ಮಡಿಕೇರಿ, ಮಾ. ೯: ಮಹಾಶಿವರಾತ್ರಿ ಅಂಗವಾಗಿ ಜಿಲ್ಲೆಯ ವಿವಿಧೆಡೆ ವಿಶೇಷ ಪೂಜೆ ಸೇರಿದಂತೆ ಧಾರ್ಮಿಕ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಶಿವನಾಮಸ್ಮರಣೆ ಮಾಡುತ್ತ ಪೂಜೆ ಸಲ್ಲಿಸಿ ಭಕ್ತರು ಪುನೀತರಾದರು. ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ-ಹವನ, ಅನ್ನಸಂತರ್ಪಣೆ ನಡೆಯಿತು.
ಶಿವರಾತ್ರಿಯ ಧಾರ್ಮಿಕ ಕಾರ್ಯಗಳೊಂದಿಗೆ ಶಿವಭಕ್ತರು ಈ ವಿಶೇಷ ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಜಿಲ್ಲೆಯ ಎಲ್ಲಾ ಶಿವದೇವಾಲಯಗಳು ಸೇರಿದಂತೆ ಪ್ರಮುಖ ದೇಗುಲಗಳಲ್ಲಿ ಶಿವರಾತ್ರಿಯ ಪೂಜೆ - ಪುನಸ್ಕಾರದೊಂದಿಗೆ ಶುಕ್ರವಾರ ಹಗಲು ಹಾಗೂ ರಾತ್ರಿ ಶಿವಜಪ ಮೊಳಗಿತು. ಶಿವರಾತ್ರಿಯ ಅಂಗವಾಗಿ ಉಪವಾಸ ಜಾಗರಣೆಯಲ್ಲೂ ಭಕ್ತ ಸಮೂಹ ಭಾಗಿಯಾಗಿತ್ತು. ಮನೆ ಮನೆಗಳಲ್ಲೂ ಭಕ್ತರು ವಿವಿಧ ಹೆಸರುಗಳ ಮೂಲಕ ಕರೆಯಲ್ಪಡುವ ಶಿವನನ್ನು ಆರಾಧಿಸುವ ಮೂಲಕ ಜಿಲ್ಲೆಯಾದ್ಯಂತ ಉತ್ಸವದ ಸಂಭ್ರಮ ಕಂಡು ಬಂದಿತು.
ಜಿಲ್ಲಾ ಕೇಂದ್ರವಾದ ಮಡಿಕೇರಿಯೂ ಸೇರಿದಂತೆ ನಗರದ ಅಕ್ಕಪಕ್ಕದ ದೇವಾಲಯಗಳಲ್ಲಿ, ಜಿಲ್ಲೆಯ ಇನ್ನಿತರ ಭಾಗಗಳಲ್ಲಿರುವ ಶಿವದೇಗುಲ ಸೇರಿದಂತೆ ಇತರ ದೈವಸನ್ನಿಧಿಗಳಲ್ಲೂ ಶಿವನ ಸ್ಮರಣೆಯೊಂದಿಗೆ ಧಾರ್ಮಿಕ ಹಾಗೂ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು. ಶಿವರಾತ್ರಿ ಅಂಗವಾಗಿ ನಗರದ ಐತಿಹಾಸಿಕ ದೇವಾಲಯ ಓಂಕಾರೇಶ್ವರ ಸನ್ನಿಧಿಯಲ್ಲಿ ರುದ್ರಹೋಮ, ಏಕಾದಶ ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆ ಸೇರಿದಂತೆ ಇನ್ನಿತರ ವಿಶೇಷ ಪೂಜೆಗಳು ನೆರವೇರಿದವು. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪೂಜೆ ಸಲ್ಲಿಸಿದರು.
ನಗರದ ದಾಸವಳ ರಸ್ತೆಯಲ್ಲಿರುವ ವೀರಭದ್ರ ಮುನೀಶ್ವರ ದೇವಾಲಯದಲ್ಲಿ ಶಿವರಾತ್ರಿ ಜಾತ್ರೋತ್ಸವ ಅದ್ದೂರಿಯಾಗಿ ನಡೆಯಿತು. ಶಿವಲಿಂಗವನ್ನು ನವಧಾನ್ಯದಿಂದ ತಯಾರಿಸಿ ಪೂಜಿಸಲಾಯಿತು. ಅದರೊಂದಿಗೆ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ಅಂಗವಾಗಿ ದೇವಾಲಯದಲ್ಲಿ ಮಹಾಗಣಪತಿ ಹೋಮ, ವೀರಭದ್ರ ಉತ್ಸವ ಮೂರ್ತಿ ಮೆರವಣಿಗೆ, ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಿತು. ಶಾಸಕ ಡಾ. ಮಂತರ್ ಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಗರದ ಹೊರವಲಯದ ಕರ್ಣಂಗೇರಿಯ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿಯೂ ಶಿವರಾತ್ರಿ ಅಂಗವಾಗಿ ವಿವಿಧ ರೀತಿಯ ಪೂಜೆಗಳು ಶ್ರದ್ಧಾಭಕ್ತಿಯಿಂದ ನಡೆಯಿತು. ರುದ್ರಾಭಿಷೇಕ, ಕ್ಷೀರಾಭಿಷೇಕ, ಪುಷ್ಪಾಭಿಷೇಕ ಸೇರಿದಂತೆ ೭ ಬಗೆಯ ಅಭಿಷೇಕ ನಡೆಯಿತು. ರಾತ್ರಿ ದೀಪೋತ್ಸವ ನೆರವೇರಿತು. ೫೨ ಅಡಿ ಶಿವರಾತ್ರಿ ವಿಗ್ರಹಕ್ಕೆ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು.
ಮಡಿಕೇರಿ ನಗರದ ಕನ್ನಿಕಾ ಪರಮೇಶ್ವರಿ ದೇವಾಲಯದ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ನಡೆಯಿತು. ನಗರೇಶ್ವರ ಮೂರ್ತಿಗೆ ಅಭಿಷೇಕದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ವೈಭವ ತಂಡದಿAದ ರುದ್ರಪಠಣ ಕಾರ್ಯಕ್ರಮ ನಡೆಯಿತು.ಭಾಗಮಂಡಲ: ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ರುದ್ರಾಭಿಷೇಕ ಸೇವೆ, ಬಿಲ್ವರ್ಚನೆ ಇತ್ಯಾದಿ ಸೇವೆಗಳು ನಡೆದು ಮಧ್ಯಾಹ್ನ ೧೨ಗಂಟೆಗೆ ರುದ್ರಹೋಮ ನಡೆಯಿತು. ರಾತ್ರಿ ದೇವರ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಬಳಿಕ ಯಕ್ಷಗಾನ ಬೆಳಗಿನ ತನಕ ನಡೆಯಿತು.
ಬೆಂಗಳೂರಿನ ನಂಜುAಡೇಶ್ವರ ಮತ್ತು ವಿಜಯ. ಕೆ. ಎನ್. ಅವರು ಸುಮಾರು ರೂ.೩ಲಕ್ಷ ಬೆಲೆಬಾಳುವ ಬೆಳ್ಳಿಯ ಆಭರಣ ಹಾಗೂ ಪ್ರಭಾವಳಿಯನ್ನು ದೇವಾಲಯಕ್ಕೆ ಅರ್ಪಿಸಿದರು. ಪ್ರಧಾನ ಅರ್ಚಕÀ ಹರೀಶ್ ಭಟ್ ನೇತೃತ್ವದ ತಂಡ ಧಾರ್ಮಿಕ ಕಾರ್ಯ ನೆರವೇರಿಸಿತು. ಈ ಸಂದರ್ಭದಲ್ಲಿ ದೇವಾಲಯದ ಪಾರುಪತ್ಯೆಗಾರರಾದ ಪೊನ್ನಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪೊನ್ನಂಪೇಟೆ: ದಕ್ಷಿಣ ಕೊಡಗಿನ ಇತಿಹಾಸ ಪ್ರಸಿದ್ಧ ಇರ್ಪು ಶ್ರೀ ರಾಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಶುಕ್ರವಾರ ರಾತ್ರಿ ಶಿವರಾತ್ರಿ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನ ಏರ್ಪಡಿಸಲಾಗಿತ್ತು. ಶನಿವಾರ ಶಿವರಾತ್ರಿ ಪ್ರಯುಕ್ತ ಜಾತ್ರಾ ಮಹೋತ್ಸವ, ದೇವರ ಅವಭೃತ ಸ್ನಾನ ಮತ್ತು ಇನ್ನಿತರ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಇರ್ಪು ಲಕ್ಷö್ಮಣತೀರ್ಥ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ದೇವರ ದರ್ಶನ ಪಡೆದರು. ನೆರೆದಿದ್ದ ಭಕ್ತಾದಿಗಳಿಗೆ ದೇವಸ್ಥಾನ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಕಂದಾಯ ಅಧಿಕಾರಿ ಪೂಣಚ್ಚ, ದೇವಸ್ಥಾನ ಸಮಿತಿಯ ಅಧ್ಯಕ್ಷ ಮದ್ರಿರ ವಿಷ್ಣು ಮತ್ತು ಸಮಿತಿಯ ಪದಾಧಿಕಾರಿಗಳು, ಪಾರುಪತ್ಯೆಗಾರರು ಹಾಜರಿದ್ದರು. ಕುಶಾಲನಗರ: ಮಹಾ ಶಿವರಾತ್ರಿ ಅಂಗವಾಗಿ ಕುಶಾಲನಗರ ಪಟ್ಟಣ ಸುತ್ತಮುತ್ತ ವ್ಯಾಪ್ತಿಯ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಕುಶಾಲನಗರ ಬಯಲು ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಬಸವೇಶ್ವರ ಬಡಾವಣೆಯ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳು ಜರಗಿದವು. ನಂತರ ಪ್ರಸಾದ ವಿನಿಯೋಗ ನಡೆಯಿತು ಬಯಲು ಬಸವೇಶ್ವರ ದೇವಸ್ಥಾನ ಸಮಿತಿ ಇಂದ ನಡೆದ ಸರಳ ಕಾರ್ಯಕ್ರಮದಲ್ಲಿ ಸಾಧಕರು ಮತ್ತು ಕುಶಾಲನಗರ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಬಯಲು ಬಸವೇಶ್ವರ ಬಡಾವಣೆ ಹಿತರಕ್ಷಣ ಸಮಿತಿಯ ಅಧ್ಯಕ್ಷ ಟಿ.ಕೆ. ಸುದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಕ್ಕಳ ತಜ್ಞ ಡಾ. ರವಿಚಂದ್ರ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ರಾಜು, ಮುಖ್ಯ ಶಿಕ್ಷಕರಾದ ಹೆಚ್.ಎಸ್. ರಾಜೇಶ್ವರಿ , ರಾಜ್ಯ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಟಿ. ಪೂರ್ಣೇಶ್ ಮತ್ತು ಚಿನ್ನದ ಪದಕ ವಿಜೇತ ವಿದ್ಯಾರ್ಥಿ ಬಿ.ಎಸ್. ಸುಶಾಂತ್ ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಗಳಿಗೆ ಸನ್ಮಾನ ಹಾಗೂ ಕುಶಾಲನಗರ ಪುರಸಭೆ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಬಡಾವಣೆಯ ಮಕ್ಕಳಿಗೆ ಮಹಿಳೆಯರಿಗೆ ಪುರುಷರಿಗೆ ಹಿರಿಯ ನಾಗರಿಕರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಬಯಲು ಬಸವೇಶ್ವರ ಬಡಾವಣೆ ರಕ್ಷಣಾ ಸಮಿತಿಯ ವಾರ್ಷಿಕ ಮಹಾಸಭೆ ನಡೆದು ಲೆಕ್ಕಪತ್ರ ಮಂಡನೆ ವರದಿ ಅಂಗೀಕರಿಸಲಾಯಿತು.
ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಕುಶಾಲನಗರ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ, ರುದ್ರ ಅಭಿಷೇಕ ಬಿಲ್ವರ್ಚನೆ ಪುಷ್ಪಾಲಂಕಾರ ಅಷ್ಟೋತ್ತರ ನೈವೇದ್ಯ ಕಾರ್ಯಕ್ರಮಗಳು ನೆರವೇರಿದವು. ಸ್ಥಳೀಯ ಸೇವಾರ್ಥದಾರರುಗಳಿಂದ ವಿವಿಧ ಪೂಜೆಗಳು ನಡೆದವು. ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನ ಅಧ್ಯಕ್ಷ ಎಂ.ಕೆ. ದಿನೇಶ್ ಮತ್ತು ನಿರ್ದೇಶಕರುಗಳು ಇದ್ದರು.
ಕುಶಾಲನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಸಂಜೆ ದೀಪೋತ್ಸವ ಮತ್ತು ರಂಗ ಪೂಜೆ ನಡೆಯಿತು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಗಣಪತಿ ಮತ್ತು ಸದಸ್ಯರುಗಳು ಇದ್ದರು. ಕುಶಾಲನಗರ ಸಮೀಪದ ಅತ್ತೂರು ಪಂಚಲಿAಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮೂರು ದಿನಗಳ ಕಾಲ ಪೂಜಾ ಕಾರ್ಯಕ್ರಮಗಳು ಜರುಗಿದವು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಗಣೇಶ್ ತಂತ್ರಿಗಳು ಹಾಗೂ ಅರ್ಚಕರಾದ ಪದ್ಮನಾಭ್ ನೇತೃತ್ವದಲ್ಲಿ ವಿವಿಧ ವೈದಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಣೆ ನಡೆಯಿತು.
ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಜರಗಿತು ರಾತ್ರಿ ವೇಳೆ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇಂದ ಶಿವ ಪಂಚಾಕ್ಷರಿ ಮಹಿಮೆ ಮತ್ತು ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗ ನಡೆಯಿತು.
ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷರಾದ ಉಗ್ರಾಣಿ ಮನೋಜ್ ಕುಮಾರ್, ಉಪಾಧ್ಯಕ್ಷರಾದ ದಿವಾಕರ್, ಕಾರ್ಯದರ್ಶಿ ರಮೇಶ್ , ಗಣೇಶ್ ಮತ್ತಿತರರು ಇದ್ದರು. ಈ ಸಾಲಿನ ಬಿರು ಬೇಸಿಗೆಯ ಬಿಸಿಲಿನ ನಡುವೆ ಬಿಲ್ವಪತ್ರ ಮರಗಳು ಬಹುತೇಕ ಒಣಗಿ ನಿಂತಿದ್ದರಿAದ ದೇವರ ಪೂಜೆಗೆ ಅಗತ್ಯವಾಗಿ ಸಲ್ಲಬೇಕಾದ ಬಿಲ್ವಪತ್ರ ಎಲೆಗಳ ಕೊರತೆ ಕಂಡುಬAದಿತ್ತು.
ಮುಳ್ಳೂರು: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ಸಮೀಪದ ಮಾಲಂಬಿ ಗ್ರಾಮದಲ್ಲಿರುವ ಶ್ರೀ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು. ದೇವಾಲಯ ಸಮಿತಿ, ಕಾಫಿ ಬೆಳೆಗಾರರು ಮತ್ತು ದಾನಿಗಳು ಸೇರಿಕೊಂಡು ೧೯೯೯ ರಿಂದ ಬೆಟ್ಟದ ತುದಿಯಲ್ಲಿ ನಿರ್ಮಿಸಿರುವ ಮಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಶುಕ್ರವಾರ ಮುಂಜಾನೆಯಿAದ ಸಂಜೆವರೆಗೂ ಸ್ಥಳೀಯ ಭಕ್ತಾದಿಗಳು ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಯಿಂದ ಆಗಮಿಸಿದ ಸಾವಿರಾರು ಭಕ್ತರು ಬೆಟ್ಟ ದೇವರ ದರ್ಶನ ಪಡೆದರು. ಶಿವರಾತ್ರಿ ಹಬ್ಬದ ಪ್ರಯುಕ್ತ ಮಳೆ ಮಲ್ಲೇಶ್ವರ ಸ್ವಾಮಿಗೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿಶೇಷ ಪೂಜಾ ವಿದಿ ವಿಧಾನವನ್ನು ನೆರವೇರಿಸಿದರು. ಬೆಟ್ಟದ ತದಿಯಲ್ಲಿ ಭಕ್ತಾಧಿಗಳು ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ಶಿವರಾತ್ರಿ ಹಬ್ಬದ ಪ್ರಯುಕ್ತ ಬೆಟ್ಟದ ಕೆಳ ಭಾಗದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಜಾತ್ರೆ ನಡೆಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ದಾರಿ ಮಧ್ಯದಲ್ಲಿ ಭಕ್ತಾದಿಗಳಿಗೆ ಕುಡಿಯಲು ಮಜ್ಜಿಗೆ, ನೀರು ವಿತರಣೆ ಮಾಡಲಾಯಿತು. ೭ ರಿಂದ ೮ ಸಾವಿರ ಭಕ್ತಾಧಿಗಳು ಬೆಟ್ಟದ ಮೇಲೆ ನಡೆದ ಶಿವರಾತ್ರಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಹೆಗ್ಗು-ದೀಣೆಕೊಪ್ಪದ ಯುವಕರ ತಂಡ ಭಕ್ತಾದಿಗಳಿಗೆ ಮಜ್ಜಿಗೆ ಮತ್ತು ಕುಡಿಯುವ ನೀರು ವಿತರಣೆ ಮಾಡಿದರು. ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಪ್ರಮುಖರಾದ ಎಚ್.ಪಿ.ಶೇಷಾದ್ರಿ, ಬಿ.ಕೆ.ಸುಬ್ರಮಣ್ಯ, ಎಚ್.ವಿ.ದಿವಾಕರ್, ಎಚ್.ವಿ.ಸುರೇಶ್, ಎಚ್.ಕೆ.ಸದಾಶಿವ, ಎಚ್.ಕೆ.ಹಾಲಪ್ಪ, ಎಚ್.ಎಸ್.ವಸಂತ್, ಎಚ್.ಎಸ್.ಯಶ್ವಂತ್, ಎಂ.ಇ.ವೆAಕಟೇಶ್, ಗೌಡಳ್ಳಿ ಗಣೇಶ್, ಎಚ್.ಎಸ್.ಪಾಲಾಕ್ಷ ಮುಂತಾದವರು ಹಾಜರಿದ್ದರು.
ಮಡಿಕೇರಿ: ಮಡಿಕೇರಿ ಸಮೀಪದ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಮಹಾ ಶಿವರಾತ್ರಿ ಆಚರಣೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿAದ ಜರುಗಿತು. ಶಿವರಾತ್ರಿ ಹಿನ್ನೆಲೆ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಚೆಟ್ಟಳ್ಳಿ: ಮಹಾಶಿವರಾತ್ರಿಯ ಅಂಗವಾಗಿ ಚೆಟ್ಟಳ್ಳಿಯಲ್ಲಿ ನಾಲ್ಕನೇ ವರ್ಷದ ಮಹಾಶಿವರಾತ್ರಿಯನ್ನು ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿAದ ಆಚರಿಸಲಾಯಿತು.
ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ನೇತೃತ್ವದಲ್ಲಿ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಶ್ರೀ ವೀರಾಂಜನೇಯ ಯುವಕ ಸಂಘ, ಶ್ರೀಗೌರಿಗಣೇಶೋತ್ಸವ ಸಮಿತಿ, ಶ್ರೀ ವಿನಾಯಕದೇವಾಲಯ ಸಮಿತಿ, ಸಂಯುಕ್ತ ಆಶ್ರಯದಲ್ಲಿ ಸಂಜೆ ೫.೩೦ ಗಂಟೆಗೆ ಈರಳೆವಳಮುಡಿ ಗ್ರಾಮದಲ್ಲಿರುವ ಪಂಚಮುಖಿ ವಾಯುಪುತ್ರ ಮೂರ್ತಿಗೆ, ಸಹಕಾರ ಸಂಘದ ಮುಖ್ಯ ಕಚೇರಿಯಲ್ಲಿರುವ ಶ್ರೀ ವಿನಾಯಕ, ಪಶುಪತಿನಾಥ, ಕಾವೇರಿಮಾತೆಗೆ ಶ್ರೀ ಕೃಷ್ಣ, ಗೋಮಾತೆ, ವಿಘ್ನೇಶ್ವರ ವೀರಾಂಜನೇಯ, ಮಹಾ ವಿಷ್ಣುಮೂರ್ತಿಗೆ ಮಹಾಮಂಗಳಾರತಿ ನಡೆಯಿತು.
೩ ವರ್ಷದಿಂದ ೧೬ ವರ್ಷದೊಳಗಿನ ೪೫ಕ್ಕೂ ಹೆಚ್ಚು ಮಕ್ಕಳು ಶಿವ, ಪಾರ್ವತಿ, ಶ್ರೀಕೃಷ್ಣ, ರಾಧೆಯ ಛದ್ಮವೇಷ ಧರಿಸಿ ಗಮನ ಸೆಳೆದರು. ಅರ್ಚಕರಿಂದ ಮಹಾಮಂಗಳಾರತಿ ನೆರ ವೇರಿತು. ನಂತರ ಸಹಕಾರ ಸಂಘದ ಮುಖ್ಯ ಕಚೇರಿಯಿಂದ ಶ್ರೀ ನರೇಂದ್ರಮೋದಿ ಸಹಕಾರ ಭವನದವರೆಗೆ ಮೆರವಣಿಗೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಸಹಕಾರ ಸಂಘದ ನಿವೃತ್ತ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಹೆಚ್.ಬಿ.ರಮೇಶ್ ಸಹಕಾರ ಸಂಘಗಳ ನಿವೃತ್ತ ಲೆಕ್ಕಪರಿಶೋಧಕ ಚಂದ್ರಶೇಖರ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸ ಲಾಯಿತು. ಚೆಟ್ಟಳ್ಳಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಾಧಿಕಾರಿ ನಂದಿನಿ.ಕೆ.ಎಸ್ ವೇದಿಕೆಯಲ್ಲಿ ಹಾಜರಿದ್ದರು.
ಸಂಜೆ ೭ ಗಂಟೆಯಿAದ ಗೋಣಿಕೊಪ್ಪಲಿನ ಖ್ಯಾತ ಯುವ ಗಾಯಕ ಅನ್ವಿತ್ಕುಮಾರ್ ಸಿ.ವಿ ಹಾಗೂ ದೀಪಿಕಾ ಆಚಾರ್ಯ ಉಡುಪಿ ಅವರಿಂದ ಹಾಡುಗಾರಿಕೆ, ಮಕ್ಕಳ ನೃತ್ಯ ಕಾರ್ಯಕ್ರಮ ನಡೆಯಿತು.ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಬೆಳಗ್ಗಿನಿಂದಲೇ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಪಟ್ಟಣದ ಶ್ರೀ ಸೋಮೇಶ್ವರ ದೇವಾಲಯ, ಬಸವೇಶ್ವರ ದೇವಾಲಯ, ಯಡೂರು ಸೋಮೇಶ್ವರ, ತಣ್ಣೀರುಹಳ್ಳದ ಬಸವೇಶ್ವರ, ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ದೇವಾಲಯ, ಅರಸಿನಕುಪ್ಪೆಯ ಶ್ರೀ ಮಂಜುನಾಥ ದೇವಾಲಯ ಸೇರಿದಂತೆ ಹಲವೆಡೆಗಳಲ್ಲಿ ವಿಶೇಷ ಪೂಜೆ ನಡೆಸಿದರು.
ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಪುಷ್ಟಗಿರಿ ಬೆಟ್ಟದಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಸಲಾಯಿತು.
ಬೆಳಿಗ್ಗೆ ಪುಷ್ಪಗಿರಿ ಬೆಟ್ಟದ ಮೇಲಿನ ದೇವಾಲಯಕ್ಕೆ ಗ್ರಾಮಸ್ಥರು ತೆರಳಿ ಪೂಜೆ ಸಲ್ಲಿಸಿ, ದೇವಾಲಯಕ್ಕೆ ಹಿಂದಿರುಗಿದ ನಂತರ ಮಲ್ಲಿಕಾರ್ಜುನ ದೇವಾಲಯದಲ್ಲಿ ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಪೂಜೆಗಳು ದೇವಾಲಯದ ಅರ್ಚಕ ನಂದೀಶ್ ನೇತೃತ್ವದಲ್ಲಿ ನಡೆಯಿತು. ಕ್ಷೇತ್ರಕ್ಕೆ ಆಗಮಿಸಿದವರಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಅರಸಿನಕುಪ್ಪೆಯಲ್ಲಿ: ತೊರೆನೂರು ಗ್ರಾ.ಪಂ. ವ್ಯಾಪ್ತಿಯ ಅರಸಿನಕುಪ್ಪೆ ಶ್ರೀ ಮಂಜುನಾಥ ಸ್ವಾಮಿ ಹಾಗೂ ನವನಾಗನಾಥ ಸನ್ನಿಧಿಯಲ್ಲಿ ಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲಾಯಿತು.
ಎಂಟು ಯಾಮಗಳಲ್ಲಿ ಶಿವರಾತ್ರಿ ಪೂಜೆ ನಡೆಯುವ ಜಿಲ್ಲೆಯ ಅಪರೂಪದ ಕ್ಷೇತ್ರಗಳಲ್ಲೊಂದಾದ ಶ್ರೀಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದ ಹಾಲಿನ ಅಭಿಷೇಕ, ನಂತರ ಎರಡನೇ ಯಾಮದಲ್ಲಿ ೧೧೦೮ ಎಳನೀರು ಅಭಿಷೇಕವನ್ನು ಮಾಡಲಾಯಿತು.
ಮೂರನೆ ಯಾಮದಲ್ಲಿ ಕಬ್ಬಿನ ಹಾಲಿನ ಅಭಿಷೇಕ, ನಾಲ್ಕನೆ ಯಾಮದಲ್ಲಿ ಕಲಶಾಭಿಷೇಕ, ಐದನೆ ಯಾಮದಲ್ಲಿ ಪಂಚಾಮೃತ ಅಭಿಷೇಕ, ಆರನೇ ಯಾಮದಲ್ಲಿ ಜೇನುತುಪ್ಪದ ಅಭಿಷೇಕ, ಏಳನೇ ಯಾಮದಲ್ಲಿ ಜಲಾಭಿಷೇಕ ಮತ್ತು ಎಂಟನೇ ಯಾಮದಲ್ಲಿ ವಿಶೇಷವಾಗಿ ಭಸ್ಮಾಭಿಷೇಕ ನೆರವೇರಿಸಲಾಯಿತು.
ಕ್ಷೇತ್ರದ ಗುರುಗಳಾದ ಶ್ರೀರಾಜೇಶ್ನಾಥ್ ಗುರೂಜಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ಪ್ರಧಾನ ಅರ್ಚಕರಾದ ಜಗದೀಶ್ ಉಡುಪ ಅವರ ಪೌರೋಹಿತ್ಯದಲ್ಲಿ ಯಾಮದ ಪೂಜೆಗಳು ಸಾಂಗವಾಗಿ ನೆರವೇರಿದವು. ಅರ್ಚಕರಾದ ಹರಿಭಟ್, ವೆಂಕಟೇಶ್ ಹೊಳ್ಳ, ವಾದಿಭಟ್, ರಂಗಭಟ್, ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಕಾರ್ಯದರ್ಶಿ ಪ್ರಕಾಶ್, ದೇವಾಲಯ ಸಮಿತಿ ಅಧ್ಯಕ್ಷ ಎಂ.ಸಿ.ಮೋಹನ್, ಬಜೆಗುಂಡಿ ಮಣಿ ಮತ್ತಿತರರು ಇದ್ದರು.
ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಭಕ್ತಾದಿಗಳಿಂದ ಜಾಗರಣೆ ಹಾಗೂ ಭಜನೆ ನಡೆಯಿತು. ಕಲಾವಿದ ಶಾಂತಪ್ಪ ಅವರಿಂದ ಮೂಡಿಬಂದ ಏಕಪಾತ್ರಾಭಿನಯ ಎಲ್ಲರ ಗಮನ ಸೆಳೆಯಿತು. ಇದರೊಂದಿಗೆ ದೇವಾಲಯದಲ್ಲಿ ರುದ್ರಾಭಿಷೇಕ, ಏಕದಶವಾರ ರುದ್ರಾಭಿಷೇಕ ಸೇರಿದಂತೆ ಇನ್ನಿತರ ಪೂಜಾ ಕಾರ್ಯಗಳು ನಡೆದವು.