ಮಡಿಕೇರಿ, ಮಾ. ೯ : ಅಂತರರಾಷ್ಟಿçÃಯ ಮಹಿಳಾ ದಿನದ ಅಂಗವಾಗಿ ಇಂದು ಕೊಡವ ಮಹಿಳೆಯರ ಸಾಂವಿಧಾನಿಕ ಸಬಲೀಕರಣಕ್ಕಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಸಂಘಟನೆ ಧರಣಿ ಸತ್ಯಾಗ್ರಹ ನಡೆಸಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ನಡೆಸಿದ ಸಿಎನ್‌ಸಿ ಪ್ರಮುಖರು ಕೊಡವ ಮಹಿಳೆಯರು ಆದಿಮಸಂಜಾತ ಅತ್ಯಂತ ಸೂಕ್ಷö್ಮ ಕೊಡವ ಬುಡಕಟ್ಟು ಜನಾಂಗದ ವೀರ ಪರಂಪರೆ, ಸಂಸ್ಕೃತಿ ಮತ್ತು ಆಚಾರ ವಿಚಾರಗಳ ಉಳಿವಿಗಾಗಿ ನೀಡಿದ ಕೊಡುಗೆಗಳನ್ನು ಪ್ರತಿಪಾದಿಸಿದರು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮಾತನಾಡಿ ಈ ಬಾರಿಯ ಅಂತರರಾಷ್ಟಿçÃಯ ಮಹಿಳಾ ದಿನದ ಪ್ರಯುಕ್ತ ವಿಶ್ವಸಂಸ್ಥೆ ವಿಶ್ವ ಮಹಿಳೆಯರ ಹೂಡಿಕೆಯ ಪ್ರಗತಿಯನ್ನು ವೇಗಗೊಳಿಸುವ ಧ್ಯೇಯವಾಕ್ಯವನ್ನು ಘೋಷಿಸಿದೆ. ಇದು ಸಾಕಾರಗೊಳ್ಳಬೇಕಾದರೆ ವಿಶ್ವರಾಷ್ಟç ಸಂಸ್ಥೆಯ ಚಾರ್ಟರ್ ಅಡಿಯಲ್ಲಿ ನಮ್ಮ ರಾಷ್ಟçದ ಇತರ ಮಹಿಳೆಯರಿಗೆ ಸಮಾನವಾಗಿ ಕೊಡವ ಮಹಿಳೆಯರ ಸಾಂವಿಧಾನಿಕ ಸಬಲೀಕರಣ ಅಗತ್ಯ ಎಂದರು.

ಶಾಸನ ರೂಪಿಸುವ ಸಂಸ್ಥೆಗಳಲ್ಲಿ ಅಂದರೆ ಸಂಸತ್ತು, ರಾಜ್ಯ ಅಸೆಂಬ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರಸ್ತಾವಿತ ೩೩ ಪ್ರತಿಶತ ಸೀಟುಗಳಲ್ಲಿ ಕೊಡವ ಮಹಿಳೆಯರಿಗೆ ಪ್ರತ್ಯೇಕ ಆಂತರಿಕ ಕೋಟಾವನ್ನು ನೀಡಬೇಕು. ವಿಶೇಷ ಕಾಳಜಿಯಾಗಿ ಕಾಫಿ ಜಮೀನುಗಳ ೧೦ ಎಕರೆ ಗುತ್ತಿಗೆ ಆಸ್ತಿ ನೀಡುವ ಮೂಲಕ ಕೊಡವ ಮಹಿಳೆಯರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ ಅವರು, ಕೊಡವ ಬುಡಕಟ್ಟು ಜನಾಂಗದ ಮಹಿಳೆಯರು ಉತ್ತಮ ಕೃಷಿಕರು. ಆದರೆ ದುಃಖದ ಭಾಗವೆಂದರೆ ಅವರಲ್ಲಿ ಶೇ.೯೯ ರಷ್ಟು ಮಂದಿ ತಮ್ಮದೇ ಆದ ಕೃಷಿ ಭೂಮಿಯನ್ನು ಹೊಂದಿಲ್ಲ. ಈ ಕಾರಣದಿಂದ ಕೊಡವ ಮಹಿಳೆಯರಿಗೆ ಕೃಷಿಯ ಬಗ್ಗೆ ಅಪಾರ ಜ್ಞಾನವಿದ್ದರೂ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೊಡವ ಮಹಿಳೆಯರಿಗೆ ಕಡ್ಡಾಯವಾಗಿ ೫ ಎಕರೆ ಭೂಮಿಯನ್ನು ನೀಡಬೇಕು. ಏಕೆಂದರೆ ಅವರು ತಮ್ಮ ಸಾಂಸ್ಕöÈತಿಕ ಮೂಲವನ್ನು ಕೊಡಗಿನಲ್ಲಿ ಮಾತ್ರ ಹೊಂದಿದ್ದಾರೆ. ಈ ಕ್ರಮದಿಂದ ಆರ್ಥಿಕತೆಯಲ್ಲಿ ತೀವ್ರವಾದ ಮೇಲ್ಮುಖ ಬದಲಾವಣೆಯನ್ನು ತರಬಹುದು ಎಂದರು.

ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ತಕ್ಷಣವೇ ಜಾರಿಗೆ ಬರುವಂತೆ ಕೊಡವ ಮಹಿಳೆಯರಿಗೆ ರಾಜಕೀಯ-ಸಾಂವಿಧಾನಿಕ ಹಕ್ಕುಗಳೊಂದಿಗೆ ಅಧಿಕಾರ ನೀಡಬೇಕು ಎಂದು ಈ ಸಂದರ್ಭ ಒತ್ತಾಯಿಸಿದರು.

ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಟ್ಟಮಾಡ ಲಲಿತ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತಾ ಗಿರೀಶ್, ಅಜ್ಜಿನಿಕಂಡ ಇನಿತಾ ಮಾಚಯ್ಯ, ಮಂದಪAಡ ಗೊಂಬೆ ಮುತ್ತಣ್ಣ, ಅಪ್ಪನೆರವಂಡ ಶಾಂತ ಅಪ್ಪಚ್ಚ, ಪಟ್ಟಮಾಡ ಕುಶ, ಅಳ್ಮಂಡ ಜೈ, ಅಜ್ಜಿಕುಟ್ಟಿರ ಲೋಕೇಶ್, ಕಾಂಡೇರ ಸುರೇಶ್, ಪುಲ್ಲೇರ ಕಾಳಪ್ಪ, ಚೆಂಬAಡ ಜನತ್, ಅರೆಯಡ ಗಿರೀಶ್, ಕಿರಿಯಮಾಡ ಶರೀನ್, ಮಣವಟ್ಟಿರ ಚಿಣ್ಣಪ್ಪ, ಕಾಟುಮಣಿಯಂಡ ಉಮೇಶ್, ಚೊಳಪಂಡ ನಾಣಯ್ಯ, ನಂದಿನೆರವAಡ ಅಚ್ಚಯ್ಯ, ಮಂದಪAಡ ಮನೋಜ್, ಪುಟ್ಟಿಚಂಡ ದೇವಯ್ಯ, ನಂದಿನೆರವAಡ ಅಪ್ಪಯ್ಯ, ಕೂಪದಿರ ಸಾಬು, ನಂದಿನೆರವAಡ ಅಯ್ಯಣ್ಣ, ಅಳ್ಮಂಡ ನೆಹರು, ಮಂದಪAಡ ದೀಪು, ಕೋಡಿರ ರತನ್, ಮಂದಪAಡ ದೇವಯ್ಯ ಧರಣಿಯಲ್ಲಿ ಪಾಲ್ಗೊಂಡಿದ್ದರು. ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.