ಮಡಿಕೇರಿ, ಮಾ. ೯: ಸೇನಾ ಜಿಲ್ಲೆ ಖ್ಯಾತಿಯ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವೀರ ಸೇನಾನಿ, ಪದ್ಮಭೂಷಣ, ಸೈನಿಕರ ಸೈನಿಕ ಜನರಲ್ ಕೊಡಂದೇರ ಎಸ್. ತಿಮ್ಮಯ್ಯ ಅವರ ಪ್ರತಿಮೆಯ ಮರುಸ್ಥಾಪನೆ ನಿನ್ನೆ ಅದ್ಧೂರಿಯ ಸ್ವಾಗತ- ಜಯಘೋಷದ ನಡುವೆ ಗೌರವಾಧರಗಳಿಂದ ನೆರವೇರಿತು. ಕಳೆದ ಆಗಸ್ಟ್ ೨೧ರಂದು ಜನರಲ್ ತಿಮ್ಮಯ್ಯ ವೃತ್ತದಲ್ಲಿದ್ದ ತಿಮ್ಮಯ್ಯ ಅವರ ಪ್ರತಿಮೆಗೆ ಆಕಸ್ಮಿಕವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿಯಾಗಿದ್ದ ಪರಿಣಾಮ ಕಳೆದ ೫೦ ವರ್ಷಗಳಿಂದ ಈ ಸ್ಥಳದ ಆಕರ್ಷಣೆಯಾಗಿದ್ದ ಪ್ರತಿಮೆಗೆ ಹಾನಿಯುಂಟಾಗಿ ಸ್ಥಳದಿಂದ ಮರೆಯಾಗಿತ್ತು. ಇದೀಗ ಏಳು ತಿಂಗಳ ಅಂತರದಲ್ಲಿ ಈ ಪ್ರತಿಮೆಗೆ ಮರು ಕಾಯಕಲ್ಪ ನೀಡಿ, ಇನ್ನಷ್ಟು ಆಕರ್ಷಣೀಯವಾಗಿಸುವುದರೊಂದಿಗೆ, ಇದೀಗ ಇನ್ನಷ್ಟು ವ್ಯವಸ್ಥಿತವಾಗಿ ಪರಿವರ್ತಿಸಲಾಗಿರುವ ಇದೇ ವೃತ್ತದಲ್ಲಿ ಮರು ಅಳವಡಿಕೆ ಮಾಡುವುದರ ಮೂಲಕ ವಿಶ್ವಖ್ಯಾತಿಯ ಸೇನಾನಿಗೆ ಗೌರವ ಸಲ್ಲಿಸಲಾಗಿದೆ.
ನಿನ್ನೆ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತ, ನಗರಸಭೆ, ವಿವಿಧ ಸಂಘ-ಸAಸ್ಥೆಗಳು, ನಿವೃತ್ತ ಸೇನಾಧಿಕಾರಿಗಳು, ಮಾಜಿ ಯೋಧರು, ಸೇರಿದಂತೆ ಜಮಾಯಿಸಿದ್ದ ತಿಮ್ಮಯ್ಯ ಅವರ ಅಭಿಮಾನಿಗಳ ಸಮ್ಮುಖದಲ್ಲಿ ಪ್ರತಿಮೆಯ ಮರು ಅಳವಡಿಕೆ ಕಾರ್ಯ ಸುಸೂತ್ರವಾಗಿ ನೆರವೇರಿತು. ಎಲ್ಲರ ಸಮ್ಮುಖದಲ್ಲಿ ನಿವೃತ್ತ ಏರ್ಮಾರ್ಷಲ್ ಕೆ.ಸಿ. ಕಾರ್ಯಪ್ಪ, ಈ ಹಿಂದೆ ಪ್ರತಿಮೆ ಸ್ಥಾಪನೆಗೆ ಕಾರಣೀಭೂತರಾಗಿರುವ ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಇನ್ನಿತರ ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭ ಭಾರತ್ ಮಾತಾಕಿ ಜೈ, ಜನರಲ್ ತಿಮ್ಮಯ್ಯ ಅಮರ್ ರಹೇ... ವಂದೇ ಮಾತರಂ ಘೋಷಣೆಗಳು ಮೊಳಗಿದವು. ಪೊಲೀಸ್ ಬ್ಯಾಂಡ್, ಎನ್.ಸಿ.ಸಿ., ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಗೌರವ ಸಹಿತವಾಗಿ ನಗರದ ಹೃದಯ ಭಾಗವಾಗಿರುವ ಈ ಸ್ಥಳದಲ್ಲಿ ಜನರಲ್ ತಿಮ್ಮಯ್ಯ ಅವರು ಪ್ರತಿಮೆ ರೂಪದಲ್ಲಿ ಮತ್ತೆ ತಲೆ ಎತ್ತಿ ನಿಂತಿದ್ದು, ಯುವ ಜನಾಂಗಕ್ಕೆ ಪ್ರೇರೇಪಣೆಯಾಗಿದ್ದಾರೆ. ಪ್ರತಿಮೆಯನ್ನು ಮಡಿಕೇರಿಯ ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿ ಸಾರ್ವತ್ರಿಕವಾಗಿ, ತಳಿಯತಕ್ಕಿಬೊಳಕ್, ಕೊಂಬ್ಕೊಟ್ಟ್ ವಾಲಗ, ದುಡಿಕೊಟ್ಟ್ ಪಾಟ್ ಸಹಿತವಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆ, ಸಮಾಜ, ಮಜಿ ಯೋಧರು ಸ್ವಾಗತಿಸಿ ಅಲ್ಲಿಂದ ಮೆರವಣಿಗೆಯ ಮೂಲಕ ಜನರಲ್ ತಿಮ್ಮಯ್ಯ ವೃತ್ತಕ್ಕೆ ಆಗಮಿಸಿ ಅಲ್ಲಿ ಕ್ರೇನ್ನ ಸಹಾಯದೊಂದಿಗೆ ಮರು ಸ್ಥಾಪನೆ ಮಾಡಲಾಯಿತು.
(ಮೊದಲ ಪುಟದಿಂದ) ನೇತೃತ್ವ ವಹಿಸಿದ್ದ ಮಡಿಕೇರಿ ಕೊಡವ ಸಮಾಜದವರು, ವಿವಿಧ ಕೇರಿಗಳ ಪದಾಧಿಕಾರಿಗಳು ಸಾಂಪ್ರದಾಯಿಕ ಧಿರಿಸಿನಲ್ಲಿ ಪಾಲ್ಗೊಂಡಿದ್ದರು. ಪ್ರತಿಮೆಯನ್ನು ಲಾರಿಯಿಂದ ಇಳಿಸಿದ ಸಂದರ್ಭ ವಾದ್ಯ ತಂಡದ ಮಣಿ ಹಾಗೂ ಬಳಗದವರಿಂದ ಕೇಳಿಬಂದ ‘ಕೊಡಗ್ರ ವೀರ - ಗಂಡೆದೆಶೂರ... ಕಾಟಿರೊ ಇವಂಗ್ ಇಂದ್ ಪೊನ್ನ್ ಬೊಳಕ್ನ’ ಎಂಬ ಮೋರಿ ವಾದ್ಯ ಅರ್ಥಗರ್ಭಿತವೆನಿಸುವಂತೆ ಮಾಡಿತ್ತು.
ಮೈಸೂರಿನ ಶಿಲ್ಪಕಲಾ ಅಕಾಡೆಮಿಯಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಮೂಲಕ ಮರು ಕಾಯಕಲ್ಪ ಕಂಡಿದ್ದ ಪ್ರತಿಮೆಯನ್ನು ಗುರುವಾರ ರಾತ್ರಿ ಮೈಸೂರು ಕೊಡವ ಸಮಾಜದ ಆವರಣಕ್ಕೆ ಸಾಗಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಮೈಸೂರು ಕೊಡವ ಸಮಾಜದ ನೆಲ್ಲಕ್ಕಿ ನಡುಬಾಡೆಯಲ್ಲಿ ಮಡಿಕೇರಿಯಿಂದ ತೆರಳಿದ್ದವರೊಂದಿಗೆ ಸಂಸದ ಪ್ರತಾಪ್ ಸಿಂಹ, ಮೈಸೂರು ಕೊಡವ ಸಮಾಜದ ಅಧ್ಯಕ್ಷ ಪೊಂಜಾAಡ ಗಣಪತಿ ಹಾಗೂ ತಂಡ, ಮಾಜಿ ಯೋಧರು, ಕೊಡವ ಸ್ಟೂಡೆಂಟ್ಸ್ ಅಸೋಸಿಯೇಷನ್, ಸ್ಥಳೀಯ ನಗರ ಪಾಲಿಕಾ ಸದಸ್ಯ ಮಾಳೇಟಿರ ಸುಬ್ಬಯ್ಯ ಸೇರಿದಂತೆ ಇತರರು ಅಕ್ಕಿ ಹಾಕಿ ಪ್ರಾರ್ಥಿಸುವ ಮೂಲಕ ಮೈಸೂರಿನಿಂದ ಮಡಿಕೇರಿಯತ್ತ ಪ್ರಯಾಣ ಬೆಳೆಸಲಾಯಿತು. ಪ್ರತಿಮೆ ಹೊತ್ತ ಲಾರಿಯೊಂದಿಗೆ, ತಿಮ್ಮಯ್ಯ ಅವರ ಬದುಕಿನ ಯಶೋಗಾಥೆಯ ಪ್ರತಿಬಿಂಬ, ದೇಶಭಕ್ತಿಗೀತೆ ಹಾಗೂ ಜಯಘೋಷದೊಂದಿಗೆ, ಮೆರವಣಿಗೆ ಸಾಗಿತು. ಮೆರವಣಿಗೆಗೆ ಕೊಡಗು ಜಾವಾ ಯಜ್ಡಿ ಮೋಟಾರ್ ಸೈಕಲ್ ಕ್ಲಬ್ನವರು ಮುಂಚೂಣಿಯಲ್ಲಿ ಬೈಕ್ ಜಾಥಾದೊಂದಿಗೆ ಸಾಥ್ ನೀಡಿದರು. ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿನಿಂದ ಬಿಳಿಕೆರೆ ತನಕ ಆಗಮಿಸಿ ಬೀಳ್ಕೊಟ್ಟರು. ಈ ಮುನ್ನ ತಿಮ್ಮಯ್ಯ ಭಾವಚಿತ್ರಕ್ಕೆ ಸಂಸದ ಪ್ರತಾಪ್ ಸಿಂಹ ಅವರು ಮಾಲಾರ್ಪಣೆ ಮಾಡಿ ಮಾತನಾಡಿದರು.ಕೊಡಗಿನ ಗಡಿಯಾದÀ ಕೊಪ್ಪ- ಕುಶಾಲನಗರದಲ್ಲಿ ಪ್ರತಿಮೆಯನ್ನು ಅದ್ಧೂರಿ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ, ಕೊಡವ ಸಮಾಜದ ಪ್ರಮುಖರು, ಮಾಜಿ ಯೋಧರು, ಪುರಸಭೆ ಪ್ರಮುಖರು, ಇತರ ಸಂಘ- ಸಂಸ್ಥೆಗಳವರು, ಕೂಡಿಗೆ ಸೈನಿಕ ಶಾಲೆ ಪ್ರಮುಖರು ಗೌರವ ಸಲ್ಲಿಸಿ ಬರಮಾಡಿಕೊಂಡರು. ಇಲ್ಲಿ ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಮಂಡೇಪAಡ ಬೋಸ್ ಮೊಣ್ಣಪ್ಪ, ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್. ರಾಜಶೇಖರ್, ಡಿ.ವೈ.ಎಸ್ಪಿ ಗಂಗಾಧರಪ್ಪ, ಮಾಜಿ ಸೈನಿಕರ ಸಂಘ ಹಾಗೂ ಇತರ ಸಂಘ - ಸಂಸ್ಥೆಯವರು ಪಾಲ್ಗೊಂಡಿದ್ದರು.ಪ್ರತಿಮೆಯನ್ನು ಹುಣಸೂರಿನಲ್ಲಿ ಅಲ್ಲಿನ ಕೊಡವ ಸಮಾಜದ ಅಧ್ಯಕ್ಷ ಮೊಣ್ಣಂಡ ಚರ್ಮಣ ಹಾಗೂ ಇತರರು, ಮಾಜಿ ಯೋಧರು, ಪೊಲೀಸರು, ವಿವಿಧ ಸಂಘ- ಸಂಸ್ಥೆಯವರು ಅರಸು ಪ್ರತಿಮೆ ಬಳಿ ಪುಷ್ಪನಮನದೊಂದಿಗೆ ಸ್ವಾಗತಿಸಿ, ಅಲ್ಲಿಂದ ಕೊಡಗಿನತ್ತ ಬೀಳ್ಕೊಟ್ಟರು.ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಅದ್ಧೂರಿ ಸ್ವಾಗತ, ಗೌರವ ಸಲ್ಲಿಸಿ ಮಡಿಕೇರಿಯತ್ತ ಬೀಳ್ಕೊಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ಕುಮಾರ್, ಸದಸ್ಯರುಗಳಾದ ಶಾಂತಿ, ವಸಂತಿ, ಪಿ.ಎಫ್. ಸಬಾಸ್ಟೀನ್, ಮಂಜುನಾಥ್, ಸುಂಟಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಡಿ. ನರಸಿಂಹ ಅವರುಗಳು ಮಾಲಾರ್ಪಣೆ ಮಾಡಿ ಜಯಘೋಷಗಳನ್ನು ಕೂಗಿದರು.
ಈ ಸಂದರ್ಭ ಶ್ರೀರಾಮ ಸೇವಾ ಟ್ರಸ್ಟ್ನ ಕಾರ್ಯದರ್ಶಿ ಅಶೋಕ್ ಶೇಟ್, ಸುಂಟಿಕೊಪ್ಪ ಹೋಬಳಿ ಕಸಾಪ ಮಾಜಿ ಅಧ್ಯಕ್ಷ ಎಂ.ಎಸ್.ಸುನಿಲ್, ಸುರೇಶ್ ಗೋಪಿ, ಧನು ಕಾವೇರಪ್ಪ, ಬಿಕೆ. ಮೋಹನ, ಆಟೋ ಚಾಲಕರ ಸಂಘದ ಅಧ್ಯಕ್ಷ ಸಿ.ಸಿ.ಸುನಿಲ್, ಬಾಲ ವಿಜ್ಞಾನಿ ಪ್ರಶಸ್ತಿ ಪುರಸ್ಕೃತೆ ಎಂ.ಎಸ್.ಶ್ರೀಶಾ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು.ಮಡಿಕೇರಿ ಕಾರ್ಯಪ್ಪ ವೃತ್ತ
ಮಡಿಕೇರಿಯ ಕಾರ್ಯಪ್ಪ ವೃತ್ತದಲ್ಲಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಹಾಗೂ ಸದಸ್ಯರುಗಳು, ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ಗೌಡ, ಎಂ.ಎಲ್.ಸಿ. ಸುಜಾ ಕುಶಾಲಪ್ಪ, ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಹಾಗೂ ಸಮಾಜದ ಮತ್ತು ವಿವಿಧ ಕೇರಿಗಳ ಪ್ರಮುಖರು, ಡಿ.ಸಿ. ವೆಂಕಟ್ ರಾಜಾ, ಎಸ್ಪಿ ರಾಮರಾಜನ್, ಫೀ.ಮಾ. ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂನವರು, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಸೇರಿದಂತೆ ಮಾಜಿ ಯೋಧರು, ಇತರ ಸಂಘ- ಸಂಸ್ಥೆಗಳವರು, ಸಾರ್ವಜನಿಕರು ಹೃದಯಸ್ಪರ್ಶಿ ನಮನದ ಸ್ವಾಗತದೊಂದಿಗೆ ಬರಮಾಡಿಕೊಂಡರು. ಬಳಿಕ ತಳಿಯತಕ್ಕಿಬೊಳಕ್, ಕೊಂಬ್ಕೊಟ್ಟ್ರ ವಾಲಗ, ದುಡಿಕೊಟ್ಟ್ ಪಾಟ್, ಪೊಲೀಸ್ ಬ್ಯಾಂಡ್, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ಹಾಗೂ ಕೊಡಗು ವಿದ್ಯಾಲಯದ ಎನ್.ಸಿ.ಸಿ, ಸ್ಕೌಟ್ - ಗೈಡ್ಸ್ ತಂಡ, ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಮತ್ತಿತರರು ಮೆರವಣಿಗೆಯಲ್ಲಿ ಪ್ರತಿಮೆ ಅನಾವರಣ ಸ್ಥಳಕ್ಕೆ ಮೆರವಣಿಗೆ ಮೂಲಕ ಆಗಮಿಸಿ, ಅಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮ, ಬಳಿಕ ಸಭಾ ಕಾರ್ಯಕ್ರಮ ಜರುಗಿತು. ನೆರೆದಿದ್ದವರು ಪುಷ್ಪಾರ್ಚನೆಯೊಂದಿಗೆ ಗೌರವ ಸಮರ್ಪಿಸಿದರು.
ಮೈಸೂರಿನಿಂದ ಪ್ರತಿಮೆಯೊಂದಿಗೆ, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ, ಪ್ರತಿಮೆ ಅನಾವರಣಕ್ಕೆ ಶ್ರಮಿಸಿದ ಚೊಟ್ಟೆರ ಸಂಜು ಹಾಗೂ ಸ್ನೇಹಿತರು ಆಗಮಿಸಿದರು. ಚೋಕಿರ ಅನಿತಾ ಅವರು ದಾರಿಯುದ್ದಕ್ಕೂ ತಿಮ್ಮಯ್ಯ ಅವರ ಸೇವೆ- ಸಾಧನೆಯ ಬಗ್ಗೆ ಮಾಹಿತಿ ಒದಗಿಸಿದರು.ವೀರ ಸೇನಾನಿಯ ಪ್ರತಿಮೆ ಅನಾವರಣಗೊಳಿಸಿದ ಏರ್ ಮಾರ್ಷಲ್ (ನಿ) ನಂದಾ ಕಾರ್ಯಪ್ಪ ಅವರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಜನರಲ್ ಕೆ.ಎಸ್. ತಿಮ್ಮಯ್ಯ ಅವರು ತಮ್ಮ ಸೈನ್ಯದ ಅತ್ಯಪೂರ್ವವಾದ ಕಾರ್ಯ ವೈಖರಿಗಳಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗೌರವಾದರಗಳನ್ನು ಪಡೆದ ಮಹಾನ್ ಸೇನಾನಿಯಾಗಿದ್ದಾರೆ ಎಂದರು. ಜನರಲ್ ತಿಮ್ಮಯ್ಯ ಅವರು ಬದುಕಿನುದ್ದಕ್ಕೂ ‘ನಾನು ಭಾರತೀಯ ಎನ್ನುವುದು ಮೊದಲು. ಉಳಿದೆಲ್ಲವೂ ನಂತರದ್ದು’ ಎನ್ನುವ ಮಹಾನ್ ಚಿಂತನೆ ಹೊಂದಿದ್ದರು. ಅಂತಹ ಉದಾತ್ತ ಚಿಂತನೆ ಯುವ ಸಮೂಹದ್ದಾಗಿರಲಿ ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.
ವೀರಸೇನಾನಿ ಜನರಲ್ ಕೆ.ಎಸ್ ತಿಮ್ಮಯ್ಯ ಅವರ ಉದಾತ್ತ ಚಿಂತನೆಗಳು ಯುವ ಸಮೂಹಕ್ಕೆ ಪ್ರೇರಣಾದಾಯವಾಗಿರಲಿ ಎನ್ನುವ ಚಿಂತನೆಗಳಡಿ ೧೯೭೩ ರಲ್ಲಿ ಅಂದಿನ ಪುರಸಭೆಯ ಅಧ್ಯಕ್ಷರಾಗಿದ್ದ ಎಂ.ಸಿ. ನಾಣಯ್ಯ ಅವರು ವೀರಸೇನಾನಿಯ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದರೆಂದು ಸ್ಮರಿಸಿದರು.
ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮೇ. ಜ.ಬಿ.ಎ. ಕಾರ್ಯಪ್ಪ ಮಾತನಾಡಿ, ಜ.ತಿಮ್ಮಯ್ಯ ಅವರೊಬ್ಬ ಮಹಾನ್ ಸೈನಿಕರಾಗಿದ್ದವರೆಂದು ಬಣ್ಣಿಸಿದರು.
ಮಾಜಿ ಸಚಿವರಾದ ಎಂ.ಸಿ. ನಾಣಯ್ಯ ಅವರು ಮಾತನಾಡಿ, ೧೯೭೩ ರಲ್ಲಿ ಜ.ತಿಮ್ಮಯ್ಯ ಅವರ ಪ್ರತಿಮೆಯನ್ನು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರು ಅನಾವರಣಗೊಳಿಸಿದ್ದು, ಆ ಸಂದರ್ಭ ಕೇಂದ್ರ ಸಚಿವರಾಗಿದ್ದ ಎಸ್.ಎಂ. ಕೃಷ್ಣ ಪಾಲ್ಗೊಂಡುದನ್ನು ಸ್ಮರಿಸಿದರಲ್ಲದೆ, ಅಂದು ರಾಜ್ಯ ಸರ್ಕಾರ ಅಸ್ತ್ತಿತ್ವದಲ್ಲೆ ಇರಲಿಲ್ಲ. ಅಂತಹ ಸಂದರ್ಭವೂ ಅಂದಿನ ರಾಜ್ಯಪಾಲ ಧರ್ಮವೀರ ಅವರು ಪ್ರತಿಮೆ ಸ್ಥಾಪನೆಗೆ ೧೦ ಸಾವಿರ ನೆರವನ್ನು ನೀಡಿದ್ದನ್ನು ಸ್ಮರಿಸಿ, ಪ್ರತಿಮೆಯನ್ನು ಅಂದು ಮುಂಬೈನ ಶಿಲ್ಪಿ ವಾಗ್ ಅವರು ೩೦ ಸಾವಿರ ರೂ.ಗಳಿಗೆ ನಿರ್ಮಿಸಿಕೊಟ್ಟುದನ್ನು ಸ್ಮರಿಸಿದರು.
ಇದೇ ಸಂದರ್ಭ ಜ.ತಿಮ್ಮಯ್ಯ ಅವರ ತಾಯಿ ಸೀತವ್ವ ಅವರು ಆ ಕಾಲದಲ್ಲೆ ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಕುಡಿಯುವ ನೀರಿನ ಉದ್ದೇಶಕ್ಕಾಗಿ ಇಂದಿನ ಮಹದೇವಪೇಟೆ ವಿಭಾಗದ ೧೭ ಎಕರೆ ಜಾಗವನ್ನು ಉದಾರವಾಗಿ ನೀಡಿದ್ದರಲ್ಲದೆ, ಗೌಳಿಬೀದಿಯ ಸುಮಾರು ೧೦ ಎಕರೆ ಜಾಗವನ್ನು ಅದೇ ಸಂದರ್ಭ ನೀಡಿ ಧರ್ಮಬೀರುವಾಗಿದ್ದರೆಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಮಾತನಾಡಿ, ಜ.ತಿಮ್ಮಯ್ಯ ಅವರು ದೇಶಕ್ಕೆ ಕೀರ್ತಿ ತಂದ ವೀರ ಸೇನಾನಿಯಾಗಿದ್ದಾರೆ. ಅವರ ತತ್ವ, ಮಾರ್ಗದರ್ಶನ ನಮ್ಮೆಲ್ಲರಿಗೂ ಆದರ್ಶವಾಗಿದೆಯೆಂದರು.
ಜನರಲ್ ತಿಮ್ಮಯ್ಯ ವೃತ್ತವಾಗಿ ಪರಿಗಣಿಸಿ- ಶಾಸಕ ಎ.ಎಸ್. ಪೊನ್ನಣ್ಣ ಅವರು ಮಾತನಾಡಿ, ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಇರುವ ಈ ವೃತ್ತ ವೀರ ಸೇನಾನಿಯ ಹೆಸರಿನಲ್ಲೇ ಕರೆಯಲ್ಪಡುವಂತಾಗಬೇಕು ಎಂದು ಮನವಿ ಮಾಡಿದರು. ವಿಧಾನಸಭೆಯ ಮಾಜಿ ಅಧ್ಯಕ್ಷರಾದ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ದೇಶ ಕಂಡ ಅಪ್ರತಿಮ ವೀರ ಸೇನಾನಿ ಜ.ತಿಮ್ಮಯ್ಯ ಅವರ ಪ್ರತಿಮೆ ಸ್ಥಾಪನೆಯೊಂದಿಗೆ, ಈ ವೃತ್ತ ಅವರ ಹೆಸರಿನಲ್ಲೆ ಗುರುತಿಸಲ್ಪಡುವ ನಿಟ್ಟಿನಲ್ಲಿ ನಗರಸಭೆ ಮತ್ತೊಮ್ಮೆ ನಿರ್ಣಯ ಕೈಗೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ವೀರಸೇನಾನಿಯ ಪ್ರತಿಮೆ ಮರು ಸ್ಥಾಪನೆಗೆ ಕಾರಣರಾದವರನ್ನು ಸ್ಮರಿಸಿದರಲ್ಲದೆ, ವೀರಸೇನಾನಿ ಜ.ತಿಮ್ಮಯ್ಯ ಅವರ ಪ್ರತಿಮೆ ಅನಾವರಣದ ಮೂಲಕ ಅವರ ಜೀವನ ಸಂದೇಶಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯನ್ನು ನೀಡುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ಜ.ತಿಮ್ಮಯ್ಯ ಅವರ ಪ್ರತಿಮೆಯನ್ನು ಸುಮಾರು ೩.೫೦ ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಪಡಿಸಿ ಸಜ್ಜುಗೊಳಿಸಲಾಗಿದ್ದು, ವೃತ್ತವನ್ನು ೧೩.೫೦ ಲಕ್ಷ ವೆಚ್ಚದಲ್ಲಿ ಮರು ನಿರ್ಮಿಸಲಾಗಿದೆ. ಭವಿಷ್ಯದ ದಿನಗಳಲ್ಲಿ ಈ ವೃತ್ತದಲ್ಲಿ ವಾಹನ ದಟ್ಟಣೆೆಗಳಿಂದ ತೊಂದರೆಯಾಗದ ರೀತಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರ ಜೊತೆಯಲ್ಲೆ ಸಿಸಿ ಟಿವಿಗಳ ಅಳವಡಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತAಡ ಸುಬ್ಬಯ್ಯ ಅವರು ಮಾತನಾಡಿದರು. ಮಾಜಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಎಸ್ಪಿ ಕೆ. ರಾಮರಾಜನ್ ಉಪಸ್ಥಿತರಿದ್ದರು.
ನಗರಸಭೆ ಅಧ್ಯಕ್ಷರಾದ ನೆರವಂಡ ಅನಿತಾ ಪೂವಯ್ಯ ಅವರು ಸ್ವಾಗತಿಸಿದರು, ಮಾದೇಟಿರ ಬೆಳ್ಯಪ್ಪ ಹಾಗೂ ಅನಿತಾ ನಿರೂಪಿಸಿದರು, ಕಾವ್ಯ ಪ್ರಾರ್ಥಿಸಿದರು, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮಂಡುವAಡ ಮುತ್ತಪ್ಪ ವಂದಿಸಿದರು.