ಮಡಿಕೇರಿ, ಮಾ. ೧: ರೂ. ೧೫ ಸಾವಿರ ಬಿಲ್ ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆ ನಗರದ ಹೊಸಬಡಾವಣೆಯಲ್ಲಿರುವ ಉಪಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ನೀರಿನ ಸಂಪರ್ಕವನ್ನು ನಗರಸಭೆ ಸ್ಥಗಿತಗೊಳಿಸಿದೆ.

ಕಳೆದ ೨ ದಿನಗಳ ಹಿಂದೆ ಘಟನೆ ನಡೆದಿದ್ದು, ಹಲವು ಸಮಯಗಳ ಕಾಲ ಬಿಲ್ ಪಾವತಿಸದ ಕಾರಣ ಕಚೇರಿಯ ನೀರಿನ ಸಂಪರ್ಕ ಬಂದ್ ಮಾಡಲಾಗಿದೆ.