ಚೆಟ್ಟಳ್ಳಿ, ಮಾ. ೧: ಅತ್ಯುತ್ತಮ ಸೇವೆಗೆ ಪ್ರಶಸ್ತಿಯನ್ನು ಪಡೆದಂತಹ ಚೆಟ್ಟಳ್ಳಿ ಆರೋಗ್ಯ ಕೇಂದ್ರ ಸಿಬ್ಬಂದಿಗಳ ಕೊರತೆಯಿಂದ ಸಂಜೆ ೫ ಗಂಟೆಯಾಗುತ್ತಿದ್ದAತೆ ಮುಚ್ಚಲ್ಪಡುತ್ತದೆ. ಸಂಜೆಯ ನಂತರ ತುರ್ತು ಸೇವೆಗೆ ಆಸ್ಪತ್ರೆಗೆ ಬಂದರೆ ವೈದ್ಯರಿಲ್ಲ, ಸಿಬ್ಬಂದಿಗಳಿಲ್ಲ ಹಾಗೂ ಡಿಗ್ರೂಪ್ ನೌಕರರಿಲ್ಲದೆ ಮಡಿಕೇರಿಗೆ ರೋಗಿಗಳನ್ನು ಕರೆದೊಯ್ಯುವ ಪರಿಸ್ಥಿತಿ ಎದುರಾಗಿದೆ.
ಖಾಯಂ ವೈದ್ಯರ ಕೊರತೆ
ಈ ಹಿಂದೆ ಖಾಯಂ ವೈದ್ಯರು ಸೇವೆ ಸಲ್ಲಿಸುತ್ತಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದಿAದ ವೈದ್ಯರು ವರ್ಗಾವಣೆಗೊಂಡ ನಂತರ ವೈದ್ಯರಿಲ್ಲದೆ ನಂಜರಾಯ ಪಟ್ಟಣ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಹೆಚ್ಚುವರಿಯಾಗಿ ನೇಮಕ ಮಾಡಲಾಯಿತು. ವೈದ್ಯರಿಲ್ಲದ ದಿನಗಳಲ್ಲಿ ಶುಶ್ರೂಷಕಿಯರೇ ಹೊರ ರೋಗಿಗಳಿಗೆ ಔಷಧಿ ನೀಡಿ ಕಳುಹಿಸುತ್ತಾರೆ. ಕಳೆದ ಫೆಬ್ರವರಿಯಿಂದ ಹೊಸದಾಗಿ ಕೊಡಗಿನವೇ ಆದ ವೈದ್ಯರೊಬ್ಬರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗಿ ಸೇವೆಸಲ್ಲಿಸುತ್ತಿದ್ದಾರೆ.
ಡಿ ಗ್ರೂಪ್ ನೌಕರರು ನಾಪತ್ತೆ
ಚೆಟ್ಟಳ್ಳಿ ಪ್ರಾಥಮಿಕ ಕೇಂದ್ರಕ್ಕೆ ೩ ಡಿ ಗ್ರೂಪ್ ನೌಕರರು ಇರಬೇಕಾಗಿದ್ದು ಇಲ್ಲಿ ಓರ್ವ ಪುರುಷ ಹಾಗೂ ಮತ್ತೋರ್ವ ಮಹಿಳಾ ಡಿ ಗ್ರೂಪ್ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದು, ಅನಾರೋಗ್ಯದಿಂದ ಮಹಿಳಾ ಸಿಬ್ಬಂದಿ ರಜೆಯಲ್ಲಿದ್ದು ಪುರುಷ ಸಿಬ್ಬಂದಿ ಕೆಲವು ದಿನಗಳಿಂದ ಸೇವೆಗೆ ಹಾಜರಾಗದಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ. ತಾತ್ಕಾಲಿಕವಾಗಿ ಮತ್ತೋರ್ವ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡರೂ ಸಂಜೆಯ ಪಾಳಿಯ ಸೇವೆಗೆ ಯಾರೂ ಇಲ್ಲದ ಕಾರಣ ಶುಶ್ರೂಷಕಿರೊಬ್ಬರೆ ರಾತ್ರಿ ಪಾಳಿಯಲ್ಲಿ ಸೇವೆ ಸಲ್ಲಿಸಲಾಗದೇ ವೈದ್ಯರು ತೆರಳುತ್ತಿದ್ದಂತೆ ಆಸ್ಪತ್ರೆಗೆ ಬೀಗಜಡಿದು ತೆರಳುತ್ತಾರೆ.
ವೈದ್ಯಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಡಿ ಗ್ರೂಪ್ ನೌಕರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸೇವೆಗೆ ಹಾಜರಾಗಲು ತಿಳಿಸಲು ಪ್ರಯತ್ನಿಸಿದರೂ ಯಾರ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಕಳೆದ ಐದು ದಿನಗಳ ಹಿಂದೆ ಡಿ ಗ್ರೂಪ್ ನೌಕಕರರಿಲ್ಲದೆ ಈರ್ವರು ಶುಶ್ರೂಷಕಿಯರು ತಮ್ಮ ಸೇವೆಯ ಜೊತೆ ಆಸ್ಪತ್ರೆಯನ್ನು ಶುಚಿಗೊಳಿಸಿದ್ದಾರೆ.
ಜಿಲ್ಲಾಡಳಿತ, ಶಾಸಕರು ಇತ್ತ ಗಮನಿಸಿ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿರುವ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ತುರ್ತು ನೇಮಕ ಮಾಡಬೇಕಿದೆ.
- ಪುತ್ತರಿರ ಕರುಣ್ ಕಾಳಯ್ಯ