ಮಡಿಕೇರಿ, ಮಾ. ೧: ಹುದಿಕೇರಿ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮಗಳ ೨೦೨೩-೨೪ನೇ ಸಾಲಿನ ವಾರ್ಡ್ ಸಭೆಗಳನ್ನು ನಿಗದಿಪಡಿಸಲಾಗಿದೆ. ಆಯಾಯ ವಾರ್ಡ್ ಸದಸ್ಯರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು. ಬೆಳ್ಳೂರು ಗ್ರಾಮದ ವಾರ್ಡ್ಸಭೆ ತಾ. ೨ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ಬೆಳ್ಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಕೋಣಗೇರಿ ಗ್ರಾಮದ ವಾರ್ಡ್ಸಭೆ ತಾ. ೨ ರಂದು (ಇಂದು) ಬೆಳಿಗ್ಗೆ ೧೧.೪೫ಕ್ಕೆ ಕೋಣಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಹೈಸೊಡ್ಲೂರು ಗ್ರಾಮದ ವಾರ್ಡ್ಸಭೆ ತಾ. ೪ ರಂದು ಬೆಳಿಗ್ಗೆ ೧೦ ಗಂಟೆಗೆ ಹೈಸೊಡ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಹುದಿಕೇರಿ ಗ್ರಾಮದ ವಾರ್ಡ್ಸಭೆ ತಾ. ೪ ರಂದು ಮಧ್ಯಾಹ್ನ ೧೨ ಗಂಟೆಗೆ ಹುದಿಕೇರಿ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಬೇಗೂರು ಗ್ರಾಮದ ವಾರ್ಡ್ಸಭೆ ತಾ. ೪ ರಂದು ಮಧ್ಯಾಹ್ನ ೨ ಗಂಟೆಗೆ ಶ್ರೀ ಈಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಪಂಚಾಯಿತಿ ಪ್ರಕಟಣೆ ತಿಳಿಸಿದೆ.