ಕಣಿವೆ: ಇಲ್ಲಿಗೆ ಸಮೀಪದ ಕೂಡಿಗೆಯ ರೇಷ್ಮೆ ಕೃಷಿ ಸಂಶೋಧನಾ ಕ್ಷೇತ್ರದಲ್ಲಿರುವ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ವಸ್ತು ಪ್ರದರ್ಶನದಲ್ಲಿ ತೋರಿದ ಸಾಧನೆಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತಿದೆ.

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಂವಿಧಾನ ಮತ್ತು ರಾಷ್ಟಿçÃಯ ಏಕತಾ ಸಮಾವೇಶದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಮಾಡಿದ ಜೀರೋ ಟ್ರಾಫಿಕ್ ವ್ಯವಸ್ಥೆ, ಸಂಚಾರಿ ಸಾರಿಗೆ ವಾಹನಗಳಲ್ಲಿ ನೈರ್ಮಲ್ಯ ತಡೆಯಲು ಅನುಸರಿಸಬಹುದಾದ ಕ್ರಮಗಳು ಹಾಗೂ ಬಹು ಮುಖ್ಯವಾಗಿ ರೈಲ್ವೆ ಮಾರ್ಗದ ಹಳಿಗಳ ನಡುವೆ ಆಕಸ್ಮಿಕವಾಗಿ ಸಾವನ್ನಪ್ಪುವ ವನ್ಯಜೀವಿಗಳ ತಡೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ವಿದ್ಯಾರ್ಥಿಗಳು ರೂಪಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ನೋಡುಗರ ಗಮನ ಸೆಳೆಯುವ ಮೂಲಕ ರೂ. ೩ ಲಕ್ಷ ನಗದು ಬಹುಮಾನದೊಂದಿಗೆ ಅತ್ಯುತ್ತಮ ಪ್ರಶಸ್ತಿಗೆ ಶಾಲೆ ಭಾಜನವಾಯಿತು. ಶಾಲೆಯ ಪ್ರಾಂಶುಪಾಲ ಕೆ. ಪ್ರಕಾಶ್ ಮಾರ್ಗದರ್ಶನದೊಂದಿಗೆ. ಶಾಲೆಯ ವಿಜ್ಞಾನ ಶಿಕ್ಷಕ ಚಿದಂಬರ ಅವರು ವಿದ್ಯಾರ್ಥಿಗಳಿಗೆ ಮಾಡಿದ ಮಾರ್ಗದರ್ಶನದಿಂದಾಗಿ ಈ ಸಾಧನೆ ಸಾಧ್ಯವಾಯುತು ಎಂದು ಶಾಲಾ ವಿದ್ಯಾರ್ಥಿಗಳು ‘ಶಕ್ತಿಗೆ' ಮಾಹಿತಿ ನೀಡಿದ್ದಾರೆ.

ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಕೂಡಿಗೆ: ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟಿçÃಯ ವಿಜ್ಞಾನ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮೇಳ ಆಯೋಜಿಸಲಾಗಿತ್ತು. ಶಾಲೆಯ ಬಾಲ ವಿಜ್ಞಾನಿಗಳು ತಯಾರಿಸಿದ ರಾಕೆಟ್ ಮಾದರಿಯನ್ನು ಉಡಾವಣೆಗೊಳಿಸುವ ಮೂಲಕ ಕೂಡಿಗೆ ಡಯಟ್ ಹಿರಿಯ ಉಪನ್ಯಾಸಕ ಶಿವಕುಮಾರ್ ವಿಜ್ಞಾನ ಮೇಳಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಚಟುವಟಿಕೆಗಳು ಎಲ್ಲಾ ಶಾಲೆಗಳಲ್ಲಿ ನಿರಂತರವಾಗಿ ನಡೆಯಬೇಕಿದೆ ಎಂದರು. ಶಾಲೆಯ ಮುಖ್ಯ ಶಿಕ್ಷಕ ಬಿ.ಎನ್. ವಸಂತಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಅವರಲ್ಲಿ ಸಾಮಾನ್ಯ ಜ್ಞಾನ ವೃದ್ಧಿಸುವಂತೆ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮ ಸಂಯೋಜಕರಾದ ವಿಜ್ಞಾನ ಶಿಕ್ಷಕಿ ಜೈಸಿ ಜೋಸೆಫ್ ಮಾತನಾಡಿ, ವಿಜ್ಞಾನ ಮೇಳದಲ್ಲಿ ಮಕ್ಕಳಿಂದ ಪ್ರದರ್ಶನಗೊಂಡ ವಿವಿಧ ಬಗೆಯ ವಿಜ್ಞಾನ ಮಾದರಿಗಳ ಬಗ್ಗೆ ವಿವರಿಸಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಬಿ.ಆರ್.ಪಿ. ಲೋಕೇಶ್ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಅಫ್ಸತ್ ಅಧ್ಯಕ್ಷತೆ ವಹಿಸಿದ್ದರು. ದಾನಿಗಳಾದ ನಳಿನಿ ಬೋಪಯ್ಯ, ಗ್ರಾಮಸ್ಥರಾದ ಜಯಲಕ್ಷಿö್ಮ ಉತ್ತಪ್ಪ ಮತ್ತು ಶಾಲಾ ಶಿಕ್ಷಕ ವೃಂದ, ಪೋಷಕರು ಪಾಲ್ಗೊಂಡಿದ್ದರು.

ಸೋಮವಾರಪೇಟೆ ಎಸ್.ಜೆ.ಎಂ ಪ್ರೌಢಶಾಲೆ ಸೋಮವಾರಪೇಟೆ: ಇಲ್ಲಿನ ಎಸ್.ಜೆ.ಎಂ ಪ್ರೌಢಶಾಲೆಯಲ್ಲಿ ಸರ್ ಸಿ.ವಿ. ರಾಮನ್ ಅವರ ಜ್ಞಾಪಕಾರ್ಥವಾಗಿ ರಾಷ್ಟಿçÃಯ ವಿಜ್ಞಾನ ದಿನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ ಪ್ರೇಮ ಉದ್ಘಾಟಿಸಿದರು. ನಂತರ ಮಾತನಾಡಿ, ಸಿ.ವಿ. ರಾಮನ್ ಅವರು ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಇಂದು ವಿಜ್ಞಾನ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ದೇಶದಲ್ಲಿ ವಿಜ್ಞಾನ ಬೆಳೆದಂತೆ ಅಭಿವೃದ್ಧಿಯಲ್ಲಿಯೂ ಹೆಚ್ಚಿನ ಸಾಧನೆ ಮಾಡುವುದನ್ನು ಕಾಣಬಹುದಾಗಿದೆ. ಎಲ್ಲರೂ ತಮ್ಮ ಜೀವನದಲ್ಲಿ ಸಿ.ವಿ. ರಾಮನ್ ಅವರ ಆದರ್ಶಗಳನ್ನು ಮೈಗೂಢಿಸಿಕೊಂಡು ಉಜ್ವಲ ದೇಶ ಕಟ್ಟಲು ಮುಂದಾಗಬೇಕೆAದರು. ಕಾರ್ಯಕ್ರಮದ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಿಗೆ ವಿಜ್ಞಾನ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ರಾಣಿ ರವೀಂದ್ರ ಸೇರಿದಂತೆ ಸಹ ಶಿಕ್ಷಕರು ಉಪಸ್ಥಿತರಿದ್ದರು.

ಐಗೂರು ಸರಕಾರಿ ಪದವಿಪೂರ್ವ ಕಾಲೇಜು

ಐಗೂರು: ತಾಲೂಕಿನ ಐಗೂರು ಸರಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ವಿಜ್ಞಾನ ಸಂಘದ ವತಿಯಿಂದ ರಾಷ್ಟಿçÃಯ ವಿಜ್ಞಾನ ದಿನವನ್ನು ಆಚರಿಸಲಾಯಿತು.

ವೈಜ್ಞಾನಿಕ ಮನೋಭಾವನೆ ಬೆಳೆಸಿ ಕೊಳ್ಳುವ ಕುರಿತು ಭಾರತೀಯ ಸಂವಿಧಾನದ ೫೧(ಹೆಚ್)ವಿಧಿಯ ಮಹತ್ವ ತಿಳಿಸಿ, ವೈಜ್ಞಾನಿಕ ಮನೋಭಾವ ಬೆಳೆಸುವ ಕುರಿತಾದ ಪ್ರತಿಜ್ಞಾವಿಧಿಯನ್ನು ವಿಜ್ಞಾನ ಶಿಕ್ಷಕರಾದ ಎಸ್.ಎಸ್.ರಂಜಿನಿ ಬೋಧಿಸಿದರು.

ದಿನದ ಮಹತ್ವದ ಕುರಿತು ಮುಖ್ಯ ಶಿಕ್ಷಕ ಎಂ.ಎA.ಯಶ್ವAತ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು. ನಮ್ಮ ಶಾಲೆಯಲ್ಲಿ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ ಇದ್ದು ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಶಾಲಾ ಶಿಕ್ಷಕರಾದ ಎಸ್.ಕೆ. ರಾಜರತ್ನ, ಮಂಜುನಾಥ್, ಗುಲಾಬಿ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ವಿಜ್ಞಾನ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಪ್ರಯೋಗ ಪ್ರಾತ್ಯಕ್ಷಿಕೆ ನಡೆಸಲಾಯಿತು. ೨೨ ತಂಡಗಳು ಭಾಗವಹಿಸಿದ್ದವು. ಉತ್ತಮ ಪ್ರಾತ್ಯಕ್ಷತೆ ನೀಡಿದ ಮೂರು ತಂಡಗಳಿಗೆ ಬಹುಮಾನ ನೀಡಲಾಯಿತು.