ಪೊನ್ನಂಪೇಟೆ, ಮಾ. ೫: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿಯ ಅಟ್ಟಹಾಸ ಮುಂದುವರೆದಿದ್ದು, ಹುಲಿ ದಾಳಿಗೆ ಮೇಯಲು ಬಿಟ್ಟಿದ್ದ ಗಬ್ಬದ ಹಸು ಬಲಿಯಾಗಿರುವ ಘಟನೆ ಪೊನ್ನಂಪೇಟೆ ತಾಲೂಕಿನ ತಾವಳಗೇರಿಯಲ್ಲಿ ನಡೆದಿದೆ. ತಾವಳಗೇರಿ ಗ್ರಾಮದ ರೈತ ತಡಿಯಂಗಡ ಕಂಬ ಕರುಂಬಯ್ಯ ಎಂಬವರ ಹಸುವನ್ನು ತಾ.೪ ರಂದು ಮೇಯಲು ಬಿಟ್ಟಿದ್ದ ಸಂದರ್ಭ ಹುಲಿ ದಾಳಿ ನಡೆಸಿ ಕೊಂದು, ಹಿಂಭಾಗವನ್ನು ತಿಂದು ಹಾಕಿದೆ. ಪ್ರಕರಣ ತಾ.೫ ರಂದು ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಶಂಕರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆ ನಡೆದ ಸ್ಥಳದಲ್ಲಿ ಬೋನ್ ಇರಿಸಿದ್ದಾರೆ ಹಾಗೂ ಹುಲಿ ಗುರುತು ಪತ್ತೆಗೆ ಕ್ಯಾಮರಾ ಅಳವಡಿಸಲಾಗಿದೆ.