ಮಾ. ೧: ಸಮೀಪದ ಕೊಡ್ಲಿಪೇಟೆಯ ಕಲ್ಲಳ್ಳಿಮಠ ಶ್ರೀ ಗುರುಪೀಠ ಹಾಗೂ ವೀರಶೈವ ಮಂಡಳಿ ಸಹಭಾಗಿತ್ವದಲ್ಲಿ ಶ್ರೀಕ್ಷೇತ್ರ ಕಲ್ಲಳ್ಳಿ ಮಠದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಪ್ರಯುಕ್ತ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗಿನ ಜಾವಾ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಸಾಂಪ್ರದಾಯಿಕವಾಗಿ ಜರುಗಿದವು.
ಬುಧವಾರ ಸಂಜೆ ೬ ಗಂಟೆಯಿAದ ೭ ಗಂಟೆಯವರೆಗೆ ಗೋಧೂಳಿ ಲಗ್ನದಲ್ಲಿ ಗಂಗಾ ಪೂಜಾ ಕೈಂಕರ್ಯ ನೆರವೇರಿ ಪ್ರಸಾದ ವಿನಿಯೋಗ ನಡೆಯಿತು.
ಗುರುವಾರ ಬೆಳಿಗ್ಗೆ ೫ ಗಂಟೆಗೆ ನೊಣವಿನಕೆರೆ ಕಾಡು ಸಿದ್ಧೇಶ್ವರ ಮಠದ ಡಾ. ಶಿವಾನುಭವ ಚರವರ್ಯ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಸಮ್ಮುಖದಲ್ಲಿ, ಕಲ್ಲಳ್ಳಿಮಠ ಶ್ರೀ ಗುರುಪೀಠ ಆಡಳಿತ ಮಂಡಳಿ ಅಧ್ಯಕ್ಷ ರುದ್ರಮುನಿ ಸ್ವಾಮೀಜಿ ಹಾಗೂ ಅರ್ಚಕರ ನೇತೃತ್ವದಲ್ಲಿ ವಟುಗಳಿಗೆ ದೀಕ್ಷಾ ಕಾರ್ಯಕ್ರಮ ನಡೆಯಿತು. ನಂತರ ವಾಸ್ತು ಅಘೋರ ಕಲಶ ಪೂಜೆ, ಸಪ್ತಸಭಾ ದೇವತಾಪೂಜೆ, ಅಷ್ಟದಿಕ್ಪಾಲಕರ ಪೂಜೆ, ನವಗ್ರಹ ಪೂಜೆ, ಉಮಾಮಹೇಶ್ವರಿ ಪೂಜೆ, ಮಹಾ ಮೃತ್ಯುಂಜಯ ಪೂಜೆ ಮತ್ತು ಹೋಮ-ಹವನ ಪೂರ್ಣಾಹುತಿ ಕಾರ್ಯಕ್ರಮಗಳು ನಡೆದವು.
ಅಳಂದ ಕೋರಣೇಶ್ವರ ವಿರಕ್ತಮಠದ ಮುರುಗೇಂದ್ರ ಕೋರಣೇಶ್ವರ ಶಿವಯೋಗಿ ಸ್ವಾಮೀಜಿ, ರಾವಂದೂರು ಮುರುಘಾಮಠದ ಮೋಕ್ಷಪತಿ ಮಹಾಸ್ವಾಮೀಜಿ, ಶನಿವಾರಸಂತೆ ಮಾದ್ರೆ ಗ್ರಾಮದ ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಯಸಳೂರು ತೆಂಕಲಗೋಡುಮಠದ ಚನ್ನಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ, ಶ್ರೀತಪೋವನ ಕ್ಷೇತ್ರ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ, ಚಂಗಡಹಳ್ಳಿ ಮಠದ ಬಸವ ಮಹಾಂತ ಮಹಾಸ್ವಾಮೀಜಿ ಹಾಗೂ ಕೆಸತ್ತೂರು ಮಠದ ಬಸವರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಕೊಡ್ಲಿಪೇಟೆ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್. ವರಪ್ರಸಾದ್, ಉಪಾಧ್ಯಕ್ಷ ಹೆಚ್.ಪಿ. ಯತೀಶ್ ಕುಮಾರ್, ಕಾರ್ಯದರ್ಶಿ ಸಿ.ಎಸ್. ಲಿಂಗರಾಜ್, ನಿರ್ದೇಶಕರಾದ ಕೆ.ಪಿ. ನಾಗೇಶ್, ಸಿ.ಎಸ್. ಚಂದ್ರಶೇಖರ್, ಯು.ಪಿ. ನಾಗೇಶ್, ಕೆ.ಎನ್. ಚಂದ್ರಕುಮಾರ್, ಕೆ.ಜಿ. ಪ್ರಕಾಶ್, ಕೆ.ಪಿ. ನವೀನ್ ಕುಮಾರ್, ಪಿ.ಎನ್. ವಸಂತ್ ಕುಮಾರ್, ಕೆ.ಪಿ. ಮಂಜುನಾಥ್ ಹಾಗೂ ಶ್ರೀಗುರುಪೀಠ ಕಲ್ಲಳ್ಳಿ ಮಠದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು. ಭಕ್ತಾದಿಗಳಿಗೆ ಪ್ರಸಾದ ವಿತರಣೆ ನೆರವೇರಿತು.