ಮಡಿಕೇರಿ, ಮಾ. ೩: ಶ್ರೀ ಆದಿ ಶಂಕರಾಚಾರ್ಯರು ರಾಮಚಂದ್ರಾಪುರ ಮಠದ ಸಂಸ್ಥಾಪನಾ ಕಾಲದಲ್ಲಿ ಆಗಿನ ಪೀಠಾಧೀಶರಾದ ಶ್ರೀ ವಿದ್ಯಾನಂದಾಚಾರ್ಯರಿಗೆ ನೀಡಿದ್ದ ಅವರ ಪಾದುಕೆಗಳು ಮಡಿಕೇರಿಗೆ ಬರಲಿದ್ದು ಈ ಸಂದರ್ಭ ಮಡಿಕೇರಿಯ ಜಿಲ್ಲಾ ಹವ್ಯಕ ವಲಯದಿಂದ ಸ್ವಾಗತ ಹಾಗೂ ಪಾದಪೂಜೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದಿ ಶಂಕರರ ಪಾದುಕೆಗಳನ್ನು ರಾಮಚಂದ್ರಾಪುರ ಮಠದ ೩೬ ನೇ ಪೀಠಾಧಿಪತಿಗಳಾದ ಈಗಿನ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಮೂಲಕ ಅವರ ಪರಿವಾರದವರು ಇಲ್ಲಿಗೆ ತರುತ್ತಿದ್ದಾರೆ. ಈ ಸಂದರ್ಭದಲ್ಲಿ ಶ್ರೀಗುರು ಪಾದುಕೆಗಳಿಗೆ ಸ್ವರ್ಣ ರೂಪದಲ್ಲಿ ಅಥವ ನಗದು ರೂಪದಲ್ಲಿ ಕಾಣಿಕೆ ಅರ್ಪಿಸುವ ಅವಕಾಶವನ್ನು ಭಕ್ತಾದಿಗಳಿಗೆ ನೀಡಲಾಗುತ್ತದೆ. ಈ ಕಾಣಿಕೆಗಳು ಮಠದ ಅಧೀನದಲ್ಲಿ ವೇದ ಶಾಸ್ತç, ಸಂಸ್ಕೃತ, ಸಾಹಿತ್ಯಗಳ ಸಂಪೋಷಣೆಗಾಗಿ ಗೋಕರ್ಣದಲ್ಲಿ ಸ್ಥಾಪಿತವಾಗಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕಾರ್ಯಗಳಿಗೆ ವಿನಿಯೋಗವಾಗುವುದಾಗಿ ವಿದ್ಯಾಪೀಠ ಕೊಡಗು ವಿಭಾಗದ ಅಧ್ಯಕ್ಷರಾದ ಎಂ. ಈಶ್ವರ್ ಭಟ್ “ಶಕ್ತಿ” ಗೆ ತಿಳಿಸಿದ್ದಾರೆ. ಈ ಸ್ವರ್ಣ ಪಾದುಕೆಗಳನ್ನು ತಾ. ೫ ರಂದು ಮಡಿಕೇರಿಯ ಲಕ್ಷಿö್ಮÃ ನರಸಿಂಹಕಲ್ಯಾಣ ಮಂಟಪದ ಶತಮಾನ ಭವನದಲ್ಲಿ ತಂದಿರಿಸಲು ವ್ಯವಸ್ಥೆ ಮಾಡಲಾಗಿದೆ. ತಾ. ೬ ರಂದು ಭಿಕ್ಷಾಂಗ ಪಾದುಕಾ ಪೂಜೆಗಳನ್ನು ಮಡಿಕೇರಿಯ ಶತಮಾನೋತ್ಸವ ಭವನದಲ್ಲಿ ಭಕ್ತಾದಿಗಳಿಗೆ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಬಳಿಕ ಕಾನ ಕೃಷ್ಣ ಭಟ್ ಮತ್ತು ವೀರಾಜಪೇಟೆಯ ಕೆ. ಶ್ಯಾಮ ಇವರುಗಳ ಮನೆಗಳಲ್ಲಿ ಹಾಗೂ ಮಧ್ಯಾಹ್ನದ ಬಳಿಕ ಮಡಿಕೇರಿಯ ಈಶ್ವರ ಭಟ್ ಮತ್ತು ರಮೇಶ್ ಹೊಳ್ಳ ಇವರುಗಳ ಮನೆಗಳಲ್ಲಿ ಪಾದ ಪೂಜೆ ಏರ್ಪಟ್ಟಿದೆ. ಆಸಕ್ತ ಭಕ್ತಾದಿಗಳು ೯೪೪೮೧೦೬೦೨೮ ಸಂಖ್ಯೆಯಲ್ಲಿ ಈಶ್ವರ ಭಟ್ ಅವರನ್ನು ಸಂಪರ್ಕಿಸಬಹುದಾಗಿದೆ.