ಕೋವರ್ ಕೊಲ್ಲಿ ಇಂದ್ರೇಶ್
ನವದೆಹಲಿ, ಮಾ. ೧೧: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಅiಣizeಟಿshiಠಿ ಂmeಟಿಜmeಟಿಣ ಂಛಿಣ) ಜಾರಿಗೆ ಸೋಮವಾರ ಅಧಿಸೂಚನೆ ಹೊರಡಿಸಿದೆ.
ಕಳೆದ ೨೦೧೯ರ ಡಿಸೆಂಬರ್ ೧೧ ರಂದು ಸಂಸತ್ತಿನಲ್ಲಿ ಸಿಎಎ ಕಾಯ್ದೆಗೆ ಅನುಮೋದನೆ ಸಿಕ್ಕಿದ್ದರೂ, ಅಧಿಸೂಚನೆ ಹೊರಡಿಸಿರಲಿಲ್ಲ. ಈ ಕಾಯ್ದೆಗೆ ಪ್ರತಿ ಪಕ್ಷಗಳು ತೀವ್ರ ಆಕ್ರೋಶ ವಿರೋಧ ವ್ಯಕ್ತಪಡಿಸಿದ್ದಲ್ಲದೆ ದೇಶಾದ್ಯಂತ ಅನೇಕ ಭಾಗಗಳಲ್ಲಿ ತೀವ್ರ ಪ್ರತಿಭಟನೆಗೂ ಕಾರಣವಾಗಿತ್ತು. ಆದರೆ, ಕಳೆದ ಫೆಬ್ರವರಿ ೧೦ ರಂದು ಚುನಾವಣೆಗೂ ಮುನ್ನ ಸಿಎಎ ಜಾರಿಗೊಳಿಸುವುದಾಗಿ ಗೃಹ ಸಚಿವ ಅಮಿತ್ ಶಾ ಪುನರುಚ್ಚರಿಸಿದ್ದರು. ಇದರಂತೆ ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಸಿಎಎ ಅಧಿಸೂಚನೆ ಹೊರಡಿಸಲಾಗಿದೆ.
ನೆರೆಯ ದೇಶಗಳ ಅಲ್ಪಸಂಖ್ಯಾತರಿಗೆ ಅನುಕೂಲ
ಇದೀಗ ಸಿಎಎ ಜಾರಿಗೊಳಿಸಿ ಅಧಿಸೂಚನೆ ಹೊರಬಿದ್ದಿದ್ದು, ಇದರಿಂದಾಗಿ ೨೦೧೪ರ ಡಿಸೆಂಬರ್ ೩೧ಕ್ಕೂ ಮುನ್ನ ಭಾರತಕ್ಕೆ ಆಗಮಿಸಿದ ಬಾಂಗ್ಲಾ, ಅಫ್ಘಾನಿಸ್ಥಾನ , ಪಾಕಿಸ್ತಾನ, ದೇಶದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅನುಕೂಲವಾಗಲಿದೆ.
ಈ ಮೊದಲು ೧೧ ವರ್ಷ ಭಾರತದಲ್ಲೇ ನೆಲೆಸಿದವರಿಗೆ ಪೌರತ್ವ ಪಡೆಯುವ ಅವಕಾಶವಿತ್ತು. ಆದರೆ ಈಗ ತಿದ್ದುಪಡಿ ಮಾಡಿ ೧೧ ವರ್ಷದಿಂದ ಈಗ ೫ ವರ್ಷಕ್ಕೆ ಇಳಿಸಲಾಗಿದ್ದು, ಮುಸ್ಲಿಮೇತರ ವ್ಯಕ್ತಿಗಳು ೬ ವರ್ಷ ಕಾಲ ಅಥವಾ ಅದಕ್ಕೂ ಮೇಲ್ಪಟ್ಟು ಭಾರತದಲ್ಲೇ ವಾಸ ಮಾಡಿದ್ದರೆ ಅಂಥವರಿಗೆ ಪೌರತ್ವ ನೀಡಲಾಗುತ್ತದೆ. ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್, ಪಾರ್ಸಿಗಳಿಗೆ ಪೌರತ್ವ ನೀಡಲಾಗುತ್ತದೆ.
೨೦೧೯ರಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದಾಗ ಪ್ರತಿಪಕ್ಷಗಳು ಈ ಕಾಯ್ದೆಯನ್ನು ವಿರೋಧಿಸಿದ್ದವು. ಅಲ್ಲದೇ ಭಾರತದಲ್ಲಿನ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳಲಾಗುತ್ತದೆ ಅನ್ನೋ ಉಹಾಪೋಹಗಳು ಈ ಕಾಯ್ದೆ ಜೊತೆಗೆ ಹಬ್ಬಿಸಲಾಗಿತ್ತು. ಹೀಗಾಗಿ ಭಾರಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿತ್ತು. ಆದರೆ ಭಾರತದಲ್ಲಿನ ಮುಸ್ಲಿಮರ ಅಥವಾ ಇನ್ಯಾವುದೇ ಸಮುದಾಯದ ನಾಗರಿಕರ ಪೌರತ್ವಕ್ಕೆ ಈ ಕಾಯ್ದೆಯಿಂದ ಧಕ್ಕೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಪ್ಟಪಡಿಸಿತ್ತು.
ಪ್ರಮುಖವಾಗಿ ಈ ಕಾಯ್ದೆಯಡಿ ಮೂರು ದೇಶಗಳಲ್ಲಿ ನಡೆದ ಅನ್ಯಾಯ, ನರಮೇಧ, ದೌರ್ಜನ್ಯಗಳಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದು ನೆಲೆಸಿದವರಿಗೆ ಪೌರತ್ವ ನೀಡುವು ದಾಗಿದೆ. ಈಗಾಗಲೇ ಮೇಲಿನ ಮೂರೂ ದೇಶಗಳಲ್ಲಿ ಮುಸ್ಲಿಂ ಮೂಲಭೂತ ವಾದಿಗಳಿಂದಾಗಿ ಧಾರ್ಮಿಕ ಅಲ್ಪಸಂಖ್ಯಾ ತರಿಗೆ ಆಗುತ್ತಿರುವ ಅನ್ಯಾಯ ವನ್ನು ಗಮನದಲ್ಲಿಟ್ಟುಕೊಂಡು ಈ ಕಾಯ್ದೆ ರೂಪಿಸಲಾಗಿದ್ದು ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವುದಾಗಿದೆ.
ಈ ಕಾಯ್ದೆಯಿಂದಾಗಿ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯ ಬರ್ಮಾ ದೇಶೀಯರು, ಆಫ್ರಿಕನ್, ಬಾಂಗ್ಲಾ ದೇಶೀ ಪ್ರಜೆಗಳಿಗೆ ತೊಂದರೆ ಆಗಲಿದೆ. ಪ್ರತಿಯೊಬ್ಬರೂ ದಾಖಲಾತಿಗಳನ್ನು ನೀಡಿ ಪೌರತ್ವ ಖಚಿತಪಡಿಸಿಕೊಳ್ಳಬೇಕಾಗಿದ್ದು ಶಾಲಾ ದಾಖಲೆ ಇಲ್ಲದವರು ನಿಗದಿತ ಪ್ರಾಧಿಕಾರಕ್ಕೆ ಅಫಿಡವಿಟ್ ಸಲ್ಲಿಕೆಯ ಮೂಲಕ ಪೌರತ್ವ ಸಾಬೀತುಪಡಿಸ ಬಹುದಾಗಿದೆ. ಆದರೆ ಅಕ್ರಮವಾಗಿ ನೆಲೆಸಿದವರನ್ನು ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ರಾಜ್ಯಗಳಲ್ಲಿ ಡಿಟೆನ್ಷನ್ ಸೆಂಟರ್ಗಳಿಗೆ ಕಳಿಸಲಾಗುವುದು. ನಂತರ ಕಾನೂನು ಪ್ರಕ್ರಿಯೆಯ ಮೂಲಕ ಅವರ ದೇಶಗಳಿಗೆ ಗಡಿಪಾರು ಮಾಡಲಾಗುತ್ತದೆ.
ವೆಬ್ಸೈಟ್ ಕ್ರಾö್ಯಶ್
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಲು ಕೇಂದ್ರ ಸರ್ಕಾರ ಸೋಮವಾರ ಸಂಜೆ ಅಧಿಸೂಚನೆ ಹೊರಡಿಸಿದ ಕೆಲವೇ ಕ್ಷಣಗಳಲ್ಲಿ ಸರ್ಕಾರದ ಇ-ಗೆಜೆಟ್ ವೆಬ್ಸೈಟ್ ಕ್ರ್ಯಾಶ್ ಅಗಿದೆ. ಸಿಎಎ ನಿಯಮಗಳನ್ನು ಇ-ಗೆಜೆಟ್ ವೆಬ್ಸೈಟ್ಗಳಲ್ಲಿ ಬಿಡುಗಡೆ ಮಾಡಲಾಗಿದೆ. ದೇಶಾದ್ಯಂತ ಏಕಾಏಕಿ ಲಕ್ಷಾಂತರ ಮಂದಿ ಈ ನಿಯಮಗಳನ್ನು ನೋಡಲು ಮುಗಿಬಿದ್ದ ಕಾರಣ ಒತ್ತಡ ತಾಳಲಾರದೆ ತಂತ್ರಾAಶ ಕಾರ್ಯನಿರ್ವಹಿಸುವುದು ನಿಲ್ಲಿಸಿದೆ. ನಂತರ ಸರಿ ಹೋಗಿದೆ.
ಸಿಎಎ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ದೆಹಲಿಯ ಶಾಹೀನ್ ಬಾಗ್ ಸೇರಿ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಲ್ಲೆಡೆ ಭದ್ರತೆ ಕೈಗೊಳ್ಳಲಾಗಿದೆ.