ಕೂಡಿಗೆ, ಮಾ. ೬: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಶಾಲನಗರ ತಾಲೂಕು ಹಾಗೂ ಹೆಬ್ಬಾಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹೆಬ್ಬಾಲೆ, ತೊರೆನೂರು ಮತ್ತು ಶಿರಂಗಾಲ ಗ್ರಾಮ ಪಂಚಾಯಿತಿಗಳ ಸಹಯೋಗ ದಲ್ಲಿ ಹೆಬ್ಬಾಲೆ ಗ್ರಾಮದ ಸರಕಾರಿ ಶಾಲಾ ಮೈದಾನ ದಲ್ಲಿ ಜಾನಪದ ಗ್ರಾಮ ಸಿರಿ ಕಾರ್ಯಕ್ರಮ ಜನಮನ ಸೂರೆಗೊಳಿಸಿತು.
ಗ್ರಾಮದ ಬಸವೇಶ್ವರ ದೇವಸ್ಥಾನ ದಿಂದ ಕಳಸ ಹೊತ್ತ ಮಹಿಳೆಯರು. ವಿವಿಧ ಕಲಾತಂಡಗಳ ಮೆರಗಿ ನೊಂದಿಗೆ ಅಲಂಕೃತ ಜಾನುವಾರುಗ ಳೊಂದಿಗೆ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಹಾಗೂ ಕಸಾಪ ಪದಾಧಿಕಾರಿಗಳು ಸಭಾಂಗಣದವರೆಗೆ ಭವ್ಯ ಮೆರವಣಿಗೆ ನಡೆಸಿದರು.
ಇದೇ ಸಂದರ್ಭ ರಾಷ್ಟç, ನಾಡ ಧ್ವಜಾರೋಹಣ, ಗ್ರಾಮೀಣ ವಸ್ತು ಪ್ರದರ್ಶನ ಒಳಗೊಂಡAತೆ ವೇದಿಕೆ ಹಾಗೂ ವಿವಿಧ ದ್ವಾರಗಳ ಉದ್ಘಾಟನೆ ಯನ್ನು ಗಣ್ಯರು ನೆರವೇರಿಸಿದರು.
ದಿ. ಹೆಚ್.ಕೆ. ಸುರೇಶ್ ಗೌಡರ ವೇದಿಕೆ, ದಿ.ಜಿ.ಎಂ.ಲಿAಗರಾಜಯ್ಯ ಸಭಾ ಮಂಟಪದಲ್ಲಿ ಹಮ್ಮಿಕೊಳ್ಳ ಲಾಗಿದ್ದ ವೇದಿಕೆ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಮಂತÀರ್ ಗೌಡ ಉದ್ಘಾಟಿಸಿ ಮಾತನಾಡಿ, ಹಿರಿಯರ ಆಚರಣೆಗಳು ಕಾಲಕ್ರ ಮೇಣ ಮಹತ್ವ ಕಳೆದುಕೊಳ್ಳುತ್ತಿವೆ. ದಿನಬಳಕೆಯ ಪುರಾತನ ವಸ್ತು, ಕೃಷಿ ಪರಿಕರಗಳು ಮೂಲೆ ಸೇರುತ್ತಿವೆ. ಇಂತಹ ವಸ್ತುಗಳ ಮಹತ್ವ ಅರಿವಿನ ಕೊರತೆ ಇಂದಿನ ಈ ಪರಿಸ್ಥಿತಿಗೆ ಕಾರಣವಾಗಿದೆ. ಆದರಿಂದ ನಮ್ಮ ಆಚಾರ ವಿಚಾರ, ದಿನಚರಿಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿ ಅರಿವು ಮೂಡಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪೂರಕ ಎಂದರು. ಯಾವುದೇ ದೇಶದಲ್ಲಿದ್ದರೂ ಕೂಡ ಕನ್ನಡ ಪ್ರೇಮ ಮರೆಯಾಗಬಾರದು, ಗ್ರಾಮೀಣ ಸೊಗಡನ್ನು ಬಿಂಬಿಸುವ ತಮ್ಮ ಸಂಸ್ಕೃತಿ. ಕಲೆ ಸಾಹಿತ್ಯವನ್ನು ಯುವ ಪೀಳಿಗೆಗೆ ತಿಳಿಸುವುದು ಬಹು ಮುಖ್ಯ ಎಂದು ಕರೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಹಳ್ಳಿಗಾಡಿನ ಸೊಬಗು, ಜಾನಪದ ಉತ್ಸವ, ಆಚರಣೆಗಳು ಗ್ರಾಮಸ್ಥರಲ್ಲಿ ಬಾಂಧವ್ಯ ವೃದ್ಧಿಸುವ ಉದ್ದೇಶದಿಂದ ಆಯೋ ಜನೆಯಾಗುತ್ತಿತ್ತು. ಮನರಂಜನೆಗಿAತ ಎಲ್ಲರೂ ಕೂಡ ದ್ವೇಷ, ವೈಷಮ್ಯ ಗಳನ್ನು ಬದಿಗೊತ್ತಿ ಒಗ್ಗೂಡಬೇಕು ಎನ್ನುವ ನಿಟ್ಟಿನಲ್ಲಿ ಹಮ್ಮಿಕೊಳ್ಳುತ್ತಿದ್ದ ಗ್ರಾಮೀಣ ಸಿರಿ ಕಾರ್ಯಕ್ರಮದ ಮಹತ್ವ ಎಲ್ಲರೂ ಅರಿತುಕೊಳ್ಳಬೇಕಿದೆ ಎಂದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪೂರ್ವಿಕರು ಬಳುವಳಿ ಯಾಗಿ ನೀಡಿದ ಆಚಾರ-ವಿಚಾರ ಇಂದಿನ ಪೀಳಿಗೆಗೆ ಪರಿಚಯಿಸುವುದು ಗ್ರಾಮಸಿರಿ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ಮೂಲಕ ಗ್ರಾಮಸ್ಥ ರನ್ನು ಒಗ್ಗೂಡಿಸು ವುದು, ಹಳ್ಳಿಗಾಡಿನ ಸೊಬಗು, ಸಂಸ್ಕೃತಿ, ಜನಪದದ ಸೊಬಗಲ್ಲಿ ಸಮೃದ್ಧವಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ನಾಗೇಶ್ ವಹಿಸಿದ್ದರು.
ವೇದಿಕೆಯಲ್ಲಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಕುಮಾರಿ, ಗ್ರಾಮಸಿರಿ ಕಾರ್ಯಕ್ರಮದ ಆರ್ಥಿಕ ಸಮಿತಿ ಅಧ್ಯಕ್ಷ ಹೆಚ್.ಕೆ.ನಟೇಶ್ ಗೌಡ, ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ. ರಮೇಶ್, ಹೆಬ್ಬಾಲೆ ದೇವಾಲಯ ಸಮಿತಿ ಅಧ್ಯಕ್ಷ ಬಸವರಾಜು, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್, ನಿರ್ದೇಶಕರಾದ ಫ್ಯಾನ್ಸಿ ಮುತ್ತಣ್ಣ, ವೆಂಕಟನಾಯಕ್, ದೇವರಾಜು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಟಿ.ಬಿ. ಜಗದೀಶ್, ಎಚ್.ಬಿ. ಚಂದ್ರಪ್ಪ, ಹೆಚ್. ಟಿ. ದಿನೇಶ್, ಹೆಚ್.ಎಸ್. ಲೋಕೇಶ್, ರಾಜಶೇಖರ್, ದಿನೇಶ್ ಕೆ.ಎಸ್., ಕೃಷ್ಣಗೌಡ, ನಾಗರಾಜ್, ಬೋಜೇಗೌಡ, ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸದಸ್ಯರುಗಳು ಇದ್ದರು.
ಶಿಕ್ಷಕಿ ಕವಿತ ಪುಟ್ಟೇಗೌಡ ನಿರೂಪಿಸಿ, ಹೆಚ್. ಜಿ. ಕುಮಾರ್ ಸ್ವಾಗತಿಸಿ, ಹೆಚ್. ಎಸ್. ಲೋಕೇಶ್ ವಂದಿಸಿದರು.
-ಕೆ.ಕೆ.ನಾಗರಾಜಶೆಟ್ಟಿ.