ಸೋಮವಾರಪೇಟೆ, ಮಾ. ೩: ಸಮೀಪದ ಗೌಡಳ್ಳಿ ಗ್ರಾಮದ ಓಂ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ತಾ. ೬ ರಿಂದ ೮ರವರೆಗೆ ನಡೆಯಲಿದೆ. ಜಾತ್ರೋತ್ಸವದ ಅಂಗವಾಗಿ ವಿವಿಧ ಪೂಜಾ ವಿಧಿ ವಿಧಾನ, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೊ Ãಜಿಸಲಾಗಿದೆ ಎಂದು ನವದುರ್ಗಾ ಪರಮೇಶ್ವರಿ ದೇವಾಲಯ ಸಮು ದಾಯ ಭವನ ಅಧ್ಯಕ್ಷ ಜಿ.ಎ. ಮಹೇಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ತಾ. ೬ರಂದು ಬೆಳಿಗ್ಗೆ ೧೦ ಗಂಟೆಗೆ ದೇವಿಗೆ ಜ್ಯೋತಿ ಬೆಳಗುವುದರ ಮೂಲಕ ಜಾತ್ರೆಯನ್ನು ಉದ್ಘಾಟಿಸಲಾಗುವುದು. ಗೌಡಳ್ಳಿ ಗ್ರಾ.ಪಂ. ಅಧ್ಯಕ್ಷ ನವೀನ್ ಅಜ್ಜಳ್ಳಿ, ವಿಎಸ್‌ಎಸ್‌ಎನ್ ಕಾರ್ಯನಿರ್ವಹ ಣಾಧಿಕಾರಿ ಜಿ.ಕೆ. ಪೊನ್ನಪ್ಪ, ಪಿಡಿಓ ಲಿಖಿತ, ಆರೋಗ್ಯಾಧಿಕಾರಿ ಇಂದೂಧರ್, ಪಶು ವೈದ್ಯಾಧಿಕಾರಿ ಸತೀಶ್ ಕುಮಾರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.

೧೦.೩೦ಕ್ಕೆ ದೇವಾಲಯ ಸಮಿತಿ ಮತ್ತು ಪಶು ವೈದ್ಯ ಇಲಾಖೆಯ ಸಹಯೋಗದೊಂದಿಗೆ ರಾಸುಗಳ ಆರೋಗ್ಯ ತಪಾಸಣಾ ಶಿಬಿರ, ಉತ್ತಮ ರಾಸುಗಳಿಗೆ ಬಹುಮಾನ, ನಾಯಿಗಳಿಗೆ ರೇಬೀಸ್ ಚುಚ್ಚುಮದ್ದು ನೀಡುವ ಶಿಬಿರ ನಡೆಯಲಿದೆ.

ಇದರೊಂದಿಗೆ ಮುಕ್ತ ಫುಟ್ಬಾಲ್ ಮತ್ತು ಥ್ರೋಬಾಲ್ ಪಂದ್ಯಾಟ, ಗುಡ್ಡಗಾಡು ಓಟ ಸೇರಿದಂತೆ ಇನ್ನಿತರ ಕ್ರೀಡಾ ಚಟುವಟಿಕೆ ನಡೆಯಲಿದೆ. ತಾ. ೭ರಂದು ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ. ಮೊಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್, ಪ್ರತಿಭಾವಂತ ವಿದ್ಯಾರ್ಥಿಗಳಾದ ಶಶಿತ್ ಗೌಡ, ಜಿ.ಆರ್. ಕೌಶಿಕ್, ಸಂಜಯ್, ಮಹಮ್ಮದ್ ಸುಫೈಲ್, ದೇವಾಲಯ ಸಮಿತಿ ಖಜಾಂಚಿ ರಾಮಚಂದ್ರ ಅವರುಗಳನ್ನು ಸನ್ಮಾನಿಸಲಾಗುವುದು ಎಂದರು.

ಮುಖ್ಯ ಅತಿಥಿಗಳಾದ ಶಾಸಕ ಮಂತರ್ ಗೌಡ, ಗೌಡಳ್ಳಿ ಗ್ರಾ.ಪಂ. ಅಧ್ಯಕ್ಷ ನವೀನ್, ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ, ಗೌಡಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಹೆಚ್.ಆರ್. ಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಭರತ್ ಕುಮಾರ್, ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್, ಉದ್ಯಮಿ ಬಾಗೇರಿ ಮಧು, ಪವಿತ್ರ ಹೋಮೇಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ತಾ. ೮ರಂದು ಮಹಾಶಿವರಾತ್ರಿ ಅಂಗವಾಗಿ ಕಾಸರಗೋಡಿನ ಮಲ್ಲಕ್ಷೇತ್ರದ ಶ್ರೀದುರ್ಗಾ ಪರಮೇಶ್ವರಿ ಯಕ್ಷಗಾನ ಮೇಳದ ಕಲಾವಿದರಿಂದ ಶ್ರೀರಾಮ ಚರಿತ್ರೆ ಎಂಬ ಕಥಾ ಭಾಗದ ಯಕ್ಷಗಾನ ಬಯಲಾಟ, ವೀರಭದ್ರ ವೀರಗಾಸೆ ಕುಣಿತ ನಡೆಯಲಿದೆ. ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ದೇವಾಲಯದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕ್ರೀಡಾ ಸಮಿತಿ ಅಧ್ಯಕ್ಷ ಎಸ್.ಬಿ. ಗುರುಪ್ರಸಾದ್, ಉಪಾಧ್ಯಕ್ಷ ಕೂಗೂರು ಸುಮಂತ್, ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ಹೇಮಚಂದ್ರ ಅವರುಗಳು ಉಪಸ್ಥಿತರಿದ್ದರು.