ಸಿದ್ದಾಪುರ, ಮಾ. ೬: ಸಿದ್ದಾಪುರ ಗ್ರಾಮ ಪಂಚಾಯಿತಿಯ ವಿವಿಧ ಮಳಿಗೆಗಳ ವಾರ್ಷಿಕ ಹರಾಜಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಲಾಭಬಾರದೇ ಪಂಚಾಯಿತಿ ಆದಾಯ ಕುಂಠಿತಗೊAಡಿದೆ.

ಸಿದ್ದಾಪುರ ಗ್ರಾಮ ಪಂಚಾಯಿತಿಯ ೨೦೨೪-೨೫ನೇ ಸಾಲಿನ ವಾರ್ಷಿಕ ಹರಾಜು ಪ್ರಕ್ರಿಯೆಗಳು ಮಂಗಳವಾರದAದು ಪಂಚಾಯಿತಿ ಅಧ್ಯಕ್ಷೆ ಪ್ರೇಮಗೋಪಾಲ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಆದರೆ ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿಯ ಹರಾಜಿನಲ್ಲಿ ಲಕ್ಷಾಂತರ ಆದಾಯ ಕಡಿಮೆಗೊಂಡಿದೆ. ಕಳೆದ ವರ್ಷದಲ್ಲಿ ಸಂತೆ ಸುಂಕ ಎತ್ತುವಳಿಯು ರೂ. ೯ ಲಕ್ಷಕ್ಕೆ ಹರಾಜಾಗಿತ್ತು.

ಆದರೆ, ಈ ಬಾರಿ ಕೇವಲ ೭.೨ ಲಕ್ಷ ರೂಪಾಯಿಗೆ ಬಿಡ್ಡುದಾರರು ಪಡೆದುಕೊಂಡಿದ್ದು, ರೂ. ೨ ಲಕ್ಷ ಆದಾಯ ನಷ್ಟಗೊಂಡಿದೆ. ಹೊಳೆ ಮೀನು ಮಳಿಗೆ ಕಳೆದ ವರ್ಷ ಮೂರು ರೂ. ೨ ಲಕ್ಷ ರೂಪಾಯಿಗೆ ಹರಾಜು ಆಗಿದ್ದು, ಈ ಬಾರಿ ಲಕ್ಷಕ್ಕೆ ಹರಾಜಾಗಿರುತ್ತದೆ. ಇದಲ್ಲದೇ ಸಮುದ್ರ ಮೀನು ಮಳಿಗೆ ರೂ. ೬ ಲಕ್ಷಕ್ಕೆ ಕಳೆದ ಬಾರಿ ಹರಾಜು ಆಗಿದ್ದು, ಈ ಬಾರಿ ರೂ. ೫ ಲಕ್ಷ ಹಾಗೂ ಕುರಿಮಾಂಸ, ಹಂದಿಮಾಸ, ಕೋಳಿ ಮಾಂಸ ಮಾರಾಟದ ಹಕ್ಕು ಪಡೆಯಲು ಕಡಿಮೆ ಬಿಡ್ಡುದಾರರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಈ ಮೂರು ಹರಾಜುಗಳನ್ನು ಮುಂದೂಡ ಲಾಗಿದೆ. ಬಸ್ ನಿಲ್ದಾಣ ಸುಂಕವು ಕಳೆದ ವರ್ಷ ರೂ. ೫೫ ಸಾವಿರ ಈ ಬಾರಿ ೧ ಲಕ್ಷದ ೧೬ ಸಾವಿರಕ್ಕೆ ಹರಾಜು ಆಗಿರುತ್ತದೆ.

ಈ ಬಾರಿ ಹರಾಜಿನಲ್ಲಿ ಪಂಚಾಯಿತಿಯು ನಿಗದಿಪಡಿಸಿದ ಬೆಲೆಗೆ ಹರಾಜು ಪ್ರಕ್ರಿಯೆಗಳು ನಡೆಯದ ಹಿನ್ನೆಲೆಯಲ್ಲಿ ಪಂಚಾಯಿತಿ ಆಡಳಿತ ಮಂಡಳಿ ಮಧ್ಯಾಹ್ನದ ನಂತರ ಸಭೆ ಸೇರಿ ಚರ್ಚೆ ನಡೆಸಿತು. ಆದರೆ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ, ಆರೋಪ, ಪ್ರತ್ಯಾರೋಪ ನಡೆಯಿತು. ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸದೇ ಗೊಂದಲದ ವಾತಾವರಣ ಮೂಡಿತು.

ಏತನ್ಮಧ್ಯೆ ಹಳೇ ಕೋಳಿ ಮಾಂಸ ಮಾರಾಟದ ವ್ಯಾಪಾರಸ್ಥರು ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಗೊಂದಲಗಳ ನಡುವೆ ಹರಾಜು ಪ್ರಕ್ರಿಯೆಗಳು ಮುಕ್ತಾಯಗೊಂಡಿತು. ಹರಾಜು ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಳನಿಸ್ವಾಮಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಫೀಕ್, ಕಾರ್ಯದರ್ಶಿ ಮೋಹನ್ ಹಾಗೂ ಸದಸ್ಯರುಗಳು ಹಾಜರಿದ್ದರು.