ (ನಂಗಾರು ರಸ್ತೆ) ಭೂಮಿಪೂಜೆ ನೆರವೇರಿಸಿದರು.
ನಂತರ ಪದಕಲ್ಲು ೬೧/೩ರ ೮೫ ನಿವೇಶನ ವೀಕ್ಷಿಸಿ, ವಸತಿ ರಹಿತರ ಜೊತೆ ಚರ್ಚಿಸಿದರು. ತಕ್ಷಣ ಹಕ್ಕುಪತ್ರ ಮತ್ತು ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ನೀಡುವುದಾಗಿ ಭರವಸೆ ನೀಡಿದರು.
ತಕ್ಷವೇ ಜೆಜೆಎಂ ಹಾಗೂ ಚೆಸ್ಕಾಂ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿನ ಮೋಟಾರ್ ಮತ್ತು ಘಟಕಕ್ಕೆ ವಿದ್ಯುತ್ ಸಂಪರ್ಕ ನೀಡುವುದಾಗಿ ಭರವಸೆ ನೀಡಿದರು.
ಪಂಚಾಯಿತಿ ಅಧ್ಯಕ್ಷ ಪಿ.ಬಿ.ದಿನೇಶ್, ಉಪಾಧ್ಯಕ್ಷ ಹೆಚ್.ಸಿ. ಬೇಬಿ, ಸದಸ್ಯರಾದ ವಿಶು ಪ್ರವೀಣ್ ಕುಮಾರ್, ಡಿಸಿಸಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಮುಖಂಡರುಗಳಾದ ತೆನ್ನಿರಾ ಮೈನಾ, ಕೆದಂಬಾಡಿ ಸುರೇಂದ್ರ, ಕೆ.ಟಿ.ರಮೇಶ್, ಕೆ.ಎಂ.ಇಸ್ಮಾಯಿಲ್, ಮಂಗೇರಿರ ಜಗದೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.