ನಾಪೋಕ್ಲು, ಮಾ. ೫: ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತ ಜನ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕಾಂಡAಡ ಜೋಯಪ್ಪ ಅವರ ಅಧ್ಯಕ್ಷತೆಯಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಸಭಾಂಗಣದಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ಬೊಳಂದAಡ ಲಲಿತಾ ನಂದಕುಮಾರ್ ಕಳೆದ ವರ್ಷದ ವಾರ್ಷಿಕ ವರದಿ, ಲೆಕ್ಕಪತ್ರಗಳನ್ನು ಮಂಡಿಸಿದರು.
ಇದಕ್ಕೆ ಸಂಬAಧಿಸಿದAತೆ ಮಾತನಾಡಿದ ಜಿ. ರಾಜೇಂದ್ರ ಕಳೆದ ವಾರ್ಷಿಕ ಮಹಾಸಭೆಯಲ್ಲಿ ದೇವಾಲಯವನ್ನು ಮುಜರಾಯಿ ಇಲಾಖೆಯಿಂದ ಮರಳಿ ಪಡೆಯಲು ಶಾಸಕರು, ಮುಖ್ಯಮಂತ್ರಿಗಳೊAದಿಗೆ ವ್ಯವಹರಿಸಲು ನಿರ್ಣಯ ಕೈಗೊಳ್ಳಲಾಗಿತ್ತು ಇದರ ವಿಚಾರದ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಜೋಯಪ್ಪ ಅವರು ಮುಂದಿನ ದಿನಗಳಲ್ಲಿ ಎಲ್ಲಾ ತಕ್ಕ ಮುಖ್ಯಸ್ಥರ ಸಭೆ ಕರೆದು ಚರ್ಚಿಸಿ ಕ್ರಮಕೈಗೊಳ್ಳಲಾಗುವದು ಎಂದರು. ದೇವಾಲಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಟ್ರಸ್ಟ್ನ ಅಗತ್ಯವಿದೆ. ಆದರೆ ಅದು ರಾಜಕೀಯ ರಹಿತವಾಗಿರಬೇಕು ಎಂದು ಸದಸ್ಯರುಗಳು ಅಭಿಪ್ರಾಯಪಟ್ಟರು.
ದೇವಾಲಯ ಮರಳಿ ಪಡೆಯುವುದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಸಮಸ್ಯೆ ಮಾತ್ರ ಅಲ್ಲ. ರಾಜ್ಯದ ೨೧ ದೇವಸ್ಥಾನಗಳ ಸಮಸ್ಯೆಯಾಗಿದೆ. ಇದು ಸಾಧ್ಯವಾಗದ ಕೆಲಸ. ಶಾಸಕರ ಸಲಹೆ ಪಡೆದು ಮುಂದುವರಿಯುವುದು ಉತ್ತಮ ಎಂದು ಅಂಜಪರವAಡ ಕುಶಾಲಪ್ಪ ಸಲಹೆ ನೀಡಿದರು.
ಸಂಘದ ನಿರ್ದೇಶಕ ಕಲಿಯಂಡ ಹ್ಯಾರಿ ಮಂದಣ್ಣ ಮಾತನಾಡಿ ಭಕ್ತರ ಹಣದಲ್ಲಿ ಭಕ್ತ ಜನಸಂಘ ದೇವಳದ ಅಭಿವೃದ್ಧಿ ನಡೆಸಿದೆ. ಮುಜರಾಯಿ ಇಲಾಖೆಯೊಂದಿಗೆ ಭಕ್ತ ಜನಸಂಘ ಸೇರಿಕೊಂಡು ದೇವಳದ ಅಭಿವೃದ್ಧಿ ಮಾಡುವದು ಒಳಿತು ಎಂದು ಸಲಹೆ ನೀಡಿದರು. ಈ ವಿಷಯದ ಬಗ್ಗೆ ಸಂಘದ ಮಾಜಿ ಅಧ್ಯಕ್ಷ ಕಲ್ಯಾಟಂಡ ಮುತ್ತಪ್ಪ, ನಿರ್ದೇಶಕರಾದ ಪಾಂಡAಡ ನರೇಶ್, ಬಾಚಮಂಡ ಲವ ಚಿಣ್ಣಪ್ಪ, ಉದಿಯಂಡ ಪೆಮ್ಮಯ್ಯ ಮತ್ತಿತರರು ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ಶಾಸಕರೊಂದಿಗೆ ಈ ಬಗ್ಗೆ ಸಲಹೆ ಪಡೆದು ಮುಂದಿನ ಕ್ರಮಕೈಗೊಳ್ಳುವುದಾಗಿ ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು.
ಭಕ್ತರು ಬೇರೆ ಅರ್ಚಕರನ್ನು ಕರೆದುಕೊಂಡು ಬಂದರೆ ಇಲ್ಲಿ ಪೂಜೆಗೆ ಅವಕಾಶ ನೀಡಬಾರದು ಎಂದು ಬೊಳಿಯಾಡಿರ ಸಂತು ಸುಬ್ರಮಣಿ ಸಲಹೆ ನೀಡಿದರು. ಒಂದು ಬಾರಿ ತುಲಾಭಾರಕ್ಕೆ ಬಳಸಿದ ಅಕ್ಕಿಯನ್ನು ಮರು ಬಳಕೆ ಮಾಡಬಾರದು ಎಂದು ಪರದಂಡ ಸದಾ ನಾಣಯ್ಯ ಸೂಚಿಸಿದರು.
ದೇವತಕ್ಕ ಮತ್ತು ಅಖಿಲ ಕೊಡವ ಸಮಾಜದ ೩ಐದನೇ ಪುಟಕ್ಕೆ (ಮೊದಲ ಪುಟದಿಂದ) ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ಮಾತನಾಡಿ ಮನುಷ್ಯನಲ್ಲಿ ಹಲವಾರು ನ್ಯೂನ್ಯತೆಗಳಿರುತ್ತದೆ. ರಾಜಕೀಯ ದೇವಳದೊಳಗೆ ಬರಬಾರದು. ನಮಗೆ ದೇವಳದ ಅಭಿವೃದ್ಧಿ ಮುಖ್ಯ. ಎಲ್ಲರೂ ಭಕ್ತ ಜನಸಂಘಕ್ಕೆ ಸಹಕಾರ ನೀಡಬೇಕು ಎಂದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪರದಂಡ ಡಾಲಿ, ನಿರ್ದೇಶಕರಾದÀ ಡಾ|| ಸಣ್ಣುವಂಡ ಕಾವೇರಪ್ಪ, ಕೋಡಿಮಣಿಯಂಡ ಸುರೇಶ್, ಬಡಕಡ ಸುರೇಶ್ ಬೆಳ್ಯಪ್ಪ, ಅನ್ನಡಿಯಂಡ ದಿಲೀಪ್, ಚೋಯಮಾಡಂಡ ಹರೀಶ್, ಕಾಂಡAಡ ಚರ್ಮಣ್ಣ ಮತ್ತಿತರು ಸಮಸ್ಯೆ ಮತ್ತು ಅಭಿವೃದ್ಧಿಗಳ ಬಗ್ಗೆ ಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕಾಂಡAಡ ಜೋಯಪ್ಪ ದೇವಳದ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಭಕ್ತರಿಗೂ ಅಭಿವಂದನೆ. ಕಳೆದ ೧೫ ವರ್ಷ ನಮ್ಮ ಸಮಿತಿ ಉತ್ತಮ ಅಭಿವೃದ್ಧಿ ನಡೆಸಿದೆ. ನೂತನ
ಸಮಿತಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಬೇಕು. ಟ್ರಸ್ಟ್ ರಚನೆ ಬಗ್ಗೆ ನೂತನ ಸಮಿತಿ ಶಾಸಕರ ಅಭಿಪ್ರಾಯಪಡೆದು ಮುನ್ನಡೆಯಬೇಕು ಎಂದರು.
ವೇದಿಕೆಯಲ್ಲಿ ಕಲಿಯಂಡ ಸುನಂದ, ಉದಿಯಂಡ ಸುರ ನಾಣಯ್ಯ, ನಾಟೋಳಂಡ ದಿಲೀಪ್, ಕಂಬೇಯAಡ ಬೊಳ್ಳಪ್ಪ ಇದ್ದರು. ಕೋಡಿಮಣಿಯಂಡ ಬೋಪಯ್ಯ, ಪ್ರಾರ್ಥನೆ, ಉಪಾಧ್ಯಕ್ಷ ಪರದಂಡ ಡಾಲಿ ಸ್ವಾಗತಿಸಿ, ಖಂಜಾAಚಿ ನಂಬಡಮAಡ ಸುಬ್ರಮಣಿ ವಂದಿಸಿದರು.
ನೂತನ ಆಡಳಿತ ಮಂಡಳಿ
ಸಭೆಯಲ್ಲಿ ಈ ಕೆಳಗಿನ ನೂತನ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಂಜಪರವAಡ ಕುಶಾಲಪ್ಪ, ಪರದಂಡ ಸುಮನ್ ಸುಬ್ರಮಣಿ, ಪರದಂಡ ನಾಣಯ್ಯ, ಕೇಲೇಟಿರ ರಂಜನ್ ಅಪ್ಪಚ್ಚು, ಕಲಿಯಂಡ ಗಿರೀಶ್, ಅಲ್ಲಾರಂಡ ಸನ್ನು ಅಯ್ಯಪ್ಪ, ಬಿಟ್ಟಿರ ಚೋಂದಮ್ಮ, ಕುಲ್ಲೇಟಿರ ಅರುಣ್ ಬೇಬ, ಕಾಂಡAಡ ಸಜನ್ ಪೂವಯ್ಯ, ಕುಟ್ಟಂಜೆಟ್ಟಿರ ಬೋಪಣ್ಣ, ಅಪ್ಪಾರಂಡ ಮಂದಣ್ಣ, ಅನ್ನಡಿಯಂಡ ದಿಲೀಪ್, ಕಲ್ಯಾಟಂಡ ಅಪ್ಪಣ್ಣ ಹಾಗೂ ಅರ್ಚಕ ಕುಶಾ ಭಟ್.
-ವರದಿ: ಪಿ.ವಿ. ಪ್ರಭಾಕರ್, ಚಿತ್ರ: ದುಗ್ಗಳ ಸದಾನಂದ