ಮಡಿಕೇರಿ, ಮಾ. ೭: ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದು, ತಾ. ೭ರಂದು ಮತ್ತೆ ೧೮ ನಾಮಪತ್ರ ಸಲ್ಲಿಕೆಯಾಗಿದೆ. ತಾಲೂಕು ನಿರ್ದೇಶಕ ಸ್ಥಾನಕ್ಕೆ ಸಂಬAಧಿಸಿದAತೆ ಮಡಿಕೇರಿ ತಾಲೂಕಿನಿಂದ ಬಿಜೆಪಿ ಬೆಂಬಲಿತ ಅಧಿಕೃತ ಅಭ್ಯರ್ಥಿಗಳಾದ ಹರೀಶ್ ಪೂವಯ್ಯ, ಹೊಸೂರು ಸತೀಶ್ ಹಾಗೂ ಕಾಂಗೀರ ಸತೀಶ್ ಅವರುಗಳಲ್ಲದೆ, ರವಿ ಬಸಪ್ಪ ಹಾಗೂ ಕೋಡಿರ ತಮ್ಮಯ್ಯ ಅವರುಗಳೂ ನಾಮಪತ್ರ ಸಲ್ಲಿಸಿದ್ದಾರೆ. ವೀರಾಜಪೇಟೆ ತಾಲೂಕಿನಿಂದಲೂ ಚಿಮ್ಮಣಮಾಡ ಕೃಷ್ಣ ಗಣಪತಿ ನಾಮಪತ್ರ ಸಲ್ಲಿಸಿರುವುದು ಬಿಜೆಪಿ ಪಕ್ಷದಲ್ಲೇ ಬಂಡಾಯ ಖಚಿತವಾದಂತಿದೆ. ಸೋಮವಾರಪೇಟೆ ತಾಲೂಕಿನಿಂದ ನಾಪಂಡ ಉಮೇಶ್, ಹೆಚ್.ಕೆ. ಮಾದಪ್ಪ ಹಾಗೂ ದಿನೇಶ್ ಹಾಗೂ ಹೆಚ್.ಆರ್. ಸುರೇಶ್, ಹೆಚ್.ಸಿ. ಶರತ್ ಶೇಖರ್ ಮತ್ತು ಹೇಮಂತ್ ಕುಮಾರ್ ಅವರುಗಳೂ ಉಮೇದುವಾರಿಕೆ ಸಲ್ಲಿಸಿದ್ದಾರೆ. ಜಿಲ್ಲಾಮಟ್ಟದ ಇತರೆ ನಿರ್ದೇಶಕ ಸ್ಥಾನಕ್ಕೆ ಇಂದು ಮನುಮುತ್ತಪ್ಪ ಅವರಿಂದಲೂ ನಾಮಪತ್ರ ಸಲ್ಲಿಕೆಯಾಗಿದ್ದು, ಈ ಸ್ಥಾನಕ್ಕೂ ಬಿಜೆಪಿಗರಲ್ಲಿ ಪೈಪೋಟಿ ಕಂಡುಬAದಿದೆ.
ಕೃಷಿಯೇತರ ಸಂಘದ ನಿರ್ದೇಶಕ ಸ್ಥಾನಕ್ಕೆ ಕನ್ನಂಡ ಸಂಪತ್ ಹಾಗೂ ಶರವಣಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಮಹಿಳಾ ನಿರ್ದೇಶಕ ಸ್ಥಾನಕ್ಕೆ ಇಂದು ಜಲಜಾ ಶೇಖರ್ (ಬಿಜೆಪಿ ಅಧಿಕೃತ ಅಭ್ಯರ್ಥಿ) ಹಾಗೂ ಸುಮಾ ಸುದೀಪ್ ಕೂಡ ನಾಮಪತ್ರ ಸಲ್ಲಿಸಿದ್ದರೆ, ಧವಸ ಭಂಡಾರ ನಿರ್ದೇಶಕ ಸ್ಥಾನಕ್ಕೆ ಕಿಲನ್ ಗಣಪತಿ ಅವರು ಉಮೇದುವಾರಿಕೆ ಸಲ್ಲಿಸಿದ್ದಾರೆ.