ವೀರಾಜಪೇಟೆ, ಮಾ. ೭: ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮತೋಲನವನ್ನು ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ ಲತೀಫ್ ಹೇಳಿದರು.

೨ನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ವೀರಾಜಪೇಟೆ ಫ್ರೆಂಡ್ಸ್ ಸಂಸ್ಥೆಯ ವತಿಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸನಿಹದ ಒಳಂಗಾಣ ಕ್ರೀಡಾಂಗಣದಲ್ಲಿ ಅಯೋಜಿಸ ಲಾಗಿತ್ತು. ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸ್ತುತ ಯುವಸಮೂಹ ಮೊಬೈಲ್ ಬಳಕೆಯಿಂದಾಗಿ ಕ್ರೀಡೆಗಳಿಂದ ವಿಮುಖವಾಗುತ್ತಿದೆ. ಶರೀರವನ್ನು ಸಮತೋಲನದಿಂದ ಕಾಪಾಡಿಕೊ ಳ್ಳಲು ಕ್ರೀಡೆಯು ಹೆಚ್ಚು ಪರಿಣಾಮ ಕಾರಿ ಎಂದ ಅವರು, ಕ್ರೀಡೆಗಳಲ್ಲಿ ಭಾಗವಹಿಸಲು ವಯಸ್ಸು ಮುಖ್ಯವಲ್ಲ. ಹುಮ್ಮಸ್ಸು ಮುಖ್ಯ ಎಂದರು.

ಉದ್ಯಮಿ ಸಿ.ಎ ನಸೀರ್ ಮಾತ ನಾಡಿ, ಯುವ ಜನತೆ ಮಾದಕ ವ್ಯಸನಕ್ಕೆ ದಾಸರಾಗುತ್ತಿರುವುದು ಆತಂಕಕಾರಿ. ಇದರಿಂದ ಅರೋಗ್ಯ ಮತ್ತು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ವಂತರಾಗಲು ಸಾಧ್ಯ ಎಂದರು.

ರಾಷ್ಟçಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ಆಶ್ರಫ್ ಟಿ.ಎಂ., ಶ್ರೀ ಮುತ್ತಪ್ಪ ಮಲಯಾಳಿ ಸಮಾಜಂನ ಅಧ್ಯಕ್ಷ ಸುಮೇಶ್ ಪಿ.ಜಿ., ಉದ್ಯಮಿ ಮೊಹಮ್ಮದ್ ಶರೀಫ್ ಮತ್ತು, ಜಿ.ಪಂ. ಮಾಜಿ ಸದಸ್ಯ ಪಿ.ಎಂ ಲತೀಫ್ ಅವರುಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹನೀಫ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೊಳುಮಂಡ ರಫೀಕ್, ವೀರಾಜಪೇಟೆ ಪುರಸಭೆಯ ಸದಸ್ಯ ಅಬ್ದುಲ್ ಜಲೀಲ್, ಉದ್ಯಮಿ ಹನೀಫ್, ಫ್ರೆಂಡ್ಸ್ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ರಾವೂಫ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜೇತರ ವಿವರ

ಡಬಲ್ಸ್ ವಿಭಾಗದಲ್ಲಿ ವೀರಾಜ ಪೇಟೆಯ ಜಾವೀದ್ ಮತ್ತು ಇರ್ಷಾದ್ ಜೋಡಿ ಪ್ರಥಮ, ಸುಂಟಿಕೊಪ್ಪದ ಹರ್ಷಾದ್ ಮತ್ತು ಜಂಷಾದ್ ಜೋಡಿ ದ್ವಿತೀಯ, ಹುಂಡಿಯ ಮುಸ್ತಾಫ ಮತ್ತು ರಿಯಾಜ್ ಜೋಡಿ ತೃತೀಯ ಸ್ಥಾನ, ವೀರಾಜಪೇಟೆಯ ನವಾಫ್ ಮತ್ತು ಯೂನಸ್ ಜೋಡಿ ನಾಲ್ಕನೇ ಸ್ಥಾನ ಗಳಿಸಿದರು. ಪ್ರಥಮ ಸ್ಥಾನ ಪಡೆದ ಜೋಡಿಗೆ ಆಕರ್ಷಕ ಟ್ರೋಫಿ ೧೫ ಸಾವಿರ ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. ೧೦ ಸಾವಿರ ನಗದು ಟ್ರೋಫಿ, ತೃತೀಯ ಸ್ಥಾನ ಗಳಿಸಿದ ತಂಡಕ್ಕೆ ರೂ. ೫ ಸಾವಿರ ನಗದು ಮತ್ತು ಟ್ರೋಫಿ ಹಾಗೂ ನಾಲ್ಕನೇ ಸ್ಥಾನ ಪಡೆದವರಿಗೆ ಟ್ರೋಫಿ ನೀಡಿ ಗೌರವಿಸಲಾಯಿತು.

ಪಂದ್ಯಾವಳಿಯ ಉತ್ತಮ ಆಟಗಾರ ಪ್ರಶಸ್ತಿಗೆ ಯೂನಸ್ ವೀರಾಜಪೇಟೆ ಮತ್ತು ರಫೀಕ್ ಕುಶಾಲನಗರ ಭಾಜನರಾದರು. ಪಿ.ಎಂ. ಲತೀಫ್ ಹಿರಿಯ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.