ಮಡಿಕೇರಿ, ಫೆ. ೨೯: ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳ ಸಭೆಯ ನಿರ್ಣಯದಂತೆ ವೀರಾಜಪೇಟೆ ಹೋಬಳಿಯ ಐಮಂಗಲ ಗ್ರಾಮವನ್ನು ಪೈಲೆಟ್ (ಪ್ರಾಯೋಗಿಕ) ಗ್ರಾಮವನ್ನಾಗಿ ಆಯ್ಕೆ ಮಾಡಲಾಗಿದ್ದು, ಈ ಗ್ರಾಮಕ್ಕೆ ತಾ. ೧ ರಿಂದ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಗ್ರಾಮದಲ್ಲಿ ಬಾಕಿ ಇರುವ ಪಹಣಿ ಒಟ್ಟುಗೂಡಿಸುವುದು, ಕಂದಾಯ ನಿಗಧಿ ಪ್ರಕರಣಗಳು, ಸರ್ಕಾರಿ ಜಮೀನು ಮಂಜೂರಾತಿಯಾದ ಆಕಾರ್‌ಬಂದ್ ದುರಸ್ತಿ, ಪಟ್ಟೆದಾರರಿಂದ ಹಕ್ಕುದಾರರಿಗೆ ಖಾತೆ ಮಾಡುವ ಪ್ರಕರಣಗಳು ಹಾಗೂ ಇತರ ಕಂದಾಯ ದಾಖಲೆಗಳ ತಿದ್ದುಪಡಿ ಪ್ರಕರಣಗಳ ಬಗ್ಗೆ ಸರ್ವೆ ಕಾರ್ಯ ನಡೆಸಲಿರುವುದರಿಂದ ಐಮಂಗಲ ಗ್ರಾಮದ ಎಲ್ಲಾ ರೈತರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ವೀರಾಜಪೇಟೆ ತಹಶೀಲ್ದಾರ್ ತಿಳಿಸಿದ್ದಾರೆ.