ಸೋಮವಾರಪೇಟೆ, ಮಾ. ೭: ಇಲ್ಲಿನ ಪಟ್ಟಣ ಪಂಚಾಯಿತಿಯ ೨೦೨೪-೨೫ನೇ ಸಾಲಿನ ಆಯವ್ಯಯ ಮಂಡನೆ ಸಭೆ ಆಡಳಿತಾಧಿಕಾರಿ ಯಾಗಿರುವ ತಾಲೂಕು ತಹಶೀಲ್ದಾರ್ ನವೀನ್ಕುಮಾರ್ ಅವರ ಅಧ್ಯಕ್ಷ ತೆಯಲ್ಲಿ, ಸಂಕಪ್ಪ ಸಭಾಂಗಣದಲ್ಲಿ ನಡೆಯಿತು.
೨೦೨೪-೨೫ ನೇ ಸಾಲಿಗೆ ಒಟ್ಟು ೧೧.೧ ಕೋಟಿ ಮೊತ್ತದ ಬಜೆಟ್ ಮಂಡಿ ಸಿದ್ದು, ಜಮೆ-ಖರ್ಚು ಲೆಕ್ಕಾಚಾರದ ನಂತರ ಒಟ್ಟಾರೆ ೩.೧೬ ಲಕ್ಷ ಉಳಿ ತಾಯವನ್ನು ನಿರೀಕ್ಷಿಸಲಾಗಿದೆ.
ಸಭೆಯಲ್ಲಿ ಬಜೆಟ್ ಮಂಡಿಸಿದ ಮುಖ್ಯಾಧಿಕಾರಿ ನಾಚಪ್ಪ ಅವರು, ಪ್ರಸಕ್ತ ಬಜೆಟ್ ಸಾಲಿನಲ್ಲಿ ೧,೧೦೪.೮೦ ಲಕ್ಷ ಆದಾಯವನ್ನು ನಿರೀಕ್ಷೆ ಮಾಡಿದ್ದು, ಇದರಲ್ಲಿ ೧,೧೦೧ ಲಕ್ಷ ಖರ್ಚು ಅಂದಾಜಿಸುವ ಮೂಲಕ ೩,೧೬,೫೮೯ ಲಕ್ಷ ಉಳಿತಾಯ ಆಯವ್ಯಯವನ್ನು ಮಂಡಿಸಿದರು.
ವೇತನ ಅನುದಾನ, ವಿದ್ಯುತ್ ಅನುದಾನ, ವಾಣಿಜ್ಯ ಮಳಿಗೆ ಬಾಡಿಗೆ, ಎಸ್ಎಫ್ಸಿ ಅನುದಾನ, ಉದ್ದಿಮೆ ಪರವಾನಗಿ ಶುಲ್ಕ, ಕಟ್ಟಡ ಪರವಾನಗಿ ಶುಲ್ಕ, ನೀರಿನ ಕಂದಾಯ, ಆಸ್ತಿ ತೆರಿಗೆ, ಡೇ ನಲ್ಮ್ ಅನುದಾನ, ಮಳೆಹಾನಿ ದುರಸ್ತಿ, ಗೃಹ ಭಾಗ್ಯ ಯೋಜನೆ, ವಿಶೇಷ ಅನುದಾನ, ಎಸ್ಡಬ್ಲೂö್ಯಎಂ ಅನುದಾನ, ಕುಡಿಯುವ ನೀರು, ಎನ್ಡಿಆರ್ಎಫ್, ನಿವೇಶನ ಖರೀದಿ, ಸ್ಮಶಾನ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಲೋಕಸಭಾ ಸದಸ್ಯರು ಮತ್ತು ಶಾಸಕರ ಅನುದಾನ ಸೇರಿದಂತೆ ಒಟ್ಟು ೧,೧೦೪.೮೦ ಲಕ್ಷ ಆದಾಯವನ್ನು ಬಜೆಟ್ನಲ್ಲಿ ನಿರೀಕ್ಷೆ ಮಾಡಲಾಗಿದೆ.
ವೇತನ, ನೀರು-ವಿದ್ಯುತ್ ನಿರ್ವಹಣೆ, ಕಟ್ಟಡಗಳ ದುರಸ್ತಿ, ವಾಹನ ಬಾಡಿಗೆ, ಕಾನೂನು ಸಲಹೆ, ಲೆಕ್ಕಪರಿಶೋಧನೆ, ವೃತ್ತಿ ಪರ ವೆಚ್ಚ, ಗೌರವಧನ, ವಾಣಿಜ್ಯ ಕಟ್ಟಡಗಳ ದುರಸ್ತಿ, ರಸ್ತೆ ದುರಸ್ತಿ, ಬೀದಿ ದೀಪ, ಚರಂಡಿ, ಶೌಚಾಲಯ, ವಾಹನ, ಉದ್ಯಾನವನ ದುರಸ್ತಿ, ನೈರ್ಮಲ್ಯ, ಘನತ್ಯಾಜ್ಯ ಸಾಗಾಟದ ವಾಹನಗಳ ನಿರ್ವಹಣೆ, ಬೀದಿ ನಾಯಿಗಳ ಸಂತಾನ ಹರಣ, ಪ್ರವಾಸ ಅಧ್ಯಯನಗಳಿಗಾಗಿ ೧,೧೦೧ ಲಕ್ಷಗಳ ಖರ್ಚನ್ನು ಅಂದಾಜಿಸಲಾಗಿದೆ.
ಬಜೆಟ್ ಮಂಡಿಸಿ ಮಾತನಾಡಿದ ಮುಖ್ಯಾಧಿಕಾರಿ ನಾಚಪ್ಪ ಅವರು, ಸೋಮವಾರಪೇಟೆ ಪಟ್ಟಣವು ದಿನೇ ದಿನೇ ಬೆಳೆಯುತ್ತಿದ್ದು, ಒಟ್ಟಾರೆ ೮.೩೩ ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ಪಟ್ಟಣಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಆದ್ಯ ಕರ್ತವ್ಯವಾಗಿದೆ. ರಸ್ತೆ, ನೀರು, ಚರಂಡಿ, ನೈರ್ಮಲ್ಯ, ಬೀದಿ ದೀಪ ವ್ಯವಸ್ಥೆಗಳು ಈಗಿನ ಪರಿಸ್ಥಿತಿಗೆ ಅನುಗುಣವಾಗಿ ವೈಜ್ಞಾನಿಕವಾಗಿ ಕೈಗೊಳ್ಳಬೇಕಿದೆ. ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ಧಿ ಕಾರ್ಯಗಳಿಗೂ ಬಜೆಟ್ನಲ್ಲಿ ಅನುದಾನ ಒದಗಿಸಲಾಗಿದೆ ಎಂದರು.
ಪAಚಾಯಿತಿಯ ಆದಾಯ ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಸರ್ಕಾರದ ಅನುದಾ ನಗಳನ್ನು ಹೊಂದಿಕೊAಡು ಆಡಳಿತ ಸಾಗಬೇಕಿದೆ. ಬರುವ ಆದಾಯವನ್ನು ಅಂದಾಜಿಸಿಕೊAಡು, ರಸ್ತೆ, ಚರಂಡಿ, ಬೀದಿದೀಪ, ಶುದ್ಧ ಕುಡಿಯುವ ನೀರು ವಿತರಣೆ, ಒಳಚರಂಡಿ, ವಾಣಿಜ್ಯ ಮಳಿಗೆಗಳ ನಿರ್ಮಾಣ, ಸ್ಥಿರಾಸ್ತಿ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಜನರ ಜೀವನ ಮಟ್ಟ ಸುಧಾರಣೆಯೊಂದಿಗೆ ಅಭಿವೃದ್ಧಿಯ ಆಡಳಿತಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಸಭೆಯಲ್ಲಿ ಆಡಳಿತಾಧಿಕಾರಿ ನವೀನ್ ಕುಮಾರ್, ಪಂಚಾಯಿತಿ ಸದಸ್ಯರು ಗಳಾದ ಪಿ.ಕೆ. ಚಂದ್ರು, ಬಿ.ಸಿ. ವೆಂಕ ಟೇಶ್, ಶೀಲಾ ಡಿಸೋಜ, ಮೃತ್ಯುಂ ಜಯ, ಮಹೇಶ್, ಶುಭಕರ್, ಜಯಂತಿ ಶಿವಕುಮಾರ್, ನಾಗರತ್ನ, ಜೀವನ್, ಮೋಹಿನಿ ಅವರುಗಳು ಉಪಸ್ಥಿತರಿದ್ದರು.