(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಮಾ. ೬: ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಏತನ್ಮಧ್ಯೆ ಬಿಸಿಲ ಬೇಗೆಗೆ ಕಾಫಿ ಗಿಡಗಳು, ಕಾಳುಮೆಣಸು ಬಳ್ಳಿಗಳು ನೀರಿಲ್ಲದೆ ಒಣಗುತ್ತಿವೆ. ಜಿಲ್ಲೆಯಾದ್ಯಂತ ಶೇಕಡಾ ೯೫% ರಷ್ಟು ಕಾಫಿ ಕೊಯ್ಲು ಪೂರ್ಣಗೊಂಡಿದೆ. ಕಾಳುಮೆಣಸು ಕೊಯ್ಲು ಕೆಲವು ಕಡೆಗಳಲ್ಲಿ ಆರಂಭಗೊAಡಿದ್ದು, ಪೂರ್ಣಪ್ರಮಾಣದಲ್ಲಿ ಕೊಯ್ಲು ಪ್ರಾರಂಭಗೊAಡಿಲ್ಲ.
ಆದರೆ ಬಿಸಿಲಿನ ಬೇಗೆಯಿಂದ ಕಾಫಿ ಗಿಡಗಳು, ಕಾಳುಮೆಣಸು ಬಳ್ಳಿಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೀಗ ಬೆಳೆಗಾರರಿಗೆ ಎದುರಾಗಿದೆ. ಸಾವಿರಾರು ರೂ. ಖರ್ಚು ಮಾಡಿ ಮೋಟಾರು ಪಂಪ್ ಬಳಸಿ ಸ್ಪಿçಂಕ್ಲರ್ ಮೂಲಕ ಕಾಫಿ ತೋಟಗಳಿಗೆ ನೀರು ಹಾಯಿಸುತ್ತಿದ್ದಾರೆ. ಕಾಫಿ ಕೊಯ್ಲು ಬಹುತೇಕ ಪೂರ್ಣಗೊಂಡಿದ್ದು ಬಿಸಿಲಿನ ಝಳಕ್ಕೆ ಕಾಫಿ ಗಿಡಗಳು ಒಣಗುತ್ತಿದ್ದು, ಕೃತಕವಾಗಿ ನೀರು ಹಾಯಿಸಿ ಮುಂದಿನ ವರ್ಷಕ್ಕೆ ಕಾಫಿ ಫಸಲನ್ನು ಉಳಿಸಲು ಮುಂದಾಗಿದ್ದಾರೆ. ಕೆರೆ, ಬೋರ್ವೆಲ್ ನೀರು ಬಳಸಿ ಸ್ಪಿçಂಕ್ಲರ್ ಮೂಲಕ ನೀರು ಹಾಯಿಸುತ್ತಿರುವುದರಿಂದ ಕಾಫಿ ಹೂವು ಕೂಡ ಅರಳಿವೆ.
ಕಾಳುಮೆಣಸು ಬಳ್ಳಿಗಳಿಗೆ ನೀರು ಅನಿವಾರ್ಯ!
ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಬಹುತೇಕ ಕಡೆಗಳಲ್ಲಿ ಕಾಳುಮೆಣಸು ಕೊಯ್ಲು ಆರಂಭಗೊಳ್ಳಲಿದ್ದು, ಈ ಅವಧಿಯಲ್ಲಿ ಕಾಳುಮೆಣಸು ಬಳ್ಳಿಗಳಿಗೆ ನೀರು ಅನಿವಾರ್ಯವಾಗಿವೆ. ದಶಕಗಳ ಹಿಂದೆ ಕೊಡಗಿನಲ್ಲಿ ಮಾರ್ಚ್ ತಿಂಗಳಲ್ಲಿ ಒಂದೆರಡು ಮಳೆ ಬರುತಿತ್ತು. ಈ ಅವಧಿಯಲ್ಲಿ ಮಳೆ ಸುರಿದರೆ ಕಾಳುಮೆಣಸು ಫಸಲು ಕೂಡ ಉತ್ತಮ ರೀತಿಯಲ್ಲಿ ಇರಲಿದ್ದು, ಮಳೆಯಿಂದ ಕಾಳುಮೆಣಸು ದಪ್ಪವಾಗಿ ಕೆಜಿ ಕೂಡ ಹೆಚ್ಚಳವಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಉಂಟಾಗುತ್ತಿರುವ ಹವಮಾನ ವೈಪರೀತ್ಯಗಳಿಂದಾಗಿ ಮಾರ್ಚ್ ತಿಂಗಳಲ್ಲಿ ಸುರಿಯುವ ಮಳೆಯೂ ಅಕಾಲಿಕವಾಗಿ ಜನವರಿ ತಿಂಗಳಲ್ಲಿ ಸುರಿದು ಕಾಫಿ ಫಸಲಿಗೆ ಧಕ್ಕೆಯಾಗುತ್ತಿರುವುದು ಅನುಭವವಾಗುತ್ತಿದೆ.
ಕಾಳುಮೆಣಸು ಕೊಯ್ಲಿಗೂ ಮುನ್ನ ಬಳ್ಳಿಗಳಿಗೆ ನೀರು ಹಾಯಿಸಲೇ ಬೇಕು. ಇಲ್ಲದಿದ್ದರೆ ಕಾಳುಮೆಣಸು ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ಸೊರಗಿ ಹೋಗುತ್ತವೆ. ಇದೀಗ ಜಿಲ್ಲೆಯಲ್ಲಿ ಬಿಸಿಲಿನ ತಾಪಕ್ಕೆ ಕರಿಮೆಣಸು ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಅನಿವಾರ್ಯವಾಗಿ ಬೆಳೆಗಾರರು ಕಾಳುಮೆಣಸಿನ ಬಳ್ಳಿಗಳಿಗೆ ಪಂಪ್ ಸೆಟ್ ಮೂಲಕ ನೀರು ಹಾಯಿಸಿ, ಬಳ್ಳಿಗಳನ್ನು ಜೀವಂತವಾಗಿ ಉಳಿಸುತ್ತಿದ್ದಾರೆ.
ಸಮಯದಲ್ಲಿ ಅರಳುತ್ತಿಲ್ಲ!
ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಯಿಂದ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅವಧಿಗೂ ಮುನ್ನವೇ ಕಾಫಿ ಹೂ ಅರಳುತ್ತಿವೆ.
ಸಾಮಾನ್ಯವಾಗಿ ಕಾಫಿ ಕೊಯ್ಲು ಪೂರ್ಣಗೊಂಡು ಮಾರ್ಚ್ ತಿಂಗಳ ಅಂತ್ಯದೊಳಗೆ ಸುರಿಯುವ ಮಳೆಗೆ ಜಿಲ್ಲೆಯಲ್ಲಿ ಕಾಫಿ ಹೂವು ಅರಳುತ್ತಿತ್ತು. ಆದರೆ ಜಿಲ್ಲೆಯಲ್ಲಿ ಹವಾಮಾನ ಬದಲಾವಣೆಯಿಂದ ಎಲ್ಲವೂ ಬದಲಾದಂತಿವೆ.
ಮಾರ್ಚ್ ತಿಂಗಳಲ್ಲಿ ಮಳೆ ಸುರಿದರೆ ಬೆಳೆಗಾರರಿಗೆ ತೋಟಗಳಿಗೆ ನೀರು ಹಾಯಿಸಿ ಕಾಫಿ ಗಿಡಗಳಲ್ಲಿ ಹೂವು ಅರಳಿಸುವ ಅವಶ್ಯಕತೆಯಿಲ್ಲ. ಆದರೆ ಮಳೆ ಬಾರದ ಕಾರಣ ಲಕ್ಷಾಂತರ ರೂ. ವ್ಯಹಿಸಿ ಕೃತಕವಾಗಿ ನೀರು ಹಾಯಿಸಿ ಕಾಫಿ ಗಿಡದಲ್ಲಿ ಹೂ ಅರಳಿಸುವಂತಾಗಿದೆ.
ಬತ್ತುತ್ತಿವೆ ಜಲಮೂಲಗಳು
ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಕೂಡ ಸ್ಪಿçಂಕ್ಲರ್ ಮೂಲಕ ಕಾಫಿ ತೋಟಗಳಿಗೆ ನೀರು ಹಾಯಿಸುವ ದೃಶ್ಯ ಕಣ್ಣಿಗೆ ಕಾಣುತ್ತವೆ. ಜೀವ ನದಿ ಕಾವೇರಿ ಕೂಡ ಬಿಸಿಲಿನ ತಾಪಕ್ಕೆ ಬತ್ತುತ್ತಿವೆ. ಆದರೆ ಮೋಟಾರು ಪಂಪ್ ಮೂಲಕ ಸ್ಪಿçಂಕ್ಲರ್ ಬಳಸಿ ನೀರು ಹಾಯಿಸಲು ಬೆಳೆಗಾರರಿಗೆ ನೀರು ಅಭಾವ ಎದುರಾಗಿದ್ದು, ಬೋರ್ವೆಲ್, ಕೆರೆಗಳಲ್ಲಿ ಬಿಸಿಲ ಬೇಗೆಗೆ ನೀರು ಬತ್ತುತ್ತಿವೆ.
ಬಹುತೇಕ ಬೆಳೆಗಾರರು ಕೆರೆ ಹಾಗೂ ಬೋರ್ವೆಲ್ನ ನೀರನ್ನು ಬಳಸಿ ಮೋಟರ್ ಪಂಪ್ ಮೂಲಕ ತೋಟಗಳಿಗೆ ನೀರು ಹಾಯಿಸುತ್ತಾರೆ.ಆದರೆ ಬೆಳೆಗಾರರು ತೋಟದಲ್ಲಿ ತೋಡಿರುವ ಕೃಷಿ ಹೊಂಡಗಳು ಬತ್ತುತ್ತಿದ್ದು, ನೀರಿನ ಅಭಾವ ಉಂಟಾಗಿದೆ. ಜಿಲ್ಲೆಯ ಬೆಳೆಗಾರರು ಮಾರ್ಚ್ ತಿಂಗಳಲ್ಲಿ ಒಂದೆರಡು ಮಳೆಯಾಗುವ ನಿರೀಕ್ಷೆಯಲ್ಲಿ ಇದ್ದಾರೆ. ಆದರೂ ಈ ಬಾರಿಯ ಬಿಸಿಲ ಝಳಕ್ಕೆ ಕಾವೇರಿ ತವರಿನಲ್ಲಿ ನೀರಿಗೂ ಹಾಹಕಾರ ಉಂಟಾಗಿದೆ.