ಸೋಮವಾರಪೇಟೆ, ಮಾ. ೩: ಗೌಡಳ್ಳಿ ಗ್ರಾಮದ ಓಂ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಕ್ರೀಡಾ ಸಮಿತಿಯ ವತಿಯಿಂದ ತಾ. ೬ ಮತ್ತು ೭ ರಂದು ವಿವಿಧ ಕ್ರೀಡಾಕೂಟ ಆಯೋಜಿಸಲಾಗಿದ್ದು, ಪಟ್ಟಣದ ಪತ್ರಿಕಾಭವನದಲ್ಲಿ ಟ್ರೋಫಿಗಳನ್ನು ಅನಾವರಣ ಮಾಡಲಾಯಿತು.

ಜಾತ್ರೋತ್ಸವ ಅಂಗವಾಗಿ ವಿದೇಶಿ ಆಟಗಾರರ ಆಕರ್ಷಣೆಯೊಂದಿಗೆ ಮುಕ್ತ ಫುಟ್ಬಾಲ್ ಪಂದ್ಯಾಟ ನಡೆಯಲಿದ್ದು, ತಾ. ೬ರಂದು ಬೆಳಿಗ್ಗೆ ೧೦.೩೦ಕ್ಕೆ ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗು ವುದು ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಎಸ್.ಬಿ. ಗುರುಪ್ರಸಾದ್ ತಿಳಿಸಿದ್ದಾರೆ.

ಫುಟ್ಬಾಲ್ ಪಂದ್ಯಾವಳಿಯಲ್ಲಿ ೧೬ ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ತಾ. ೪ರಂದು (ಇಂದು) ನೋಂದಣಿಗೆ ಕಡೆಯ ದಿನವಾಗಿದೆ. ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ೭೫ ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಗಳಿಸುವ ತಂಡಕ್ಕೆ ೪೦ ಸಾವಿರ ನಗದು-ಟ್ರೋಫಿ ನೀಡಲಾಗುವುದು ಎಂದು ಕ್ರೀಡಾ ಸಮಿತಿಯ ಉಪಾಧ್ಯಕ್ಷ ಸುಮಂತ್ ಕೂಗೂರು ಹೇಳಿದರು. ತಾ. ೭ರಂದು ಬೆಳಿಗ್ಗೆ ೧೦ ಗಂಟೆಗೆ ಮಹಿಳೆಯರಿಗೆ ಮುಕ್ತ ಥ್ರೋಬಾಲ್ ಪಂದ್ಯಾಟ ಆಯೋಜಿಸಿದ್ದು, ಪ್ರಥಮ ೧೫ ಸಾವಿರ ನಗದು, ದ್ವಿತೀಯ ೮ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು. ತಾ. ೭ರ ಬೆಳಿಗ್ಗೆ ೯ ಗಂಟೆಯೊಳಗೆ ತಂಡವನ್ನು ನೋಂದಣಿ ಮಾಡಿಕೊಳ್ಳ ಬೇಕು. ಅದೇ ದಿನ ಬೆಳಿಗ್ಗೆ ೮ ಗಂಟೆಯಿAದ ಪುರುಷರು ಮತ್ತು ಮಹಿಳೆ ಯರ ಪ್ರತ್ಯೇಕ ವಿಭಾಗದಲ್ಲಿ ೫ ಕಿ.ಮೀ. ಗುಡ್ಡಗಾಡು ಓಟ, ಮಕ್ಕಳಿಗೆ ೨ ಕಿ.ಮೀ. ಗುಡ್ಡಗಾಡು ಓಟದ ಸ್ಪರ್ಧೆ ಆಯೋಜಿ ಸಲಾಗಿದೆ ಎಂದು ಸಮಿತಿಯ ಕಾರ್ಯ ದರ್ಶಿ ವೆಂಕಟೇಶ್ ಮಾಹಿತಿ ನೀಡಿದರು. ಅಂದು ಬೆಳಿಗ್ಗೆ ೧೧ ಗಂಟೆಗೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಬಸ್ ಹುಡುಕಾಟ, ಸಾರ್ವಜನಿಕ ವಿಭಾಗದಲ್ಲಿ ಭಕ್ತಿಗೀತೆ, ಜಾನಪದ ಗೀತೆ, ಭಾವಗೀತೆ ಗಾಯನ ಸ್ಪರ್ಧೆ, ೩ ಗಂಟೆಗೆ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಖಜಾಂಚಿ ಹೇಮಚಂದ್ರ ಹೇಳಿದರು. ಈ ಸಂದರ್ಭ ಗೌಡಳ್ಳಿ ನವದುರ್ಗಾ ಪರಮೇಶ್ವರಿ ಸಮುದಾಯ ಭವನ ಅಧ್ಯಕ್ಷ ಜಿ.ಎ. ಮಹೇಶ್ ಉಪಸ್ಥಿತರಿದ್ದರು.