ಶಿವಪೂಜೆಯಲ್ಲಿ ಬಿಲ್ವಪತ್ರೆಯ ಮಹತ್ವ

ಭಾರತದ ಸಂಸ್ಕೃತಿಯಲ್ಲಿ ಯಾವುದೇ ಭಗವಂತನ ಪೂಜೆಯ ದಿವಸದಂದು ಆ ದೇವರಿಗೆ ಪ್ರಿಯವೆಂದು ಹೇಳಲಾಗುವ ಫಲಪುಷ್ಪ ಪತ್ರೆಗಳನ್ನು ಸಹ ಗೌರವಿಸುವುದು ಬಹಳ ಮೊದಲಿನಿಂದಲೂ ಬೆಳೆದುಬಂದಿದೆ. ಬಹುಶಃ ಶಿವರಾತ್ರಿಯಂದು ಶಿವನ ಪೂಜೆಗೆ ಬಳಸುವ ಫಲಪುಷ್ಪ ಮತ್ತು ಎಲೆಗಳಲ್ಲಿ ಬಿಲ್ವಪತ್ರೆಗೆ ಎಲ್ಲಿಲ್ಲದ ಪ್ರಾಶಸ್ತö್ಯವಿದೆ. ಶಿವನ ಪಾದ ಗಳಿಗೆ ಈ ಬಿಲ್ವಪತ್ರೆಯನ್ನು ಅರ್ಪಿಸಿ ಶಿವನನ್ನು ಪೂಜಿಸಿದರೆ ಎಲ್ಲ ಪಾಪಗಳು ಕ್ಷಣದೊಳಗೆ ನಾಶವಾಗುತ್ತವೆ ಎಂಬ ನಂಬಿಕೆಯೂ ಇದೆ. ಬಿಲ್ವಪತ್ರೆಯ ಮರವಿರುವ ಸ್ಥಳವು ಕಾಶಿಗೆ ಸಮಾನ ಎನ್ನುವ ಭಾವನೆಯೂ ಇದೆ.

ಈ ಬಿಲ್ವಪತ್ರೆಗೆ ಪ್ರತಿಯೊಂದು ದಂಟಿನಲ್ಲೂ ಮೂರು ಎಲೆಗಳು ಇರುತ್ತವೆ. ಈ ಎಲೆಗಳಲ್ಲಿ ಎಡಗಡೆಯಿರುವುದು ಬ್ರಹ್ಮನೆಂದೂ ಬಲಗಡೆ ಇರುವುದು ವಿಷ್ಣುವೆಂದೂ ಹಾಗೂ ಮಧ್ಯದಲ್ಲಿರುವುದು ಈಶ್ವರನೆಂದೂ ಪುರಾಣಗಳಲ್ಲಿ ವರ್ಣಿತವಾಗಿದೆ. ಈ ಬಿಲ್ವ ಪತ್ರೆಯ ಮುಂಭಾಗದಲ್ಲಿ ಅಮೃತವಿರುತ್ತದೆಂದೂ ಹಿಂಭಾಗದಲ್ಲಿ ಯಕ್ಷರು ನೆಲೆಸಿರುತ್ತಾರೆ ಎಂಬ ನಂಬಿಕೆಯೂ ಶಿವಭಕ್ತರಲ್ಲಿದೆ.

ಸ್ಕಂದಪುರಾಣದಲ್ಲಿ ಬಿಲ್ವಪತ್ರೆಯ ಬಗ್ಗೆ ಕೆಲವು ಮಾಹಿತಿಗಳು ದೊರಕುತ್ತವೆ. ಬಿಲ್ವಪತ್ರೆಯ ಮರವು ಪಾರ್ವತಿಯ ಬೆವರ ಹನಿಗಳಿಂದ ಹುಟ್ಟಿಕೊಂಡಿತAತೆ. ಅಗಜೆಯ ಬೆವರ ಹನಿಗಳು ಮಂದಾರಪರ್ವತದಲ್ಲಿ ಬಿದ್ದಾಗ ಹುಟ್ಟಿದ ಈ ಬಿಲ್ವಪತ್ರೆಯ ಮರದ ಬೇರಿನಲ್ಲಿ ಗಿರಿಜೆಯು ನೆಲೆಗೊಂಡಿದ್ದಾಳAತೆ. ಬಿಲ್ವಪತ್ರೆಯ ಮರದ ಕಾಂಡದಲ್ಲಿ ಮಹೇಶ್ವರಿಯಾಗಿಯೂ ಕೊಂಬೆಗಳಲ್ಲಿ ದಾಕ್ಷಾಯಿಣಿಯಾಗಿಯೂ ಎಲೆಗಳಲ್ಲಿ ಪಾರ್ವತಿಯಾಗಿಯೂ ಹಣ್ಣಿನಲ್ಲಿ ಕಾತ್ಯಾಯಿನಿಯಾಗಿಯೂ ಹೂವಿನಲ್ಲಿ ಗೌರಿಯಾ ಗಿಯೂ ಈಶ್ವರಿಯು ನೆಲೆಸಿರುವುದರಿಂದ ಚಿದಂಬರನಿಗೆ ಬಿಲ್ವಪತ್ರೆಯು ಬಹಳ ಮೆಚ್ಚುಗೆಯಂತೆ.

“ತ್ರಿದಳA ತ್ರಿಗುಣಾಕಾರಂ ತ್ರಿನೇತ್ರಂಚ ತ್ರಿಯಾಯುಧಂ ತ್ರಿಜನ್ಮ ಪಾಪ ಸಂಹಾರA ಏಕಬಿಲ್ವಂ ಶಿವಾರ್ಪಣಂ” ಎನ್ನುವ ಶಿವಸ್ತೋತ್ರವಿದೆ. ಎಂದರೆ, ಮೂರು ದಳ, ಮೂರು ಆಕಾರ, ಮೂರು ಕಣ್ಣು ಹಾಗೂ ಮೂರು ಶಸ್ತçವನ್ನು ಹೊಂದಿರುವ ಒಂದು ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದರೆ ಮೂರು ಜನ್ಮಗಳ ಪಾಪವೂ ಪರಿಹಾರವಾಗುತ್ತದೆ. ಬಿಲ್ವಪತ್ರೆಯ ಎಲೆಗಳು ಮೂರರ ಗಣದಲ್ಲಿ ಇದ್ದು ವಿಶ್ವದ ಸೃಷ್ಟಿ ಸ್ಥಿತಿ ಮತ್ತು ಲಯದ ಸಂಕೇತವೆAದು ಆಸ್ತಿಕರು ಭಾವಿಸುತ್ತಾರೆ.

ಬಿಲ್ವಪತ್ರೆಯನ್ನು ಭಾರತೀಯ ಸಂಸ್ಕೃತಿಯ ಲ್ಲಿಯೂ ಬಹಳ ಶ್ರೇಷ್ಠ ಹಾಗೂ ಪರಮಪವಿತ್ರ ಎಂದು ಬಿಂಬಿಸಲಾಗಿದೆ. ಹಲವಾರು ಧರ್ಮಗ್ರಂಥಗಳಲ್ಲಿಯೂ ಬಿಲ್ವಪತ್ರೆಯನ್ನು ಬಹಳ ಮಹತ್ವದ ಎಲೆ ಎಂದು ಭಾವಿಸಲಾಗಿದೆ. ಒಂದು ಮಂಡಲ ಎಂದರೆ ೪೮ ದಿವಸ ಬಿಲ್ವಪತ್ರೆಯ ಮರವನ್ನು ಪೂಜಿಸಿದರೆ ಮಕ್ಕಳಾಗದವರಿಗೆ ಸಂತಾನಪ್ರಾಪ್ತಿಯಾಗುವುದAತೆ. ಈ ಬಿಲ್ವಪತ್ರೆಯ ಮರಕ್ಕೆ ಶಿವದ್ರುಮ, ಶ್ರೀವೃಕ್ಷ ಎನ್ನುವ ಹೆಸರುಗಳೂ ಇವೆ. ಶ್ರೀಮಹಾವಿಷ್ಣುವು ಅಲಂಕಾರ ಹಾಗೂ ತುಳಸಿಯ ಪ್ರಿಯನಾದಲ್ಲಿ ಈಶ್ವರನು ಜಲಪ್ರಿಯ ಹಾಗೂ ಬಿಲ್ವಪ್ರಿಯ. ಶ್ರೀಮಹಾಲಕ್ಷಿö್ಮಯ ಬಲದ ಕೈಕಮಲದಿಂದ ಬಿಲ್ವಪತ್ರೆಯ ಮರವು ಹುಟ್ಟಿತು ಎನ್ನುವ ನಂಬಿಕೆಯೂ ಭಕ್ತರಲ್ಲಿದೆ. ಹೋಮ ಹವನಗಳಲ್ಲಿ ಬಿಲ್ವಪತ್ರದ ಕಡ್ಡಿಗಳನ್ನು ಉಪಯೋಗಿಸಿದರೆ ಶುಭವಾಗುತ್ತದೆ ಎನ್ನುವುದೂ ಒಂದು ನಂಬಿಕೆಯಾಗಿದೆ. ಬಿಲ್ವಪತ್ರದ ಕಡ್ಡಿಗಳ ಹೊಗೆಯಿಂದ ಸೊಳ್ಳೆ, ಜಿರಳೆಗಳು ನಾಶವಾ ಗುತ್ತವೆ. ಬಿಲ್ವಪತ್ರೆಯ ಮರವನ್ನು ನೆಟ್ಟವನಿಗೆ ಮರಣಾನಂತರ ಮುಕ್ತಿಯು ಸಿಕ್ಕಿ ಆತನಿಗೆ ಕೈಲಾಸದಲ್ಲಿ ಸ್ಥಾನವು ದೊರೆಯುತ್ತದೆ ಎನ್ನಲಾಗು ತ್ತದೆ. ಬಹುಶಃ ನಮ್ಮ ಪೂರ್ವಜರು ಪರಿಸರದ ರಕ್ಷಣೆಯನ್ನು ಮಾಡುವ ಉದ್ದೇಶದಿಂದ ಜನರಲ್ಲಿ ಧಾರ್ಮಿಕ ನಂಬಿಕೆಗಳನ್ನು ಬಲಪಡಿಸಿ ಬಿಲ್ವಪತ್ರೆಯ ಮರಗಳನ್ನು ನೆಡಿಸಲು ಚೋದನೆಯನ್ನು ನೀಡುತ್ತಿರಬಹುದು.

ಬಿಲ್ವಪತ್ರೆಯು ಆರೋಗ್ಯವನ್ನು ವರ್ಧಿಸುವ ಹಲವಾರು ವ್ಯಾಧಿಗಳನ್ನು ಬುಡಸಮೇತ ಕಿತ್ತೆಸೆ ಯುವ ಶಕ್ತಿಯನ್ನೂ ಹೊಂದಿದೆ. ಬಿಲ್ವಪತ್ರೆಯನ್ನು ನಿಯಮಿತವಾಗಿ ಸೇವಿಸಿದರೆ ಮಧುಮೇಹ ರೋಗವು ಹತೋಟಿಗೆ ಬರುತ್ತದೆ. ಇದರ ಹಣ್ಣಿನ ಸೇವನೆಯಿಂದ ಅಜೀರ್ಣ, ಅತಿಸಾರ ರಕ್ತದೊ ತ್ತಡದ ಸಮಸ್ಯೆಗಳು, ಪಿತ್ತ, ವಾತ, ಕಫ ಮುಂತಾದ ತೊಂದರೆಗಳು ಕಡಿಮೆಯಾಗುತ್ತವೆ. ಹೊಟ್ಟೆ ನೋವು, ಬೇಧಿಗೂ ಇದು ರಾಮಬಾಣವಾಗಿದೆ. ಆಯುರ್ವೇದದ ಚಿಕಿತ್ಸೆಯಲ್ಲಿ ಈ ಮರದ ಬಹುತೇಕ ಎಲ್ಲ ಭಾಗವನ್ನೂ ಔಷಧಿಯಾಗಿ ಬಳಸುತ್ತಾರೆ. ಬಿಲ್ವಪತ್ರೆಯು ವಿಷವನ್ನು ಅಳಿಸುವ ಅಂಶವನ್ನು ಹೊಂದಿದೆ. ಭಕ್ತಾದಿಗಳ ನಂಬಿಕೆಯAತೆ ಈ ಹಿಂದೆ ದೇವದಾನವರು ಸೇರಿ ಸಮುದ್ರಮಂಥನವನ್ನು ಮಾಡುವಾಗ ಈಶ್ವರನು ವಿಷವನ್ನು ಸೇವಿಸಿದನಂತೆ. ಆ ವಿಷದ ಪ್ರಭಾವದಿಂದ ಆತನ ಗಂಟಲು ಉರಿಯತೊಡ ಗಿತಂತೆ. ಶಿವನು ಬಿಲ್ವಪತ್ರದ ಎಲೆಗಳನ್ನು ತಿಂದಾಗ ಆ ವಿಷದ ನಂಜು, ಉರಿಯುವಿಕೆಯು ಅಳಿದುಹೋಯಿತಂತೆ.

ಈ ಬಿಲ್ವಪತ್ರೆಯ ಫಲವನ್ನು ಪೂಜಿಸಿ ಮನೆಯೊಳಗೆ ಇರಿಸಿದರೆ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ವ್ಯಾಪಾರ ವ್ಯವಹಾರಗಳು ಅಭಿವೃದ್ಧಿಗೊಳ್ಳುತ್ತವೆ, ಭೂತಬಾಧೆಗಳಿಂದಲೂ ಮುಕ್ತಿಯು ದೊರೆಯುತ್ತದೆ ಎನ್ನುವ ನಂಬಿಕೆಯು ಇವೆ. ಈಶ್ವರನಿಗೆ ಬಿಲ್ವದಂಡಿನ್ ಎಂಬ ಹೆಸರೂ ಇದೆ. ಪರಶಿವನು ಬಿಲ್ವಮರದ ದಂಡನ್ನು ಕೈಯಲ್ಲಿ ಹಿಡಿದಿರುವನು ಎನ್ನುವುದು ಇದರ ಅರ್ಥವಾಗಿದೆ. ಈಶ್ವರನು ಬಿಲ್ವಪತ್ರೆಯ ಮರದ ನೆರಳಿನಲ್ಲಿ ವಾಸವಾಗಿರುತ್ತಾನೆ, ಅಲ್ಲಿ ಯಾವುದೇ ಭೂತಪ್ರೇತಗಳ ಬಾಧೆಗಳು ಇರುವುದಿಲ್ಲವೆನ್ನುತ್ತಾರೆ.

ಭಾರತೀಯ ಹಬ್ಬಗಳಲ್ಲಿ ಶಿವರಾತ್ರಿಯು ಸಹ ಒಂದು ಪ್ರಮುಖ ಹಬ್ಬವಾಗಿದ್ದು ಹಗಲು ಉಪವಾಸವಿದ್ದು ರಾತ್ರಿಯಿಡೀ ಶಿವನನ್ನು ಸ್ತುತಿಸುತ್ತ ಜಾಗರಣೆಯನ್ನು ಮಾಡಿದರೆ ಎಲ್ಲ ಭವಬಂಧನಗಳು ಮುಕ್ತಿಗೊಳ್ಳುತ್ತವೆ ಎಂದು ಹಿಂದಿನಿAದಲೂ ಬಂದ ನಂಬಿಗೆಯಾಗಿದ್ದು ಈ ದಿವಸದಲ್ಲಿ ಶಿವನ ಆರಾಧನೆಗೆ ಬಿಲ್ವಪತ್ರೆಯನ್ನೂ ಬಳಸಿದಲ್ಲಿ ಹೆಚ್ಚಿನ ಫಲವು ದೊರೆಯುತ್ತದೆ ಯಂತೆ. ಹಾಗಾಗಿ ಎಲ್ಲರೂ ಮನೆಯ ಅಂಗಳದ ಮೂಲೆಯಲ್ಲಿ ಈ ಮರದ ಸಸಿಯೊಂದನ್ನು ನೆಟ್ಟರೆ ಇದು ಗಾಳಿಯನ್ನು ಶುದ್ಧಗೊಳಿಸು ವುದಲ್ಲದೆ ಔಷಧಿಯಾಗಿಯೂ ಬಳಸಲು ಸಾಧ್ಯವಾಗುತ್ತದೆ.

ಆಸ್ತಿಕರಿಗೆ ಮಾನಸಿಕ ಸ್ಥೆöÊರ್ಯವನ್ನು ಕೊಡುವುದಲ್ಲದೆ ಶಿವನ ಪೂಜೆಗೂ ಇದು ಲಭ್ಯ ವಾಗುತ್ತದೆ.

-ಕಿಗ್ಗಾಲು ಎಸ್. ಗಿರೀಶ್,

ಮೂರ್ನಾಡು

ಶಿವ ಮಹಿಮೆ

ಶಿವರಾತ್ರಿ ಈ ದಿನದಂದು ಕೈಲಾಸವಾಸ ಪರಶಿವನನ್ನು ಕೋಟಿ-ಕೋಟಿ ಜನರು ಭಜಿಸಿ ಪೂಜಿಸುತ್ತಾರೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಶಂಭೋ ಶಂಕರನನ್ನು ನೆನೆದು ಪುನೀತರಾಗುತ್ತಾರೆ. ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವನಿಗೆ ಶಿವರಾತ್ರಿಯಂದು ದೇಶಾದ್ಯಂತ ವಿಶೇಷ ಪೂಜೆಗಳು ನೆರವೇರುತ್ತವೆ. ಇಡೀ ಭಾರತದಾದ್ಯಂತ ಬಹುತೇಕ ಎಲ್ಲಾ ಭಾಗಗಳಲ್ಲೂ ಆಚರಿಸುವ ಹಬ್ಬ ಇದು. ಈ ಹಬ್ಬದಂದು ದಿನವಿಡೀ ಪೂಜೆ, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಸಂಪ್ರದಾಯವಿದೆ.

ಶಿವರಾತ್ರಿಯ ದಿನರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ ನಡೆಯುತ್ತದೆ. ಆದರೆ ಪೂಜೆ, ಭಜನೆ ನಡೆಯುವ ವಿಶೇಷ ಆಚರಣೆ, ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ, ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ.

ಶಿವನಿಗೆ ಅತೀ ಶ್ರೇಷ್ಠವಾಗಿರುವ ಬಿಲ್ವಪತ್ರೆಯನ್ನು ಅರ್ಪಿಸಿ, ತಿಲಗಿ ಪುಷ್ಪ, ಶಿವಲಿಂಗವನ್ನು ಅಲಂಕಾರ ಮಾಡಿ ಶಿವನನ್ನು ಭಜಿಸಿದರೆ, ಪಾಪಗಳು ಪರಿಹಾರವಾಗುತ್ತವೆ. ಮೋಡಗಳೇ ಇಲ್ಲದ ಶುಭ್ರ ಆಕಾಶದಲ್ಲಿ ಬಂದಿರುವ ಚಂದ್ರನ ಬೆಳಕಿನಲಿ ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದರೆ ಅತ್ಯಂತ ಶ್ರೇಷ್ಠ ಎಂಬ ನಂಬಿಕೆಯಿದೆ. ಶಿವರಾತ್ರಿಯ ದಿನವಿಡಿ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಸಕಲ ಪಾಪಗಳೂ ಕಳೆಯುತ್ತವೆ ಎಂದು ನಂಬಲಾಗಿದೆ.

ಎಲ್ಲಾ ಜೀವ ರಾಶಿಗಳನ್ನು ಪೊರೆಯುವ ಶಿವ ಎಲ್ಲಾ ಆಡಂಬರಗಳಿAದ ಮುಕ್ತ. ಆತ ಆಭರಣ ಪ್ರಿಯನಲ್ಲ. ಅಲಂಕಾರ ಪ್ರಿಯನೂ ಅಲ್ಲ. ಭಸ್ಮವನ್ನು ಬಳಿದುಕೊಂಡು ಹುಲಿಯ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿರುವ ಸರಳ ಮತ್ತು ಅಮೋಘ ಶಕ್ತಿ.

-ವಸಂತಿ ರವೀಂದ್ರ, ಸೋಮವಾರಪೇಟೆ

ಶಿವನು ಕತ್ತಲು ಕಳೆದು

ಬೆಳಕು ಮೂಡಿಸುತ್ತಾನೆ

ಹಿಂದೂಗಳು ಆಚರಿಸುವ ಹಬ್ಬಗಳಲ್ಲಿ ಮಹಾ ಶಿವರಾತ್ರಿಯು ಪ್ರಮುಖವಾಗಿದೆ. ಸಾಮಾನ್ಯವಾಗಿ ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಮಹಾಶಿವರಾತ್ರಿಯು ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿಯಾಗಿದೆ. ಮಹಾ ಶಿವರಾತ್ರಿ ಹಬ್ಬವೂ ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಪುರಾಣ ಕಥೆಗಳ ಪ್ರಕಾರ ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನ ಶಿವರಾತ್ರಿ ಎನ್ನುತ್ತಾರೆ. ಮತ್ತೊಂದೆಡೆಯಲ್ಲಿ ದೇವತೆಗಳು ಹಾಗೂ ಅಸುರರ ಮಧ್ಯೆ ಸಮುದ್ರ ಮಂಥನ ನಡೆದ ಸಂದರ್ಭದಲ್ಲಿ ಶಿವನು ವಿಷವನ್ನು ಕುಡಿಯುತ್ತಾನೆ ಹಾಗೂ ಪಾರ್ವತಿ ದೇವಿಯು ರಾತ್ರಿಯಿಡೀ ಗಂಟಲಿಗೆ ವಿಷ ಇಳಿಯದಂತೆ ತಡೆದಳು ಎಂದು ಹೇಳಲಾಗುತ್ತದೆ. ಮಾತ್ರವಲ್ಲದೆ ಭಗೀರಥನ ತಪಸ್ಸಿಗೆ ಮೆಚ್ಚಿ ಶಿವನು ಗಂಗೆಯನ್ನು ಭೂಮಿಗೆ ಹರಿಸಿದ್ದ ದಿನ ಎಂದು ಹೇಳಲಾಗುತ್ತದೆ. ಪರಶಿವನನ್ನು ಭಕ್ತರು ಶಿವರಾತ್ರಿಯಂದು ಭಕ್ತಿಯಿಂದ ಪ್ರಾರ್ಥಿಸಿ ಪೂಜಿಸುತ್ತಾರೆ. ಏಕೆಂದರೆ ಶಿವನು ಭಕ್ತರ ಪ್ರೀತಿಯ ದೇವನಾಗಿದ್ದಾನೆ. ಆತನನ್ನು ಭಕ್ತರು ಪ್ರೀತಿಯಿಂದ ಜಗದೀಶ, ಸರ್ವೇಶ್ವರ, ಮಹಾದೇವ, ರುದ್ರ, ನಟರಾಜ, ನಂಜುAಡೇಶ್ವರ, ಮಂಜುನಾಥೇಶ್ವರ, ಈಶ್ವರ ಹೀಗೆ ಇನ್ನೂ ಅನೇಕ ಹೆಸರಿನಿಂದ ಕರೆದು ಪೂಜಿಸುತ್ತಾರೆ. ಶಿವರಾತ್ರಿಯಂದು ನಡೆಸುವ ಶಿವಾಭಿಷೇಕ ಪೂಜೆ, ಜಾಗರಣೆ ಹಾಗೂ ಉಪವಾಸ ಪ್ರಧಾನ ಆಚರಣೆಯಾಗಿದೆ. ಶಿವರಾತ್ರಿಯಂದು ರಾತ್ರಿ ಪೂಜೆಯು ವಿಶಿಷ್ಟವಾಗಿದೆ. ಅಂದರೆ ಶಿವನು ಕತ್ತಲನ್ನು ಕಳೆದು ಬೆಳಕನ್ನು ಮೂಡಿಸುತ್ತಾನೆ ಎಂಬ ನಂಬಿಕೆ ಜನರಲ್ಲಿದೆ. ಅಜ್ಞಾನದಿಂದ ಸುಜ್ಞಾನವನ್ನು ಶಿವನು ಮೂಡಿಸುತ್ತಾನೆ. ಶಿವರಾತ್ರಿಯಂದು ಉಪವಾಸ ಮಾಡಿ ಜಾಗರಣೆಯನ್ನು ನಡೆಸಿ ಭಕ್ತಿಯಿಂದ ಶಿವನನ್ನು ಪೂಜಿಸಿದರೆ ಸಕಲ ಪಾಪಗಳು ಪರಿಹಾರವಾಗಿ ಮೋಕ್ಷವು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಭಕ್ತರ ಸಂಕಷ್ಟಗಳನ್ನು ಪರಿಹರಿಸಿ ಅವರ ಜೀವನದಲ್ಲಿ ಶಿವನು ಹೊಸ ಚೈತನ್ಯ ಹಾಗೂ ಸ್ಫೂರ್ತಿಯನ್ನು ತರುವನು ಎಂದು ಭಕ್ತರು ನಂಬುತ್ತಾರೆ. ಶಿವನನ್ನು ಬಿಲ್ವಪತ್ರೆ, ತಿಲಗಿ ಪುಷ್ಪದಿಂದ ಪೂಜಿಸಿದರೆ ಫಲ ಸಿಗುವುದೆಂದು ಭಕ್ತರು ನಂಬಿದ್ದಾರೆ.

-ಬಿ.ಎನ್. ಶಾಂತಿಭೂಷಣ್, ಉಪನ್ಯಾಸಕರು, ವೀರಾಜಪೇಟೆ.

ಶಿವನ ವಿವಿಧ ತಾಂಡವ ರೂಪ೪

ಶಿವನ ನಟರಾಜ ರೂಪದಂತೆ ತಾಂಡವ ರೂಪ ಪ್ರಸಿದ್ಧಿಯನ್ನು ಹೊಂದಿದ ರೂಪವಾಗಿದೆ. ಶಿವನ ತಾಂಡವ ನೃತ್ಯದಲ್ಲಿ ೭ ಪ್ರಕಾರಗಳಿವೆ. ಅವುಗಳೆಂದರೆ,

ಆನಂದ ತಾಂಡವ : ಶಿವನು ಆನಂದ ಮತ್ತು ಸಂತೋಷದ ಸ್ಥಿತಿಯಲ್ಲಿ ಈ ನೃತ್ಯವನ್ನು ಮಾಡುತ್ತಾನೆ. ಈ ನೃತ್ಯವು ಶಿವನ ಸಂತೋಷ ಮತ್ತು ಭಾವಪರವÀಶತೆಯನ್ನು ಸಂಕೇತಿಸುತ್ತದೆ. ಆನಂದ ತಾಂಡವದಲ್ಲಿ ಶಿವನನ್ನು ೪ ಕೈಗಳಿಂದ ಚಿತ್ರಿಸಲಾಗಿದೆ. ಆತನು ತನ್ನ ನಾಲ್ಕು ಕೈಗಳಲ್ಲಿ ಢಮರು, ಬೆಂಕಿ, ಬಲಗೈಯಲ್ಲಿ ಅಭಯ ಹಸ್ತ, ಎಡಗೈ ದಂಡ ಹಸ್ತದ ವರಗಳನ್ನು ನೀಡುವ ಮೂಲಕ ಚಿತ್ರಿಸಲಾಗಿದೆ. ಎಡಗಾಲು ಕುಂಚಿತ ಪಾದದಲ್ಲಿದೆ ಮತ್ತು ಬಲಗೈ ಮೇಲಿರುತ್ತದೆ. ಇದು ನೃತ್ಯವಾಗಿದೆ.

ಸಂಧ್ಯಾ ತಾಂಡವ : ಇದನ್ನು ಪ್ರದೋಷ ಸಮಯದಲ್ಲಿ ಅಂದರೆ ಮುಸ್ಸಂಜೆ ಸಮಯದಲ್ಲಿ ಶಿವನು ಮಾಡುತ್ತಾನೆ. ಮುಸ್ಸಂಜೆಯ ಸಮಯವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಈ ನೃತ್ಯದ ಪ್ರದರ್ಶನದ ಸಮಯದಲ್ಲಿ ಇತರ ದೇವತೆಗಳು ಶಿವನ ಸುತ್ತಲೂ ನಿಂತು ಅವನನ್ನು ಹೊಗಳುತ್ತಾರೆ. ಅದು ಸೃಷ್ಟಿ ಮತ್ತು ಧರ್ಮಗ್ರಂಥಗಳ ನೃತ್ಯವಾಗಿದೆ. ಶಿವನು ಸಂಧ್ಯಾ ತಾಂಡವ ಮಾಡುವಾಗ ನಾವು ಅವನನ್ನು ಪೂಜಿಸಿದರೆ ಆತನ ಆಶೀರ್ವಾದವನ್ನು ಪಡೆದುಕೊಳ್ಳಬಹುದು ಎನ್ನುವ ಉಲ್ಲೇಖವಿದೆ. ಇದು ಹರ್ಷವುಂಟು ಮಾಡುವ ನೃತ್ಯವಾಗಿದೆ.

ಕಾಳಿಕಾ ತಾಂಡವ : ಶಿವನ ಕಾಳಿಕಾ ತಾಂಡವವನ್ನು ಶಕ್ತಿ ತಾಂಡವ ಎಂದೂ ಕೂಡ ಕರೆಯಲಾಗುತ್ತದೆ. ರುದ್ರ ತಾಂಡವದ ಇನ್ನೊಂದು ರೂಪವೇ ಕಾಳಿಕಾ ತಾಂಡವ. ಶಿವನು ಕಾಳಿಕಾ ತಾಂಡವವಾಡುವಾಗ ಶಿವನೊಂದಿಗೆ ಪಾರ್ವತಿಯೂ ನರ್ತಿಸುತ್ತಾಳೆ. ಕಾಳಿಯ ರೂಪದಲ್ಲಿ ಕೋಪದಿಂದ ಈ ನೃತ್ಯವನ್ನು ಮಾಡುತ್ತಾರೆ. ಶಿವನು ಸಾಮಾನ್ಯವಾಗಿ ಹೆಚ್ಚು ಕೋಪಗೊಂಡಾಗ ಈ ನೃತ್ಯವನ್ನು ಮಾಡುತ್ತಾನೆ. ಕಾಳಿಯ ರೂಪದಲ್ಲಿ ಕಾಳಿಕಾ ತಾಂಡವವನ್ನಾಡುತ್ತಾನೆ.

ತ್ರಿಪುರ ತಾಂಡವ : ೩ ಲೋಕಗಳಲ್ಲಿ ತಲಾ ಒಂದೊAದು ಲೋಕದಲ್ಲೂ ೩ ಕೋಟೆಗಳನ್ನು ನಿರ್ಮಿಸಿದ ಮತ್ತು ಎಲ್ಲೆಡೆ ಜೀವಿಗಳ ಮೇಲೆ ಹಾನಿ ಉಂಟುಮಾಡುವ ಅಸುರ ತ್ರಿಪುರಾಸುರನನ್ನು ಕೊಂದ ನಂತರ ಶಿವನು ಈ ನೃತ್ಯವನ್ನು ಮಾಡುತ್ತಾನೆ. ಶಿವನು ತ್ರಿಪುರಾಂತಕಮೂರ್ತಿಯAತೆ ಪ್ರಕಟಗೊಳ್ಳುತ್ತಾನೆ ಮತ್ತು ಒಂದೇ ಬಾಣದ ಹೊಡೆತದಿಂದ ೩ ಕೋಟೆಗಳನ್ನು ನಾಶಪಡಿಸುತ್ತಾನೆ. ತ್ರಿಪುರಾಸುರನೆಂಬ ಅಸುರನನ್ನು ಕೊಲ್ಲಲು ಶಿವನು ಈ ನೃತ್ಯ ಮಾಡಿರುವುದರಿಂದ ಇದನ್ನು ತ್ರಿಪುರ ತಾಂಡವ ಎಂದು ಕರೆಯಲಾಗುತ್ತದೆ.

ಗೌರಿ ತಾಂಡವ : ತ್ರಿಪುರ ತಾಂಡವದAತೆ ಶಿವನ ಈ ತಾಂಡವ ನೃತ್ಯವೂ ಕೂಡ ಒಂದು ರೀತಿಯ ರೌದ್ರ ತಾಂಡವ. ಈ ನೃತ್ಯವನ್ನು ಮಾಡುವಾಗ ಮಾತ್ರ ಶಿವನು ಪಾರ್ವತಿಯೊಂದಿಗೆ ಗೌರಿ ರೂಪದಲ್ಲಿರುತ್ತಾರೆ. ಆನಂದ ಮತ್ತು ಸಂಧ್ಯಾ ತಾಂಡವದಲ್ಲಿ ಶಿವನು ತನ್ನ ಜಟೆಯನ್ನು ಕಟ್ಟಿ ನೃತ್ಯವನ್ನು ಮಾಡುತ್ತಾನೆ. ಆದರೆ ಗೌರಿ ತಾಂಡವ, ತ್ರಿಪುರ ತಾಂಡವಗಳAತಹ ರೌದ್ರ ತಾಂಡವವನ್ನಾಡುವಾಗ ಕೂದಲನ್ನು ಹರಡಿಕೊಂಡು ಕೋಪದಲ್ಲಿ ನೃತ್ಯವನ್ನು ಮಾಡುತ್ತಾನೆ.

ಸಂಹಾರ ತಾಂಡವ : ಹೆಸರೇ ಸೂಚಿಸುವಂತೆ, ಇದು ವಿನಾಶ ಮತ್ತು ಸರ್ವನಾಶದ ನೃತ್ಯ. ಶಿವನ ಎಲ್ಲಾ ತಾಂಡವ ನೃತ್ಯದಲ್ಲಿ ಇದು ಅತ್ಯಂತ ಹಿಂಸಾತ್ಮಕ. ದಕ್ಷ ಮಹಾರಾಜನ ಯಜ್ಞದ ಸಮಯದಲ್ಲಿ ಶಿವನ ಪತ್ನಿ ಸತಿಯು ಯಜ್ಞ ಕುಂಡಕ್ಕೆ ಹಾರಿ ಪ್ರಾಣವನ್ನು ತ್ಯಜಿಸಿದಾಗ ಶಿವನು ಸಂಹಾರ ತಾಂಡವವನ್ನು ಮಾಡುತ್ತಾನೆ. ಶಿವನ ಈ ನೃತ್ಯವೇ ದಕ್ಷ ಮಹಾರಾಜನ ತಲೆ ಕತ್ತರಿಸಲು ಮತ್ತು ಆತನ ಸೈನ್ಯದ ನಾಶಕ್ಕೆ ಕಾರಣವಾಯಿತು.

ಉಮಾ ತಾಂಡವ : ಇದು ಕೂಡ ಶಿವನ ರುದ್ರ ತಾಂಡವದ ಒಂದು ರೂಪ. ಈ ನೃತ್ಯದಲ್ಲಿನ ಒಂದೇ ಒಂದು ವ್ಯತ್ಯಾಸವೆಂದರೆ ಇದರಲ್ಲಿ ಪಾರ್ವತಿ ದೇವಿಯು ಉಮಾಳಾಗಿ ಶಿವನೊಂದಿಗೆ ನೃತ್ಯವನ್ನು ಮಾಡುತ್ತಾಳೆ. ಭಗವಾನ್ ಶಿವ ಮತ್ತು ಪಾರ್ವತಿ ದೇವಿಯು ಜೊತೆಯಾಗಿ ಅವರು ಪುರುಷ ಮತ್ತು ಪ್ರಕೃತಿಯ ಏಕತೆಯನ್ನು ಪ್ರತಿನಿಧಿಸುವ ನೃತ್ಯ ಮಾಡುತ್ತಾರೆ.

- ಶ್ವೇತಾ ಸುಬ್ರಮಣಿ, ತಿತಿಮತಿ.

ಓಂಕಾರಪ್ರಿಯನನ್ನು ಆರಾಧಿಸುವ ಹಬ್ಬ ಶಿವರಾತ್ರಿ

ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ "ಮಹಾ ಶಿವರಾತ್ರಿ" ತನ್ನದೇ ಹಿನ್ನೆಲೆ ಮತ್ತು ಆಚರಣೆಯಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ, ಹೆಸರಲ್ಲೇ ಇರುವಂತೆ ಈ "ಮಹಾ ಶಿವರಾತ್ರಿ" "ಓಂಕಾರ" ಪ್ರಿಯ ಶಿವನನ್ನು ಆರಾಧಿಸುವ ಹಬ್ಬವಾಗಿ ಮಹತ್ವವೆನಿಸಿದೆ, ಕೈಲಾಸಾಧೀಶ ಶಿವನಿಗೆ ಅತ್ಯಂತ ಪ್ರಿಯವಾದ ಈ ದಿನದಂದು ಶಿವನನ್ನು ಆರಾಧಿಸುವುದರಿಂದ ಶಿವ ತನ್ನ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಭಕ್ತರಿಗಿದೆ. ಈ ಹಬ್ಬವು ಹಲವು ಹಿನ್ನೆಲೆಗಳನ್ನು ಒಳಗೊಂಡಿದೆ, ಕೈಲಾಸನಾಥನಾದ ಶಿವ ಈ ದಿನದಂದು ಭೂಮಿಗೆ ಆಗಮಿಸಿ ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ. ಹಾಗಾಗಿ ಭಕ್ತಿ, ಭಾವ ಶುಚಿಯಿಂದ ವಿವಿಧ ಅಭಿಷೇಕಗಳ ಜೊತೆ ಪೂಜೆ ಪುನಸ್ಕಾರಗಳೊಂದಿಗೆ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಆಹಾರ ಸೇವಿಸದೇ ಉಪವಾಸ ಕೈಗೊಳ್ಳುತ್ತಾರೆ, ಆದ್ದರಿಂದ ಶಿವರಾತ್ರಿಗೆ ಹೆಚ್ಚು ಪಾವಿತ್ರ‍್ಯತೆ ಮತ್ತು ಪ್ರಾಮುಖ್ಯತೆ ಇದೆ,

ಮಾಘಮಾಸದ ಬಹುಳ ಚತುರ್ದಶಿಯ ರಾತ್ರಿಯೇ ಶಿವ ಪಾರ್ವತಿಯನ್ನು ವಿವಾಹವಾದ ಪವಿತ್ರ ದಿವಸವೆಂದೂ ಹೀಗಾಗಿ ಅಂದು ರಾತ್ರಿ ದೇವಾನು ದೇವತೆಗಳೆಲ್ಲರೂ ಜಾಗರಣೆ ಮಾಡಿ "ಗಿರಿಜಾ ಕಲ್ಯಾಣ" ವೀಕ್ಷಿಸಿ; ಶಿವಪಾರ್ವತಿಯರನ್ನು ಪೂಜಿಸಿದರಂತೆ ಹೀಗಾಗಿಯೇ ಜಾಗರಣೆ ಪದ್ಧತಿ ಆಚರಣೆಗೆ ಬಂದಿದೆ ಎಂದು "ಶಿವಪುರಾಣ"ದಲ್ಲಿ ಉಲ್ಲೇಖವಿದೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು, ರಾತ್ರಿ ವೇಳೆಯಲ್ಲಿ ಶಿವನು ಪಾರ್ವತಿ ಜೊತೆಯಲ್ಲಿ ಭೂಮಿಯಲ್ಲಿ ಸಂಚರಿಸುತ್ತ ಎಲ್ಲಾ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ, ಆ ಸಮಯದಲ್ಲಿ ಶಿವನನ್ನು ಪೂಜಿಸುವವರ ಪಾಪಗಳು ಪರಿಹಾರವಾಗುತ್ತವೆ ಎಂಬ ಪ್ರತೀತಿಯೂ ಇದೆ ! ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಟೆಯಲ್ಲಿ ಇಟ್ಟುಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನಲ್ಲಿ ಪ್ರಾರ್ಥಿಸಿದ. ಫಲವಾಗಿ ಆತನ ಭಕ್ತಿಗೆ ಮೆಚ್ಚಿ ಶಿವನು ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎಂದೂ ಸಹ ಪುರಾಣಗಳು ಹೇಳುತ್ತವೆ.

ದೇವತೆಗಳು ಮತ್ತು ರಾಕ್ಷಸರ ಜೊತೆಗಿನ ಯುದ್ಧದ ಪರಿಣಾಮ ಸಮುದ್ರ ಮಂಥನದಿAದ ಹೊರಹೊಮ್ಮಿದ ಹಾಲಾಹಲವನ್ನು; ಜಗತ್ತನ್ನು ವಿಷದಿಂದ ರಕ್ಷಿಸಲು ಶಿವನು ತಾನೇ ಕುಡಿಯುತ್ತಾನೆ, ಅದರ ಪರಿಣಾಮ ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗಿ ಶಿವನು ನೀಲಕಂಠನೆAದು ಖ್ಯಾತನಾಗುತ್ತಾನೆ. ಹಾಗಾಗಿ ಮಹಾ ಶಿವರಾತ್ರಿಯನ್ನು ಶಿವನು ಜಗತ್ತನ್ನು ವಿನಾಶದಿಂದ ರಕ್ಷಿಸಿದ ದಿನವೆಂದು ಸಹ ಆಚರಿಸಲಾಗುತ್ತದೆ.!

ಶಿವ ಪುರಾಣದಲ್ಲಿ ಶಿವನು ಪ್ರಪಂಚದ ಪಾಪಗಳಿಂದ ಮುಕ್ತಿ ಹೊಂದಲು ದೀರ್ಘ ಮತ್ತು ಕಠಿಣ ಧ್ಯಾನವನ್ನು ಕೈಗೊಂಡ ಫಲವಾಗಿ ಶಿವನಿಗೆ ಜ್ಞಾನೋದಯವಾಗಿ, ಯೋಗಿಯಾಗಿ ಮಹಾಸಿದ್ಧರಲ್ಲಿ ಮೊದಲಿಗನಾಗುತ್ತಾನೆ ಆದ್ದರಿಂದ ಮಹಾ ಶಿವರಾತ್ರಿಯನ್ನು ಶಿವನು ಮೊದಲ ಯೋಗಿಯಾದ ಮತ್ತು ಅಧ್ಯಾತ್ಮಿಕ ಮುಕ್ತಿಯನ್ನು ಪಡೆದ ದಿನವೆಂದೂ ಆಚರಿಸಲಾಗುತ್ತದೆ ಎಂಬ ಉಲ್ಲೇಖವೂ ಇದೆ.

ಶಿವನು ನಾದಪ್ರಿಯ, ಓಂಕಾರ ಪ್ರಿಯ, !ಪ್ರಪಂಚ ಹುಟ್ಟಿದಾಗ ಓಂಕಾರದ ನಾದ ಝೇಂಕರಿಸಿದ್ದು ಎಂಬುದು ಹಿಂದೂ ಧರ್ಮದವರ ನಂಬಿಕೆ. ಈ ಶಬ್ದವು ನಮ್ಮ ಅಂತರ್ ಜ್ಞಾನಕ್ಕೆ ನೇರವಾಗಿ ಸಂಪರ್ಕಿಸುವ ನಮ್ಮ ಜ್ಞಾನದ ಕಣ್ಣು ಎಂಬ ಉಲ್ಲೇಖವಿದೆ. ಅಂದರೆ ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂಚ ತ್ರಿಯಾಯುಧಂ, ತ್ರಿಜನ್ಮ ಪಾಪ ಸಂಹಾರA ಏಕಬಿಲ್ವಂ ಶಿವಾರ್ಪಣಂ’ ! ಎಂಬ ಸ್ತೋತ್ರ ಇದೆ. ಅಂದರೆ ಮೂರು ದಳ, ಮೂರು ಆಕಾರ, ಮೂರು ಕಣ್ಣು ಹಾಗೂ ಮೂರು ಆಯುಧವನ್ನು ಹೊಂದಿರುವ ಒಂದು ಬಿಲ್ವಪತ್ರೆಯನ್ನು ಭಕ್ತಿಯಿಂದ ಈಶ್ವರನಿಗೆ ಸರ್ಮಪಿಸಿದರೆ ಮೂರು ಜನ್ಮದ ಪಾಪವು ಪರಿಹಾರವಾಗುತ್ತದೆ ಎಂಬುದು ಈ ಸ್ತೋತ್ರದ ಅರ್ಥ.

-ಗೀತಾಂಜಲಿ ಎನ್.ಎಮ್, ಸೋಮವಾರಪೇಟೆ