ಗೋಣಿಕೊಪ್ಪಲು, ಮಾ. ೧೦: ಕಳೆದ ೮ ವರ್ಷಗಳಿಂದ ಹುದಿಕೇರಿ ಗ್ರಾಮ ಪಂಚಾಯಿತಿಯ ಹೈಸೊಡ್ಲೂರು ಗ್ರಾಮದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ೬೨ ಕುಟುಂಬಗಳ ಸದಸ್ಯರ ಸಮಸ್ಯೆಗೆ ಪರಿಹಾರÀ ಕಂಡುಕೊಳ್ಳುವ ನಿಟ್ಟಿನಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮುಂದಾಳತ್ವದಲ್ಲಿ ನೊಂದ ನಿವಾಸಿಗಳು ಹಾಗೂ ಬೆಳೆಗಾರರ ಸಭೆ ನಡೆಯಿತು.
ಪೊನ್ನಂಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ನಡೆದ ಸಭೆಯಲ್ಲಿ ಶಾಸಕ ಪೊನ್ನಣ್ಣ ಹೈಸೊಡ್ಲೂರು ಹಾಗೂ ಕುರ್ಚಿ ಗ್ರಾಮದಲ್ಲಿ ನೆಲೆಸಿರುವ ನೂರಾರು ಗುಡಿಸಲು ವಾಸಿಗಳ ಸಮಸ್ಯೆ ಆಲಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ತಹಶೀಲ್ದಾರ್ ಪ್ರಶಾಂತ್, ಸರ್ವೆ ಅಧಿಕಾರಿ ಬಾನಂಡ ಅರುಣ್ ವಿವಾದಿತ ಜಾಗಕ್ಕೆ ಇನ್ನೂ ಕೂಡ ಸರ್ವೆ ಕಾರ್ಯ ಕೈಗೊಂಡಿಲ್ಲ. ಹಲವು ಸಂದರ್ಭಗಳಲ್ಲಿ ಸರ್ವೆಗೆ ಮುಂದಾದರೂ ಕೊನೆಗಳಿಗೆಯಲ್ಲಿ ಸರ್ವೆ ನಡೆಸಲು ಸಮಸ್ಯೆ ಎದುರಾಗಿತ್ತು. ಇದರಿಂದ ಜಾಗದ ಹದ್ದುಬಸ್ತನ್ನು ಕಂಡು ಹಿಡಿಯಲು ಇಲ್ಲಿವರೆಗೆ ಸಾಧ್ಯವಾಗಿರುವುದಿಲ್ಲ. ಇದರಿಂದ ಸಮಸ್ಯೆ ಬಗೆಹರಿದಿಲ್ಲ ಎಂದರು. ಇಲ್ಲಿಯ ಜನರಿಗೆ ಮೂಲಭೂತ ಸೌಕರ್ಯ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಇಒ ಕೆ.ಸಿ. ಅಪ್ಪಣ್ಣ ಮಾಹಿತಿ ಒದಗಿಸಿದರು.
ಇಲ್ಲಿಯ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದಲಿತ ಮುಖಂಡ ಕೃಷ್ಣಪ್ಪ ಬೆಳ್ಳೂರು ಶಾಸಕ ಗಮನ ಸೆಳೆದರು.
ಉಭಯ ಕಡೆಯ ಅಹವಾಲನ್ನು ಆಲಿಸಿದ ಶಾಸಕ ಈ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಕೇವಲ ಕೋರ್ಟ್, ಕಚೇರಿಯೆಂದು ಅಲೆದಾಟ ನಡೆಸದೆ ಪರಸ್ಪರ ಅನ್ಯೋನತೆಯಿಂದ ಮುಂದೆ ಸಾಗುವುದು ಉತ್ತಮ ಬೆಳವಣಿಗೆ ಪರಸ್ಪರ ಹಗೆ ಸಾಧಿಸುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ.
ಈ ನಿಟ್ಟಿನಲ್ಲಿ ಅಧಿಕಾರಿ ಗಳೊಂದಿಗೆ ಮುಂದೆ ಮತ್ತೊಂದು ಸಭೆ ನಡೆಸಿ ಯಾರಿಗೂ ಅನ್ಯಾಯ ವಾಗದ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾಗುತ್ತೇನೆ ಎಂದರು.
ಕಾAಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಡಿಸಿಸಿ ಸದಸ್ಯ ಪ್ರಶಾಂತ್ ಮಾಜಿ ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ, ಹಲವು ಸಲಹೆಗಳನ್ನು ನೀಡಿದರು.
ಪ್ರತ್ಯೇಕವಾಗಿ ಕರೆದು ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರು. ಕೇವಲ ಈ ವಿಚಾರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸದೆ ಎಲ್ಲಾರು ಒಮ್ಮತದಿಂದ ತೆರಳುವಂತೆ ಸಲಹೆ ನೀಡಿದರು. ಅಂತಿಮವಾಗಿ ಮುಂದಿನ ಕೆಲವು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ನೀಡುವುದಾಗಿ ಸಭೆಗೆ ಶಾಸಕ ಪೊನ್ನಣ್ಣ ಭರವಸೆ ನೀಡಿದರು.
ಶ್ರೀಮಂಗಲ ಹೋಬಳಿಯ ಕುರ್ಚಿ ಗ್ರಾಮದಲ್ಲಿ ವಾಸಿಸುತ್ತಿರುವ ೩೬ ಕುಟುಂಬಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಬAಧಿಸಿದ ತೋಟದ ಮಾಲೀಕರೊಂದಿಗೆ ಸೌಹಾರ್ದತೆಯ ಮಾತುಕತೆ ನಡೆಸಲು ಸ್ಥಳದಲ್ಲಿದ್ದ ತಾ.ಪಂ. ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ ಹಾಗೂ ಡಿಸಿಸಿ ಸದಸ್ಯರಾದ ಪ್ರಶಾಂತ್ರವರಿಗೆ ಶಾಸಕ ಪೊನ್ನಣ್ಣ ಜವಾಬ್ದಾರಿ ವಹಿಸಿದರು.
ಸಭೆಯಲ್ಲಿ ದಲಿತ ಮುಖಂಡ ರಾದ ರಮೇಶ್ ಮಾಯಮುಡಿ, ತಿತಿಮತಿಯ ಶಿವಣ್ಣ, ವೀರಾಜ ಪೇಟೆಯ ಸತೀಶ್, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.