ವೀರಾಜಪೇಟೆ, ಮಾ. ೧೦: ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂದರೆ ಗುರುವಿನ ಪಾತ್ರ ಬಹುಮುಖ್ಯವಾದದ್ದು. ಆದ್ದರಿಂದ ಶಿಕ್ಷಕರಿಗೆ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಶಾಸಕರಾದ ಎ.ಎಸ್. ಪೊನ್ನಣ್ಣ ಭರವಸೆ ನೀಡಿದರು.
ವೀರಾಜಪೇಟೆಯ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕೊಡಗು ಉಪಾಧ್ಯಾಯರ ಸಹಕಾರ ಸ್ಟೊರ್ಸ್ ಮತ್ತು ಮುದ್ರಣಾಲಯದ ಶತಮಾನೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಪೊನ್ನಣ್ಣ ಪ್ರತಿಯೊಬ್ಬರಿಗೂ ಶಿಕ್ಷಣ ಹೇಗೆ ಮುಖ್ಯವೋ, ಹಾಗೆಯೆ ಆ ಶಿಕ್ಷಣ ನೀಡುವ ಗುರುವು ಅಷ್ಟೇ ಮುಖ್ಯ. ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ ಎಂದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಗುರುವಿಗೆ ನೀಡುತ್ತಾನೆ. ಉತ್ತಮ ಶಿಕ್ಷಣ ನೀಡಿ ವ್ಯಕ್ತಿಯ ಬದಕನ್ನು ಬೆಳಗುವವರು ಶಿಕ್ಷಕರು ಎಂದು ಹೇಳಿದರು.
ಮುಖ್ಯ ಅತಿಥಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ಶಿಕ್ಷಕರಿಗೆ ನಾವು ಮಹತ್ವ ನೀಡಬೇಕು ಎಂದರು.
ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಇಂದಿನ ಪೀಳಿಗೆಗೆ ಜೀವನದ ಮೌಲ್ಯವನ್ನು ತಿಳಿಸುವ ಶಿಕ್ಷಣದ ಅವಶ್ಯಕತೆ ಇದೆ ಎಂದರು.
ಕೊಡಗು ಉಪಾಧ್ಯಾಯರ ಸಹಕಾರ ಸ್ಟೊರ್ಸ್ ಮತ್ತು ಮುದ್ರಣಾಲಯ ನಿಯಮಿತದ ಅಧ್ಯಕ್ಷ ಮಾಣಿಯಪಂಡ ರೋಹಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘ ಸ್ಥಾಪನೆಗೊಂಡು ೧೦೦ ವರ್ಷಗಳಲ್ಲಿ ೩೩ ಅಧ್ಯಕ್ಷರುಗಳನ್ನು ಕಂಡಿದೆ. ೧೯೧೮ರಲ್ಲಿ ಕೇವಲ ೫೦ ಶಿಕ್ಷಕ ಸದಸ್ಯರನ್ನು ಒಳಗೊಂಡು ಸ್ಥಾಪನೆಯಾದ ಸಂಸ್ಥೆಯಲ್ಲಿ ಇದೀಗ ೧೭೭೦ ಸದಸ್ಯರಿದ್ದು, ಒಟ್ಟು ರೂ. ೪,೩೭,೮೧೫.೦೦ ಸದಸ್ಯರ ಪಾಲು ಬಂಡವಾಳ ಮತ್ತು ಸರ್ಕಾರದ ಪಾಲು ಬಂಡವಾಳ ೧,೩೩,೫೦೦.೦೦ ಇದೆ. ಸಂಘವು ೨೦೨೨-೨೩ ರಲ್ಲಿ ಒಟ್ಟು ರೂ ೪,೬೧,೭೧,೫೬೬.೦೦ ರೂಗಳ ವಹಿವಾಟು ಮಾಡಿದೆ ಎಂದು ಹೇಳಿದರು.
ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಂಘದ ಗುರುಸ್ಪಂದನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು
ಸಂಘದಲ್ಲಿ ಸದಸ್ಯರಾಗಿದ್ದ ೯೦ ವರ್ಷಕ್ಕೆ ಮೇಲ್ಪಟ್ಟ ಹಿರಿಯರಾದ ಮೂಟೇರ ನಂಜುAಡ, ಮುಕ್ಕಾಟೀರ ಎಸ್.ಮುತ್ತಣ್ಣ, ಮುಲ್ಲೇಂಗಡ ಕೆ. ಪೂವಯ್ಯ, ಪೊಂಜಾAಡ ಮಾದಪ್ಪ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ ಈ ಹಿಂದೆ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ್ದ ವಾಂಚೀರ ನಾಣಯ್ಯ ಹಾಗೂ ಚಾರ್ಲ್ಸ್ ಡಿಸೋಜಾ, ರಾಷ್ಟç ಪ್ರಶಸ್ತಿ ವಿಜೇತ ಶಿಕ್ಷಕರಾದ ಹೆಚ್.ಎ. ಗೋಪಿ ಹಾಗೂ ಮಾಯಪ್ಪ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಎ.ವಿ ಮಂಜುನಾಥ್, ನಿರ್ದೇಶಕರುಗಳಾದ ಮೇರಿಯಂಡ ಮುದ್ದಮ್ಮ, ಜಯೇಂದ್ರ, ಹೆಚ್.ಜಿ ಸೀತಾ, ಎಂ.ಎಸ್. ತಮ್ಮಯ್ಯ, ಕಂಬೀರAಡ ಕಿಟ್ಟು ಕಾಳಪ್ಪ, ಪಿ.ಪಿ.ಸುರೇಶ, ಪಿ.ಎ. ಪ್ರವೀಣ, ಬಿ. ಉತ್ತಪ್ಪ, ಹೆಚ್.ಬಿ. ಕೃಷ್ಣಪ್ಪ, ಹೆಚ್.ಬಿ. ಧರ್ಮಪ್ಪ, ಡಿ.ಎಚ್. ನಂದಕುಮಾರ್, ಸಿದ್ದರೂಢ ತಳವಾರ್, ಸರಕಾರದಿಂದ ನಾಮನಿರ್ದೇಶನಗೊಂಡ ಕೆ.ಆರ್. ಸುಬ್ಬಯ್ಯ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾದ ಎ.ವಿ ಮಂಜುನಾಥ್ ಸ್ವಾಗತಿಸಿ, ಬಿ.ಟಿ. ದೇವರಾಜ್ ಹಾಗೂ ಹೆಚ್.ಜಿ. ಸಾವಿತ್ರಿ ನಿರೂಪಿಸಿ, ಮುದ್ದಮ್ಮ ಪ್ರಾರ್ಥಿಸಿ, ನಿರ್ದೇಶಕ ಚೊಟ್ಟೆಯಾಂಡಮಾಡ ಬೋಸ್ ವಂದಿಸಿದರು.