ಮಡಿಕೇರಿ, ಮಾ. ೬: ಕವೇರಮುನಿಯ ನೆಲೆವೀಡು, ಕಾವೇರಿ ತಾಯಿಯ ಮಡಿಲಲ್ಲಿ ನೆಲೆನಿಂತು ಆರಾಧಿಸುತ್ತಿರುವ ಅದೆಷ್ಟೋ ದೇವಾನುದೇವತೆಗಳು ತನ್ನದೇಯಾದ ಐತಿಹಾಸಿಕ ಹಿನ್ನೆಲೆ, ಸಂಸ್ಕೃತಿಯೊAದಿಗೆ ಗ್ರಾಮದೆಲ್ಲೆಡೆ ನೆಲೆನಿಂತಿವೆ. ಅದರಂತೆ ಅಯ್ಯರ್ನಾಡ್, ಕುಯ್ಯಂಗೇರಿ ನಾಡಿಗೆ ಸೇರಿದ ಹೊದ್ದೂರು ಗ್ರಾಮದಲ್ಲಿ ಪ್ರಮುಖ ಐದು ದೇವಾನುದೇವತೆಗಳು ತನ್ನದೇ ಆದ ದಿವ್ಯಶಕ್ತಿಯಲ್ಲಿ ನೆಲೆನಿಂತಿವೆ. ಗ್ರಾಮದ ಭಕ್ತಜನತೆಯ ಮೇಲೆ ದೇವರು ಹೊದ್ದಿಕೊಂಡು (ಪೊದ್ದಿಯಂಡ್) ಬಂದಿರುವ ಕಾರಣ, ಹೊದ್ದೂರು (ಪೊದ್ದ್) ಎಂಬ ಹೆಸರಿನಿಂದ ಪ್ರಚಲಿತದಲ್ಲಿದೆ ಎಂದೂ ಹಿರಿಯರು ಹೇಳುತ್ತಾರೆ.
ಗ್ರಾಮದ ಪ್ರಮುಖ ದೇವತೆಗಳಾದ ಅಪ್ಪನ ಸ್ಥಾನದಲ್ಲಿ ನೆಲೆನಿಂತಿರುವ ಶ್ರೀ ಮಹದೇಶ್ವರ, ಅಮ್ಮನಾಗಿ ಶ್ರೀ ಭಗವತಿ, ಗ್ರಾಮದ ರಕ್ಷಕನಾಗಿ ಶ್ರೀ ಶಾಸ್ತç- ಈಶ್ವರ, ಕ್ಷೇತ್ರದ ಶಕ್ತಿ ದೇವತೆಗಳಾಗಿ ಶ್ರೀ ಭದ್ರಕಾಳಿ, ಶ್ರೀ ಚಾಮುಂಡಿ (ವಿಷ್ಣುಮೂರ್ತಿ) ಪ್ರಮುಖವಾದದ್ದು. ಇದೀಗ ಶಿಥಿಲಾವಸ್ಥೆಯಲ್ಲಿರುವ ಶ್ರೀ ಭಗವತಿ ಕ್ಷೇತ್ರ ಭಕ್ತವೃಂದದ ಸಹಕಾರದಿಂದ ಜೀರ್ಣೋದ್ಧಾರಗೊಂಡು ಪುನರ್ಪ್ರತಿಷ್ಠಾಪನೆಗೆ ಸಜ್ಜಾಗಿದೆ.
ಹಿನ್ನೆಲೆ : ಅಂದಾಜು ಸಾವಿರ ವರ್ಷಗಳ ಇತಿಹಾಸ. ಹಿಂದಿನ ಕಾಲಘಟ್ಟದಲ್ಲಿ ಅಗಸ್ತö್ಯಮುನಿ, ಕಣ್ವಮುನಿಯೊಂದಿಗೆ ಮಚ್ಚೇಂದ್ರನಾಥ ಗುರುಗಳು ಗ್ರಾಮಕ್ಕೆ ಆಗಮಿಸಿದ ಸಂದರ್ಭ ಸುದೀರ್ಘ ತಪೋಗೈದು ತಪೋಶಕ್ತಿಯ ಪರಿಣಾಮ ತ್ರಿಶಕ್ತಿರೂಪಿಣಿಯಾಗಿ ಉದ್ಭವಿಸಿದ ಕ್ಷೇತ್ರವೇ ಹೊದ್ದೂರು ಶ್ರೀ ಭಗವತಿ ಕ್ಷೇತ್ರ ಅಂದಿನ ಪೂರ್ವಕಾಲದಲ್ಲಿ ರಾಜ ವಂಶಸ್ಥರ ಆಳ್ವಿಕೆ ವೈಭವಯುತವಾಗಿ ನಡೆಯುತ್ತಿದ್ದಾಗ, ರಾಜ ಮಯೂರವರ್ಮನು ಗ್ರಾಮದ ನೆಲೆಶಕ್ತಿ ಭಗವತಿಯನ್ನು ಆರಾಧಿಸುತ್ತಿದ್ದನೆಂದು, ಆತನ ಸಂಸಾರ ದೇವಿಶಕ್ತಿಗೆ ಮಾರುಹೋದ ಫಲವಾಗಿ ವಿಶೇಷ ಪೂಜಾ ಆರಾಧನೆಯೊಂದಿಗೆ ಮುಂದೆ ಈ ಜಾಗವು ಶ್ರೀಚಕ್ರ ಹೊಂದಿದ ಭಗವತಿ ಕ್ಷೇತ್ರವಾಗಿ ಕೀರ್ತಿ ಗಳಿಸಿತೆಂದು ಪ್ರಶ್ನೆಯಲ್ಲಿ ಕಂಡುಬರುತ್ತದೆAದು ಹಿರಿಯರಾದ ಚೌರೀರ ಉದಯ ವಿವರಿಸುತ್ತಾರೆ. ಭಗವತಿಯ ಎಡ-ಬಲ ಭಾಗದಲ್ಲಿ ಶ್ರೀ ಗಣಾಧಿಪತಿ ಹಾಗೂ ಶ್ರೀ ನಾಗನ ಸಾನಿಧ್ಯವಿದೆ. ಕ್ಷೇತ್ರವು ಶಿಥಿಲಾವಸ್ಥೆಯಲ್ಲಿ ಕೂಡಿರುವುದನ್ನು ಗಮನಿಸಿದ ಗ್ರಾಮದ ಭಕ್ತರು ೨೦೧೭ರಲ್ಲಿ ಕೇರಳದ ಜ್ಯೋತಿಷ್ಯ ಪುರುಷೋತ್ತಮ್ ಅವರ ಮೂಲಕ ವಂಶಾರರೂಢ ಪ್ರಶ್ನೆ ಇಟ್ಟಲ್ಲಿ ಈ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸಿ ಷಡಾಧಾರ ಪ್ರತಿಷ್ಠೆ ಮೂಲಕ ಶಾಸ್ತೊçÃಕ್ತವಾಗಿ ದೇವಿಯನ್ನು ಪುನರ್ ಪ್ರತಿಷ್ಠಾಪಿಸಿದ್ದಲ್ಲಿ, ಗ್ರಾಮವು ಸುಭಿಕ್ಷೆಯೊಂದಿಗೆ, ಕ್ಷೇತ್ರ ಪ್ರಸಿದ್ಧಿ ಹೊಂದಲಿದೆಯೆAದು ಪ್ರಶ್ನಾ ವಿವರಣೆ ನೀಡಿದರು. ಅದರಂತೆ, ಮಂಗಳೂರಿನ ಶ್ರೀ ಮರಕಡ ಪರಾಶಕ್ತಿ ಮಠಾಧೀಶ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಪ್ರಶ್ನೆಯಿಟ್ಟು ಭಗವತಿ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಮುನ್ನುಡಿಯಿಟ್ಟರು. ಸುಮಾರು ೧ ಕೋಟಿ ೬೦ ಲಕ್ಷ ವೆಚ್ಚದಲ್ಲಿ ಕ್ಷೇತ್ರದ ನೀಲಿನಕಾಶೆ ತಯಾರಿಸಿ ಆಡಳಿತ ಮಂಡಳಿಯ ಮೂಲಕ ದಾನಿಗಳ ನೆರವಿನೊಂದಿಗೆ ಕ್ಷೇತ್ರದ ಜೀರ್ಣೋದ್ಧಾರ ಕೈಗೊಳ್ಳಲಾಯಿತು.
ನಾಡ ತಕ್ಕರಾಗಿ ಚೌರೀರ ಕುಟುಂಬ, ದೇವ ತಕ್ಕರಾಗಿ ನೆರವಂಡ ಕುಟುಂಬದ ಪ್ರಮುಖರು ಒಳಗೊಂಡAತೆ ಗ್ರಾಮ ದೇವತಾ ಕಾರ್ಯಕ್ಕೆ ತೆರಿಗೆ ಪಾವತಿಸುವ ಜವಾಬ್ದಾರಿಯುತ ಕುಟುಂಬದ ಪ್ರಮುಖರನ್ನೊಳಗೊಂಡ ಶ್ರೀ ಮಾದೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಚೌರೀರ ಮೇದಪ್ಪ, ಗೌರವ ಕಾರ್ಯದರ್ಶಿಯಾಗಿ ನೆರವಂಡ ಸಂಜಯ್ ಪೂಣಚ್ಚ ಕಾರ್ಯನಿರ್ವಹಿಸುತ್ತಿದ್ದಾರೆ.
ತಾ.೧೩ರಂದು ಪ್ರತಿಷ್ಠಾಪನೆ
ಕ್ಷೇತ್ರದಲ್ಲಿ ತಾ. ೭ರಿಂದ ಶ್ರೀ ನೀಲೇಶ್ವರ ಅರವತ್ತ್ ಬ್ರಹ್ಮಶ್ರೀ ಪದ್ಮನಾಭ ತಂತ್ರಿಯವರ ಮುಂದಾಳತ್ವದಲ್ಲಿ ವಾರದ ತನಕ ಧಾರ್ಮಿಕ ವೈದಿಕ ಪೂಜಾ ಕಾರ್ಯಗಳು ಜರುಗಲಿವೆ. ಕ್ಷೇತ್ರದ ಅರ್ಚಕ ಶ್ರೀಕಾಂತ್ ಭಟ್ ಸಹಕಾರ ನೀಡಲಿದ್ದಾರೆ.
ತಾ. ೧೩ರಂದು ಬೆಳಿಗ್ಗೆ ೮ರಿಂದ ೧೦.೩೦ ಗಂಟೆಯೊಳಗೆ ಮೇಷ ಲಗ್ನ ಶುಕ್ಲಪಕ್ಷ ಚತುರ್ಥ ತಿಥಿ ಸುಮುಹೂರ್ತದಲ್ಲಿ ಶ್ರೀ ಭಗವತಿ ದೇವಿಯ ಬ್ರಹ್ಮಕಲಶೋತ್ಸವದೊಂದಿಗೆ ಪುನರ್ ಪ್ರತಿಷ್ಠಾಪನೆಗೊಂಡು ಭಕ್ತರಿಗೆ ದರ್ಶನ ನೀಡುವುದರ ಮೂಲಕ ಆಶೀರ್ವದಿಸಲಿದ್ದಾಳೆ.
ವಾರ್ಷಿಕ ಹಬ್ಬ
ಗ್ರಾಮ ದೇವತೆಗಳ ವಾರ್ಷಿಕ ಹಬ್ಬದ ಕಟ್ಟು ತಾ. ೧೫ರಂದು ಭಗವತಿ ಕ್ಷೇತ್ರದ ಮುಂಭಾಗದಲ್ಲಿ ನಡೆಯಲಿದೆ. ತಾ. ೨೬ರಂದು ಅಂದಿಬೊಳಕ್, ತಾ. ೨೭ರಂದು ಪಟ್ಟಣಿ, ಬೇಡುಹಬ್ಬ, ತಾ.೨೮ರಂದು ಸಂಜೆ ೪ ಗಂಟೆಗೆ ನೂತನವಾಗಿ ಪ್ರತಿಷ್ಠಾಪನೆಗೊಂಡು ಶ್ರೀ ಭಗವತಿ ದೇವಿಯ ಅವಭೃತ ಸ್ನಾನ, ಚಂಡೆ - ಮದ್ದಳೆಯೊಂದಿಗೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಹಾಗೂ ವಿವಿಧ ನೃತ್ಯಬಲಿ, ತಾ. ೨೯ರಂದು ಕಲಶಪೂಜೆ, ತಾ.೩೦ರಂದು ಶ್ರೀ ಭದ್ರಕಾಳಿ ಹಾಗೂ ಬೀರಳಿ ದೇವರ ಕೋಲ, ತಾ. ೩೧ರಂದು ಸಂಜೆ ಕೊಟ್ಟಿಪಾಡ್ವೊ, ಏಪ್ರಿಲ್ ೧ರಂದು ರಾತ್ರಿ ಮೇಲೇರಿಗೆ ಅಗ್ನಿಸ್ಪರ್ಶ, ವಿವಿಧ ತೋಯತ ತೆರೆ, ತಾ.೨ರಂದು ಬೆಳಿಗ್ಗೆ ಕಲ್ಯಾಟಜ್ಜಪ್ಪನ ಕೋಲ ಬಳಿಕ ಶ್ರೀ ವಿಷ್ಣುಮೂರ್ತಿ ದೇವರ ಮೇಲೇರಿ, ಬಾರಣಿ ನಡೆಯಲಿದೆ.
ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ಪುನರ್ ಪ್ರತಿಷ್ಠಾಪನೆ ಸೇರಿದಂತೆ ಅನ್ನದಾನ ಕಾರ್ಯಕ್ಕೆ ಸಹಕರಿಸುವ ದಾನಿಗಳು Sಡಿi ಃhಚಿgಚಿvಚಿಣhi ಖಿemಠಿಟe ಖಿಡಿusಣ, SಃI ಒuಡಿಟಿಚಿಜ, ಂ/ಅ ಓo. ೩೭೭೩೧೧೫೫೯೫೦, IಈSಅ:SಃIಓ೦೦೦೭೯೧೦ಗೆ ನೀಡಲು ಸಮಿತಿ ಕೋರಿದೆ. ಮಾಹಿತಿಗಾಗಿ ಮೊ. ೯೦೦೮೭೪೯೧೮೧, ೯೮೪೫೮೨೧೨೫೫ ನ್ನು ಸಂಪರ್ಕಿಸಬಹುದು.
-ಕೂಡAಡ ಸಾಬ ಸುಬ್ರಮಣಿ, ಮೊ. ೯೮೪೫೫೭೧೨೯೦