ಮಡಿಕೇರಿ, ಮಾ. ೧೦: ಐಕಾನಿಕ್ ಬ್ರದರ್ಸ್ ಕಾಂತೂರು ವತಿಯಿಂದ ಏಪ್ರಿಲ್ ೧೩ ಮತ್ತು ೧೪ ರಂದು ಮೂರ್ನಾಡು-ಕಾಂತೂರು ಗ್ರಾಮದ ಉಳುವಾರನ ಆಟದ ಮೈದಾನದಲ್ಲಿ ಮೂರನೇ ವರ್ಷದ ಕೊಡಗು ಗೌಡ ಕುಟುಂಬಗಳ ನಡುವಿನ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಮುಕ್ತ ಥ್ರೋಬಾಲ್ ಪಂದ್ಯಾಟವನ್ನು ಏರ್ಪಡಿಸಲಾಗಿದೆ. ಭಾಗವಹಿಸುವ ಕುಟುಂಬ ತಂಡಗಳು ತಾ. ೨೦ ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ: ೯೦೦೮೧೫೩೩೮೫, ೯೬೬೩೭೨೨೩೨೩, ಸಂಪರ್ಕಿಸಬಹುದಾಗಿದೆ.