ಮಡಿಕೇರಿ, ಮಾ. ೧೦: ದುಬೈಯಲ್ಲಿ ಏಪ್ರಿಲ್ ೨೪ರಿಂದ ೨೮ರವರೆಗೆ ನಡೆಯ ಲಿರುವ ಜೂನಿಯರ್ ಏಷ್ಯನ್ ಚಾಂಪಿಯನ್ ಕ್ರೀಡಾಕೂಟಕ್ಕೆ ಕೊಡಗಿನ ಯುವತಿ, ಉದ ಯೋನ್ಮುಖ ಕ್ರೀಡಾಪಟು ಬೊಳ್ಳಂಡ ಉನ್ನತಿ ಅಯ್ಯಪ್ಪ ಆಯ್ಕೆಯಾಗಿದ್ದಾರೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ಅಥ್ಲೆಟಿಕ್ ಫೆಡರೇಷನ್ ವತಿಯಿಂದ ಜರುಗಿದ ೨೨ನೆಯ ರಾಷ್ಟಿçÃಯ ಜೂನಿಯರ್ ಫೆಡರೇಷನ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನ ೧೦೦ ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಉನ್ನತಿ ಅಯ್ಯಪ್ಪ ೧೪.೦೫ ಸೆಕೆಂಡ್‌ನಲ್ಲಿ ಗುರಿ ಸಾಧಿಸಿ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ. ಚಿನ್ನದ ಪದಕದ ಈ ಸಾಧನೆಯೊಂದಿಗೆ ಈಕೆ ಇದೀಗ ಮುಂಬರಲಿರುವ ಜೂನಿಯರ್ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ಗೆ ಆಯ್ಕೆಗೊಂಡಿದ್ದಾರೆ. ಉನ್ನತಿ ಮೂಲತಃ ಮಡಿಕೇರಿ ನಿವಾಸಿ, ರಾಷ್ಟಿçÃಯ ಅಥ್ಲೆಟಿಕ್ ಕೋಚ್ ಬೊಳ್ಳಂಡ ಅಯ್ಯಪ್ಪ ಹಾಗೂ ಮಾಜಿ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ ದಂಪತಿಯ ಪುತ್ರಿ.