ಮಡಿಕೇರಿ, ಫೆ. ೨೯: ಪೊನ್ನಂಪೇಟೆ ತಾಲೂಕಿನ ಕೆ. ಬಾಡಗ ಗ್ರಾಮದ ಹೇರ್ಮಾಡು ಶ್ರೀ ಈಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಆರಂಭಗೊAಡಿದ್ದು, ಮಾರ್ಚ್ ೧ ರಿಂದ ೬ ರತನಕ ಬೆಳಿಗ್ಗೆ ೧೧ ಗಂಟೆಗೆ ಸಂಕಲ್ಪ ಪೂಜೆ ಹಾಗೂ ರಾತ್ರಿ ೭ ಗಂಟೆಗೆ ಹರಕೆ ಬಳಕು ಏರ್ಪಡಿಸಲಾಗಿದೆ. ಮಾ. ೭ ರಂದು ಸಾಯಂಕಾಲ ೫ ಗಂಟೆಗೆ ನೆರಪು ಉತ್ಸವ ಹಾಗೂ ದೇವರು ಹೊರಗೆ ಬರುವುದು ನಡೆಯಲಿದೆ.
ಮಾ. ೮ ರಂದು ಮಹಾಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ ೧ ಗಂಟೆಯಿAದ ೧೨ ಗಂಟೆಯವರೆಗೆ ರುದ್ರಾಭಿಷೇಕ ಪೂಜೆ, ಸಾಯಂಕಾಲ ೫ ಗಂಟೆಗೆ ದೇವರು ಅವಕೃತ ಸ್ನಾನಕ್ಕೆ ಹೊರಡುವುದು ಹಾಗೂ ದೇವರ ಒಳಪ್ರವೇಶದ ನಂತರ ಭಕ್ತಾದಿಗಳ ವಸಂತಪೂಜೆ, ತದನಂತರ ಸಾಮೂಹಿಕ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.