ಐಗೂರು, ಫೆ. ೨೯: ಸೋಮವಾರ ಪೇಟೆ ತಾಲೂಕು ಕ.ಸ.ಬಾ. ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಐಗೂರು ಘಟಕದ ಸಭೆ ಕಾಜೂರು ಶಾಲೆಯ ಕಾವೇರಿ ಹಾಲ್‌ನಲ್ಲಿ ಸಾಹಿತ್ಯ ಪರಿಷತ್ತಿನ ಐಗೂರು ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
೨೦೨೪ರ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಐಗೂರು ಗ್ರಾಮದಲ್ಲಿ ನಡೆಸುವ ಬಗ್ಗೆ ಪೂರ್ವಭಾವಿ ಚರ್ಚೆಯನ್ನು ನಡೆಸಲಾಯಿತು. ಸಮ್ಮೇಳನಕ್ಕೆ ಸರ್ಕಾರದಿಂದ ಸಿಗುವ ಅನುದಾನ, ಸಂಪನ್ಮೂಲ ಕ್ರೋಢೀಕರಣ, ಮಾಧ್ಯಮದ ಪ್ರಚಾರ, ಗ್ರಾಮದ ಎಲ್ಲಾ ಸಂಘ-ಸAಸ್ಥೆಗಳನ್ನು ಒಟ್ಟು ಜೋಡಿಸುವುದು, ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳನ್ನು ಸಮ್ಮೇಳನಕ್ಕೆ ಸ್ವಾಗತಿಸುವುದು, ತಾಲೂಕು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಅತಿಥಿಗಳನ್ನು ಸಾಹಿತಿಗಳನ್ನು ಆಹ್ವಾನಿಸುವ ಬಗ್ಗೆ ಮತ್ತು ಹೋಬಳಿ ಘಟಕದ ಎಲ್ಲಾ ಶಾಲಾ ಅಧ್ಯಾಪಕ ವೃಂದ ವಿದ್ಯಾರ್ಥಿ ವೃಂದಗಳ ಸಹಕಾರವನ್ನು ಸಮ್ಮೇಳನಕ್ಕೆ ಕೋರುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಕಳೆದ ಒಂದು ವರ್ಷದಿಂದ ಸಾಹಿತ್ಯ ಪರಿಷತ್ತಿನ ಐಗೂರು ಕೇಂದ್ರಕ್ಕೆ ಕಚೇರಿಗಾಗಿ ಐಗೂರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಪಂಚಾಯಿತಿಯಿAದ ಯಾವುದೇ ಸ್ಪಂದನ ದೊರಕಿಲ್ಲ ಎಂದು ಅಧ್ಯಕ್ಷರು ತಿಳಿಸಿದರು. ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಮುಂದಿನ ವಾರದಲ್ಲಿ ಐಗೂರಿಗೆ ಆಹ್ವಾನಿಸಿ ಸಲಹೆ ಸೂಚನೆಗಳನ್ನು ಪಡೆದು ಮುಂದಿನ ಸಮ್ಮೇಳನದ ದಿನಾಂಕವನ್ನು ನಿರ್ಧರಿಸಲಾಗುವುದೆಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಅಧ್ಯಕ್ಷ ಕೀರ್ತಿಪ್ರಸಾದ್, ಕಾರ್ಯದರ್ಶಿ ವಿಶ್ವನಾಥ ರಾಜ ಅರಸ್, ಖಜಾಂಚಿ ಬೆಳ್ಳಿಯಪ್ಪ, ತಾಲೂಕು ನಿರ್ದೇಶಕ ಧರ್ಮಪ್ಪ, ಮಚ್ಚಂಡ ಅಶೋಕ್, ಸಾಹಿತಿ ಹೇಮಂತ್ ಪಾರೆರ, ಶಿಕ್ಷಕರಾದ ಕೃಷ್ಣಪ್ಪ, ಅಜಿತ್ ಕುಮಾರ್, ಶಿಕ್ಷಕಿ ಅನಸೂಯ ಭಾಗವಹಿಸಿದ್ದರು.