ಮಡಿಕೇರಿ, ಮಾ. ೬: ದಕ್ಷಿಣ ಕೊಡಗಿನ ದೇವರಪುರದ ರಾಜ್ಯ ಹೆದ್ದಾರಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬAಧಿಸಿದAತೆ ಮತ್ತೇ ಮೂರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರ ಸಂಖ್ಯೆ ೧೧ಕ್ಕೆ ಏರಿಕೆಯಾಗಿದೆ.

ಈ ಹಿಂದೆ ಒಟ್ಟು ೮ ಮಂದಿ ಯನ್ನು ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದರು. ಇದೀಗ ತಲಚೇರಿ ಮೂಲದ ಶಾಲಿನ್ (೩೦), ಟಿ. ಶ್ರೀಜಿತ್ (೩೮), ಕೆ. ವೈಷ್ಣವ್ (೨೭) ಎಂಬವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡು ಉಳಿದ ಆರೋಪಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಪೊಲೀಸರು ಬಲೆ ಬೀಸಿದ್ದಾರೆ.

ತಾ. ೯-೧೨-೨೦೨೩ ರಂದು ಕೇರಳ ರಾಜ್ಯದ ಶಮ್ಜಾದ್ ಎಂಬವರು ಮೈಸೂರಿಗೆ ತೆರಳಿ ಚಿನ್ನದ ಗಟ್ಟಿ ಮಾರಾಟ ಮಾಡಿ ವಾಪಾಸ್ ಕೇರಳಕ್ಕೆ ನಗದು ರೂ. ೫೦ ಲಕ್ಷದೊಂದಿಗೆ ತೆರಳುವ ಸಂದರ್ಭ ದೇವರಪುರದಲ್ಲಿ ದುಷ್ಕರ್ಮಿಗಳ ತಂಡ ಕಾರನ್ನು ಅಡ್ಡಗಟ್ಟಿ ಹಲ್ಲೆಗೈದು ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಹಣ ಕದ್ದೊಯ್ದು ಪರಾರಿಯಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಒಟ್ಟು ೮ ಮಂದಿಯನ್ನು ಬಂಧಿಸಿದ್ದರು. ಇದೀಗ ಮೂವರನ್ನು ಪತ್ತೆಹಚ್ಚಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್ ಮಾರ್ಗದರ್ಶನ, ವೀರಾಜಪೇಟೆ ಡಿ.ವೈ.ಎಸ್.ಪಿ. ಆರ್. ಮೋಹನ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳು ಭಾಗವಹಿಸಿದ್ದರು.