ಕೂಡಿಗೆ, ಮಾ. ೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಸಮೀಪದ ಶಿರಹೂಳಲು ಗ್ರಾಮದಲ್ಲಿರುವ ಸರ್ವೆ ನಂಬರ್ ೧ ರಲ್ಲಿ ೧.೫೦ ಎಕರೆಗಳಷ್ಟು ಒತ್ತುವರಿಯಾಗಿದ್ದ ಪೈಸಾರಿ ಜಾಗವನ್ನು ಪೊಲೀಸ್ ಭದ್ರತೆ ನಡುವೆ ತೆರವುಗೊಳಿಸಲಾಯಿತು.
ನಿರ್ಮಲ ಎಂಬವರು ಒತ್ತುವರಿ ಮಾಡಿಕೊಂಡಿದ್ದ ದೂರಿನ ಅನ್ವಯ ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ನೇತೃತ್ವದಲ್ಲಿ ಪೊಲೀಸ್ ಭದ್ರತೆಯಲ್ಲಿ ಜಾಗವನ್ನು ತೆರವುಗೊಳಿಸಿ ಕಂದಾಯ ಇಲಾಖೆಯ ವತಿಯಿಂದ ಬೇಲಿ ಹಾಕಲಾಯಿತು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಕೆ.ಟಿ. ಗಿರೀಶ್, ಸದಸ್ಯರಾದ ಹೆಚ್.ಎಸ್. ರವಿ, ಟಿ.ಪಿ. ಹಮೀದ್, ಲಕ್ಷಿö್ಮ, ಮಂಗಳಾ ಪ್ರಕಾಶ್, ಜಯ ಶೀಲಾ, ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್, ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ಕಂದಾಯ ಇಲಾಖೆಯ
ಸಿಬ್ಬಂದಿ ವರ್ಗದವರು, ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.
ತಹಶೀಲ್ದಾರ್ ಜೀಪ್ಗೆ ಅಡ್ಡ
ಕುಶಾಲನಗರ ತಹಶೀಲ್ದಾರರ ಕಚೇರಿ ಮುಂಭಾಗದಲ್ಲಿ ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಜಾಗ ತೆರವಿಗೆ ತೆರಳುವ ಸಂದರ್ಭದಲ್ಲಿ ಶಿರಹೂಳಲು ಗ್ರಾಮದ ಗೌರಮ್ಮ ಎಂಬವರು ಜಾಗ ತೆರವಿಗೆ ಸಂಬAಧಿಸಿದAತೆ ನನಗೆ ನೋಟೀಸ್ ನೀಡಿರುವುದಿಲ್ಲ. ಅಲ್ಲದೆ ಪೈಸಾರಿ ಜಾಗದಲ್ಲಿ ನಮ್ಮ ಜಾಗವು ಇದೆ ಎಂದು ಜೀಪ್ಗೆ ಅಡ್ಡಲಾಗಿ ಕುಳಿತ ಘಟನೆ ನಡೆಯಿತು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಮಹಿಳೆ ಅವರ ಕುಟುಂಬದವರನ್ನು ಜಾಗದಿಂದ ಕಳುಹಿಸಲಾಯಿತು.