ಗೋಣಿಕೊಪ್ಪಲು, ಮಾ. ೯: ಲೋಕೋಪಯೋಗಿ ಇಲಾಖೆ ವತಿಯಿಂದ ಪೊನ್ನಂಪೇಟೆ - ಕಾನೂರು-ನಿಟ್ಟೂರು ಸಂಪರ್ಕ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣಗೊAಡ ರಸ್ತೆಯನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು.

ಗ್ರಾಮಸ್ಥರ ಕೋರಿಕೆ ಮೇರೆ ರಸ್ತೆ ಅಭಿವೃದ್ಧಿಗೆ ೭೫ ಲಕ್ಷ ಅನುದಾನವನ್ನು ಮಂಜೂರು ಮಾಡಿದ ಶಾಸಕ ಪೊನ್ನಣ್ಣ ಕೆಲ ದಿನಗಳ ಹಿಂದೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಕಾಮಗಾರಿ ಮುಗಿದು ರಸ್ತೆ ಉದ್ಘಾಟನೆಗೊಂಡಿದೆ.

ಕ್ಷೇತ್ರದಲ್ಲಿ ನಡೆಯುವ ಯಾವುದೇ ಅಭಿವೃದ್ಧಿ ಕೆಲಸ ಹಾಗೂ ಕಾಮಗಾರಿಗಳು ಕಳಪೆಯಾಗಬಾರದು, ಒಂದು ವೇಳೆ ಈ ಬಗ್ಗೆ ದೂರು ಬಂದಲ್ಲಿ ಸಂಬAಧಿಸಿದ ಅಧಿಕಾರಿ ಹಾಗೂ ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂದರ್ಭ ಶಾಸಕರು ಎಚ್ಚರಿಕೆ ಸಂದೇಶ ರವಾನಿಸಿದರು.

ನೂತನ ಸರಕಾರ ಬಂದ ಬಳಿಕ ಭೂಮಿ ಪೂಜೆ ನೆರವೇರಿಸಿದ್ದಲ್ಲಿ ಕಾಮಗಾರಿ ಆರಂಭಗೊAಡು ನಿರ್ದಿಷ್ಟ ಸಮಯದಲ್ಲಿ ಮುಕ್ತಾಯಗೊಂಡು ಜನರ ಸೇವೆಗೆ ಲಭ್ಯವಾಗುತ್ತಿದೆ. ಅಲ್ಲದೆ ಕಳಪೆ ಕಾಮಗಾರಿ ಎಂಬ ಆರೋಪ ಕೂಡ ವ್ಯಕ್ತವಾಗುತ್ತಿಲ್ಲ. ಇದರಿಂದ ಕ್ಷೇತ್ರದಲ್ಲಿ ಬದಲಾವಣೆಯ ಅಭಿವೃದ್ಧಿ ಜನತೆ ಗಮನಿಸುತ್ತಿದ್ದಾರೆ ಎಂದರು.

ರಸ್ತೆ ಉದ್ಘಾಟನೆಯ ವೇಳೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಕಾನೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕಾಡ್ಯಮಾಡ ಬೋಪಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾನಂಡ ಪ್ರಥ್ವಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಪಲ್ವಿನ್ ಪೂಣಚ್ಚ, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ತೆನ್ನಿರ ಮೈನಾ, ಚೆರಿಯಪಂಡ ನಾಣಯ್ಯ, ಚೇರಂಡ ಮೋಹನ್, ಟಿ.ಸಿ. ಶ್ಯಾಮಲ, ಸಿದ್ದು ನಾಚಪ್ಪ, ಮಲ್ಚಿರ ಮಂಜು, ಮುಳ್ಳಂಗಡ, ಅರಸು, ಕುಂಞÂಮಾಡ ರಮೇಶ್, ತಾಣಚ್ಚಿರ ನಿಖಿಲ್, ಮಚ್ಚಮಾಡ ಮನು, ಚೊಟ್ಟೆಕ್‌ಮಾಡ ಬಿದ್ದಪ್ಪ, ಸೇರಿದಂತೆ ಗುತ್ತಿಗೆದಾರರಾದ ವಿ.ಟಿ. ದಿನೇಶ್ ಕುಮಾರ್, ಎಇಇ ಲಿಂಗರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.