ಕೂಡಿಗೆ, ಮಾ. ೧೧: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಸಾಲಿನಷ್ಟು ಮಳೆ ಬೀಳದ ಕಾರಣದಿಂದಾಗಿ ಈ ಬಾರಿ ಈ ವ್ಯಾಪ್ತಿಯ ಅನೇಕ ಕೆರೆಕಟ್ಟೆಗಳು ನೀರಿಲ್ಲದೆ ಬತ್ತಿರುವುದನ್ನು ಕಾಣಬಹುದಾಗಿದೆ. ಕುಡಿಯುವ ನೀರಿನ ಸರಬರಾಜು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಕೆರೆಕಟ್ಟೆಗಳು ಬತ್ತಿದ ಹಿನ್ನೆಲೆಯಲ್ಲಿ ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಸಮಸ್ಯೆಯಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ವಿವಿಧ ಗ್ರಾಮಗಳಲ್ಲಿ ನಿರ್ಮಾಣ ಮಾಡಿರುವ ಕುಡಿಯುವ ನೀರಿನ ಸಂಗ್ರಹದ ತೊಟ್ಟಿಗಳು ಇದೀಗ ದನಕರುಗಳಿಗೆ ಆಶ್ರಯವಾಗುತ್ತಿವೆ.
ಕುಶಾಲನಗರ ತಾಲೂಕು ವ್ಯಾಪ್ತಿಯ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೩೦ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರು ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ತೊಟ್ಟಿಗಳು ಇದುವರೆಗೂ ಕಡಿಮೆ ಪ್ರಮಾಣದಲ್ಲಿ ಉಪಯೋಗಕ್ಕೆ ಬರುತ್ತಿದ್ದವು, ಆದರೆ, ಈ ಬಾರಿ ಹಾರಂಗಿ ನಾಲೆಯಲ್ಲಿ ನೀರಿನ ಹರಿಯುವಿಕೆಯು ಇಲ್ಲದ ಕಾರಣದಿಂದಾಗಿ ಈ ವ್ಯಾಪ್ತಿಯ ದನಕರುಗಳಿಗೆ ಕುಡಿಯುವ ನೀರಿನ ತೊಟ್ಟಿಗಳು ಬಹಳ ಸಹಕಾರಿಯಾಗುತ್ತಿವೆ.
ಇಷ್ಟು ವರ್ಷಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕೊಳವೆ ಬಾವಿಯಿಂದ ನೀರಾವರಿ ಸೌಲಭ್ಯಗಳಿಗೆ ವಿದ್ಯುತ್ ಸಮಸ್ಯೆಗಳು ಆಗುತ್ತಿತ್ತು, ಆದರೆ ಈ ಬಾರಿ ವಿದ್ಯುತ್ ಸಮಸ್ಯೆಯ ಬದಲು ಅಂತರ್ಜಲದ ಸಮಸ್ಯೆಯಿಂದಾಗಿ ನೀರು ಕೊಳವೆ ಬಾವಿಗಳಿಂದ ಬಾರದೆ ಇರುವುದರಿಂದಾಗಿ ಈಗಾಗಲೇ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಿದ್ದತೆ ಮಾಡಿಕೊಂಡರೂ ಸಹ ಕೊಳವೆ ಬಾವಿಯಲ್ಲಿ ನೀರಿಲ್ಲದ್ದೆ ಕೃಷಿ ಚಟುವಟಿಕೆಗಳಿಗೆ ಸಹ ಹಿನೆÀ್ನಡೆ ಉಂಟಾಗಿದೆ.
-ಕೆ.ಕೆ. ನಾಗರಾಜಶೆಟ್ಟಿ.