ಗುಡ್ಡೆಹೊಸೂರು, ಮಾ. ೧: ಕಾಡಾನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್ ಹಾಗೂ ಕಂದಕ ನಿರ್ಮಾಣ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದರು.
ಆನೆಕಾಡು, ಬಸವನಹಳ್ಳಿ, ದೊಡ್ಡಬೆಟ್ಟಗೇರಿ, ಚಿಕ್ಕಬೇಟ್ಟಗೇರಿ ಭಾಗಗಳಲ್ಲಿ ಮಿತಿಮೀರಿರುವ ಆನೆ ಹಾವಳಿ ತಡೆ ಸಂಬAಧ ರೈತರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು.
ಜಮೀನುಗಳಲ್ಲಿ ಬೆಳೆದ ವಿವಿಧ ಬೆಳೆಗಳನ್ನು ಆನೆಗಳು ನಾಶಪಡಿಸುತ್ತಿವೆ ಎಂಬ ಗ್ರಾಮಸ್ಥರ ದೂರಿಗೆ ಸ್ಪಂದಿಸಿದ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಚಿತ್ರಣ ಪಡೆದುಕೊಂಡರು. ಬೆಟ್ಟಗೇರಿ ವಿಭಾಗದಲ್ಲಿ ಇಲಾಖೆ ವತಿಯಿಂದ ಸೋಲಾರ್ ಬೇಲಿ ನಿರ್ಮಿಸಿದರೂ ಆನೆಗಳು ಬೇಲಿಯ ಮೇಲೆ ಮರಗಳನ್ನು ಅಡ್ಡವಾಗಿ ಬೀಳಿಸಿ ಗ್ರಾಮಕ್ಕೆ ಬರುವುದಾಗಿ ರೈತರು ವಿವರಿಸಿದರು.
ಈ ಸಂದರ್ಭ ವಲಯ ಅರಣ್ಯಧಿಕಾರಿ ರತನ್ಕುಮಾರ್, ಉಪ ಅರಣ್ಯಧಿಕಾರಿ ದೇವಯ್ಯ, ಅರಣ್ಯ ರಕ್ಷಕರಾದ ಸಿದ್ದರಾಮ ಮತ್ತು ಇಲಾಖಾ ಸಿಬ್ಬಂದಿಗಳು, ಗ್ರಾ.ಪಂ.ಸದಸ್ಯ ಕುಡೆಕಲ್ಲು ಚಿದಾನಂದ, ಬಸವನಹಳ್ಳಿ ಮತ್ತು ಬೆಟ್ಟಗೇರಿ ಗ್ರಾಮದ ಹಲವು ಮಂದಿ ರೈತರು ಹಾಜರಿದ್ದರು.
- ಗಣೇಶ್ ಕುಡೆಕಲ್ಲು