ಭಾಗಮಂಡಲ, ಮಾ. ೧೦: ತಲಕಾವೇರಿಯಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ವರುಣನ ಕೃಪೆಗಾಗಿ ಪ್ರಾರ್ಥಿಸಿದರು. ಹವಾಮಾನ ವೈಪರಿತ್ಯದಿಂದಾಗಿ ಮಳೆ ಇಲ್ಲದೆ ಜೀವ ಸಂಕುಲ, ಪ್ರಾಣಿ ಪಕ್ಷಿ ಮನುಷ್ಯರಿಗೆ, ಕೃಷಿಯನ್ನೇ ನಂಬಿ ಬದುಕುವ ರೈತರಿಗೆ ತೀವ್ರ ಸಂಕಷ್ಟ ಎದುರಾಗಿದ್ದು, ಸಮಸ್ಯೆ ಪರಿಹಾರಕ್ಕಾಗಿ ಭಾಗಮಂಡಲದ ಭಕ್ತರು ತಲಕಾವೇರಿಯಲ್ಲಿ ಲೋಕ ಕಲ್ಯಾಣಕ್ಕಾಗಿ ಭಕ್ತಿ ಪೂರ್ವಕ ಪೂಜೆ ಸಲ್ಲಿಸಿ ಸಕಾಲದಲ್ಲಿ ಮಳೆ ಕರುಣಿಸಿ ಸಮೃದ್ಧಿ ಉಂಟು ಮಾಡುವಂತೆ ಕಾವೇರಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಕುದುಕುಳಿ ಭರತ್, ಸೂರ್ತಲೆ ಜಯಂತ್, ನಿಡ್ಯಮಲೆ ರವೀಂದ್ರ, ಕುದುಕುಳಿ ಅಶ್ವಥ್, ಕುದುಪಜೆ ಪ್ರಕಾಶ್, ಶಿರಕಜೆ ನಾಗೇಶ್, ಆಮೆ ಬಾಲಕೃಷ್ಣ ಕುದುಪಜೆ ರೋಷನ್, ವಾಸುದೇವ ನಿಡ್ಯಮಲೆ, ಬಾಲಜಿ ಹಾಗೂ ನಾಡಿನ ಭಕ್ತರು ಪಾಲ್ಗೊಂಡಿದ್ದರು. ವಸಂತ ಆಚಾರ್ ಕ್ಷೇತ್ರದಲ್ಲಿ ವಿಶೇಷ ಪೂಜೆ ನೆರವೇರಿಸಿದರು.