ಮಡಿಕೇರಿ, ಮಾ. ೧೦: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ನದಿ ಹಾಗೂ ನದಿ ಮೂಲಗಳಿಂದ ಅನ್ಯಬಳಕೆಗೆ ನೀರು ಬಳಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶಕ್ಕೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತಗೊಳ್ಳುತ್ತಿವೆ. ನೀರಿನ ಅಭಾವ ಎದುರಾಗುತ್ತಿರುವ ಕಾರಣವನ್ನು ಉಲ್ಲೇಖಿಸಿ ಜಿಲ್ಲೆಯಲ್ಲಿ ಅನ್ಯಬಳಕೆಗೆ ನೀರು ಬಳಸುವುದನ್ನು ನಿಷೇಧ ಮಾಡಲಾಗಿದೆ ಎಂದು ಕಳೆದೆರಡು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಆದೇಶ ಮಡಿಕೇರಿ, ಮಾ. ೧೦: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ನದಿ ಹಾಗೂ ನದಿ ಮೂಲಗಳಿಂದ ಅನ್ಯಬಳಕೆಗೆ ನೀರು ಬಳಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶಕ್ಕೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತಗೊಳ್ಳುತ್ತಿವೆ. ನೀರಿನ ಅಭಾವ ಎದುರಾಗುತ್ತಿರುವ ಕಾರಣವನ್ನು ಉಲ್ಲೇಖಿಸಿ ಜಿಲ್ಲೆಯಲ್ಲಿ ಅನ್ಯಬಳಕೆಗೆ ನೀರು ಬಳಸುವುದನ್ನು ನಿಷೇಧ ಮಾಡಲಾಗಿದೆ ಎಂದು ಕಳೆದೆರಡು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಆದೇಶ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆಯನ್ನೂ ನೀಡಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಬಿಜೆಪಿಯ ನೂತನ ಜಿಲ್ಲಾ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು, ಬರ ಪರಿಸ್ಥಿತಿ ಎದುರಿಸಲು ರಾಜ್ಯ ಸರಕಾರ ವಿಫಲವಾಗುತ್ತಿದೆ. ಈ ಹಿಂದೆ ರಾಜ್ಯದ ರೈತರ ಹಿತವನ್ನು ಗಮನಿಸದೆ ತಮಿಳುನಾಡುವಿಗೆ ವಿರೋಧದ ನಡುವೆಯೂ ನೀರು ಹರಿಸಿದ್ದು, ಹೆಚ್ಚು ಸಮಸ್ಯೆ ಎದುರಾಗಿದೆ. ಕೊಡಗಿನಲ್ಲಿ ಬೆಳೆಗಾರರು ನದಿ, ತೊರೆ, ಕೆರೆಗಳಿಂದ ಕಾಫಿ ತೋಟಗಳಿಗೆ ನೀರು ಹಾಯಿಸುವುದನ್ನು ನಿಷೇಧಿಸಿರುವ ಜಿಲ್ಲಾಧಿಕಾರಿಗಳ ಕ್ರಮ ಸರಿಯಲ್ಲ. ಕೊಡಗಿನಲ್ಲಿ ಕಾಫಿ ಬೆಳೆಗಾರರು ಇಡೀ ವರ್ಷದಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಮಾತ್ರ ನೀರನ್ನು ತೋಟಕ್ಕೆ ಬಳಸುತ್ತಾರೆ. ಉಳಿದ ೧೧ ತಿಂಗಳ ಅವಧಿಯಲ್ಲಿ ಕಾವೇರಿ ಸೇರಿದಂತೆ ವಿವಿಧ ನದಿಗಳ ನೀರು ಹೊರ ಜಿಲ್ಲೆ - ರಾಜ್ಯಗಳಿಗೆ ಹರಿದುಹೋಗುತ್ತದೆ. ಕಾಫಿ ಬೆಳೆಗೆ ಈ ಅವಧಿಯಲ್ಲಿ ನೀರು ಒದಗಿಸದಿದ್ದರೆ ಮುಂದಿನ ವರ್ಷದ ಫಸಲಿನ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಿ ಆರ್ಥಿಕತೆಯೇ ಬುಡಮೇಲಾಗಲಿದೆ. ಕೇವಲ ಬೆಳೆಗಾರರು ಮಾತ್ರವಲ್ಲದೆ, ಅಪಾರ ಸಂಖ್ಯೆಯಲ್ಲಿರುವ ಕಾರ್ಮಿಕ ವರ್ಗವೂ ಕೂಡ ಸಮಸ್ಯೆಗೆ ಸಿಲುಕು ವುದು ಖಚಿತ. ಈ ಕಾರಣದಿಂದಾಗಿ ಕೂಡಲೇ ಆದೇಶ ಹಿಂಪಡೆಯಬೇಕು. ತಪ್ಪಿದಲ್ಲಿ ಕಾಫಿ ಬೆಳೆಗಾರರಿಗೆ ಎಕರೆಗೆ ಇಂತಿಷ್ಟು ಎಂದು ಸರಕಾರದಿಂದ ಪರಿಹಾರ ನೀಡಬೇಕು ಹಾಗೂ ಬೇಸಿಗೆಯ ನೀರಿನ ಹಾಹಾಕಾರ ನೀಗಿಸಲು ಪರ್ಯಾಯ ಕ್ರಮಕೈಗೊಳ್ಳಬೇಕು ಎಂಬುದಾಗಿ ಆಗ್ರಹಿಸಿದ್ದಾರೆ. ಈಗಾಗಲೇ ವಿವಿಧ ಬೆಳೆಗಾರ ಸಂಘಟನೆಗಳು, ಬೆಳೆಗಾರರು ಕೂಡ ನಿಷೇಧದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದೂ ವರದಿಯಾಗಿದೆ.

೩ಏಳನೇ ಪುಟಕ್ಕೆ