ಮಡಿಕೇರಿ, ಮಾ. ೭: ಶ್ರೀಮಂಗಲ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ಶ್ರೀಮಂಗಲ ಸನಿಹದ ಇರ್ಪು ಶ್ರೀ ರಾಮೇಶ್ವರ ಕ್ಷೇತ್ರದ ಬಳಿ ಸ್ವಚ್ಛತಾ ಕಾರ್ಯ ಹಾಗೂ ಪ್ರವಾಸಿಗರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇರ್ಪು ಕ್ಷೇತ್ರದಲ್ಲಿ ಶಿವರಾತ್ರಿ ಪ್ರಯುಕ್ತ ದೇವರ ಉತ್ಸವಕ್ಕೆ ಚಾಲನೆ ದೊರೆತಿದ್ದು, ಈ ಅವಧಿಯಲ್ಲಿ ಹಾಗೂ ಶಿವರಾತ್ರಿ ಸಂದರ್ಭ ಅಧಿಕ ಸಂಖ್ಯೆಯ ಭಕ್ತಾದಿಗಳು ಪುಣ್ಯ ಸ್ನಾನಕ್ಕಾಗಿ ಆಗಮಿಸುವ ಹಿನ್ನೆಲೆ ಕೂಟದ ವತಿಯಿಂದ ಈ ಕಾರ್ಯ ನಡೆಸಲಾಯಿತು. ಜಲಪಾತ ಹಾಗೂ ರಕ್ಷಿತಾರಣ್ಯ ಸನಿಹ ಕಸ ತೆರವುಗೊಳಿಸಲಾಯಿತಲ್ಲದೆ ಆಗಮಿಸುವವರಿಗೆ ಈ ಬಗ್ಗೆ ಅರಿವು ಮೂಡಿಸಲು ಸದಸ್ಯರು ಕ್ರಮ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ನೆಲ್ಲೀರ ನೀನಾ ಪೂಣಚ್ಚ, ಉಪಾಧ್ಯಕ್ಷೆ ಕಾಳಿಮಾಡ ಸೀಮಾ ಪ್ರಶಾಂತ್, ಖಜಾಂಚಿ ಮಚ್ಚಮಾಡ ಶ್ವೇತಾ ಉದಯ, ನಿರ್ದೇಶಕರಾದ ಮಚ್ಚಾಮಾಡ ನಂದಿತಾ ಕಾರ್ಯಪ್ಪ, ರೇಷ್ಮ ವಿಜಯ್, ಚೋನಿರ ಪವಿ ರತನ್ ಮತ್ತಿತರರು ಪಾಲ್ಗೊಂಡಿದ್ದರು.