ಭಾಗಮಂಡಲ, ಮಾ. ೫: ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ಚಿನ್ನತಪ್ಪ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ತಾ.೪ರ ಬೆಳಿಗ್ಗೆ ಕೃಷ್ಣನ ಕೊಳಲನ್ನು ಭಕ್ತಿಪೂರ್ವಕವಾಗಿ ಹೊರತರಲಾಯಿತು. ಈ ವರ್ಷ ಕೊಳಲನ್ನು ಚಿಂಗAಡ ಶಿವಾಜಿ ಹಿಡಿದು ದೇವಾಲಯದ ಮುಂಭಾಗ ದಲ್ಲಿ ಮೂರು ಬಾರಿ ನುಡಿಸಿದರು. ಬೆಳ್ಳಂಬೆಳಿಗ್ಗೆಯೇ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಕೊಳಲು ನಾದ ಆಲಿಸಿದರು. ನಿರ್ದಿಷ್ಟ ಜಾಗದಲ್ಲಿ ಕೊಳಲನ್ನು ಮೂರು ಬಾರಿ ನುಡಿಸಿ ದೇವಾಲಯಕ್ಕೆ ಹಿಂತಿರುಗಲಾಯಿತು. ಕತ್ತಲಾವರಿಸಿದ ನಂತರ ಕಲ್ಲು ಹೊಳೆಗೆ ತೆರಳಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ದೇವಾಲಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಣ್ಣೆ ಹರಕೆ ಸಲ್ಲಿಸಿದ್ದು ಕಂಡು ಬಂತು. ಮಧ್ಯಾಹ್ನ ೧.೨೬ರ ವೇಳೆಗೆ ಮತ್ತೆ ಕೊಳಲನ್ನು ಹಿಡಿದು ಊರ ಮಂದ್‌ಗೆ ಬಂದು ನಿರ್ದಿಷ್ಟ ಜಾಗದಲ್ಲಿ ಕೊಳಲನ್ನು ನುಡಿಸಲಾಯಿತು. ಊರ ಮಂದ್‌ಗೆ ಕೊಳಲನ್ನು ತರುವ ಸಂದರ್ಭ ಭಕ್ತಾದಿಗಳು ಕಣ್ತುಂಬಿಕೊAಡು ಆಲಿಸಿ ಪುನೀತರಾದರು. ಇದೇ ಸಂದರ್ಭದಲ್ಲಿ ಊರಮಂದ್‌ನಲ್ಲಿ ಗರುಡ ಪಕ್ಷಿಯೊಂದು ಆಕಾಶದಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಿ ತೆರಳಿತು. ಈ ಅಪೂರ್ವ ಸನ್ನಿವೇಶ ಭಕ್ತರಿಗೆ ವಿಶೇಷ ಎನಿಸಿತು.

ನಂತರ ನಾಳಿಯಂಡ ಮಾಣಿಯಿಂದ ಎತ್ತುಪೋರಾಟ ಹೊರಟ ಸಂದರ್ಭ ಶ್ವೇತವಸ್ತç ಧರಿಸಿದ ಮಹಿಳೆಯರು ಚೆಂಬುಚೆರ್ಕ್ನೊAದಿಗೆ ಊರಮಂದ್‌ಗೆ ಬಂದರು.

ಮೂರು ಬಾರಿ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಎತ್ತುಪೋರಾಟ ನಡೆಯಿತು. ಬಳಿಕ ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಊರಿನ ಕಟ್ಟು ಸಡಿಲಿಸಲಾಯಿತು. ಈ ಬಾರಿ ಬಿದ್ದಿಯಂಡ ಸುಗಂಧ ತೆಂಗಿನಕಾಯಿಗೆ ಗುಂಡನ್ನು ಹೊಡೆದರು. ನಂತರ ಊರ ಮಂದ್‌ನಿAದ ಧಾರಾಪೂಜೆ ನಡೆದ ಸ್ಥಳಕ್ಕೆ ಹಿಂತಿರುಗಲಾಯಿತು. ಶುದ್ಧ ಮುದ್ರಿಕೆಯಲ್ಲಿದ್ದವರನ್ನು ತಪ್ಪಡ್ಕ ಕಟ್ಟಿ ಆಹ್ವಾನಿಸಲಾಯಿತು. ಅಲ್ಲಿ ಹಲವರು ಹರಕೆ ಸಲ್ಲಿಸಿ ಅಕ್ಕಿ ಹಾಕಿದರು. ಬಳಿಕ ವಿವಿಧ ಪೂಜಾ ಕಾರ್ಯಕ್ರಮ ನಡೆದು ದೇವಾಲಯಕ್ಕೆ ತೆರಳಲಾಯಿತು.

ಊರಿನ ೧೪ ಕುಳದವರು ಭಾಗಿಯಾಗಿದ್ದ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ತಕ್ಕರಾದ ಬಿದ್ದಿಯಂಡ ಸುಭಾಷ್ ನೇತೃತ್ವದಲ್ಲಿ ಉತ್ಸವ ಸಾಂಗವಾಗಿ ನೆರವೇರಿದ್ದು ವಿಶೇಷವಾಗಿ ಕಂಡುಬAತು. ಭಂಡಾರ ಹಾಗೂ ಅನ್ನಸಂತರ್ಪಣೆ ಹಾಗೂ ಹರಕೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು.

ಚಿನ್ನತಪ್ಪ ಉತ್ಸವದಲ್ಲಿ ಅಯ್ಯಂಗೇರಿ ಗ್ರಾಮದ ಅಧಿಕ ಸಂಖ್ಯೆಯ ಗೊಲ್ಲಜನಾಂಗ ಬಾಂಧವರೊAದಿಗೆ ಗ್ರಾಮದ ೧೪ ಕುಳದವರು ಭಾಗಿಯಾಗಿದ್ದರು. ಉತ್ಸವದಲ್ಲಿ ತಕ್ಕರಾಗಿ ಬಿದ್ದಿಯಂಡ ಸುಭಾಷ್ ಕಾರ್ಯನಿರ್ವಹಿಸಿದರು.

-ಸುನಿಲ್ ಕುಯ್ಯಮುಡಿ