ಮಡಿಕೇರಿ, ಫೆ. ೨೯: ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ಸ್ವಯಂ ಚಾಲಿತ ಬಾಡಿಗೆ ದ್ವಿಚಕ್ರ ವಾಹನ ಮಳಿಗೆ ತೆರೆಯಲು ಅವಕಾಶ ನೀಡದಂತೆ ಒತ್ತಾಯಿಸಿ ಮಡಿಕೇರಿ ಪ್ರವಾಸಿ ಕಾರು ಮಾಲೀಕರ ಮತ್ತು ಚಾಲಕರ ಸಂಘದ ಆಶ್ರಯದಲ್ಲಿ ಕಾರು ಚಾಲಕರು, ಮಾಲೀಕರು, ಆಟೋ ಚಾಲಕರು ಪ್ರತಿಭಟನೆ ನಡೆಸಿದರು.
ಪ್ರವಾಹ ಹಾಗೂ ಕೊರೊನಾ ದಿಂದಾಗಿ ಜಿಲ್ಲೆಯಾದ್ಯಂತ ಬಾಡಿಗೆ ಇಲ್ಲದೆ ಟ್ಯಾಕ್ಸಿ ವಾಹನ ಚಾಲಕರು ಮತ್ತು ಮಾಲೀಕರು ವಾಹನ ವಿಮೆ, ತೆರಿಗೆ, ತಿಂಗಳ ಸಾಲದ ಕಂತು ಕಟ್ಟಲಾಗದೆ ತೊಂದರೆ ಅನುಭವಿಸು ವಂತಾಗಿದೆ. ಇದೀಗ ಬೆಲೆ ಏರಿಕೆ ನಡುವೆ ಪರದಾಡುವಂತಾಗಿದೆ. ಈ ನಡುವೆ ಬಾಡಿಗೆ ದ್ವಿಚಕ್ರ ವಾಹನಗಳಿಂದಾಗಿ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಹಳೆ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲೇ ಎರಡು ದ್ವಿಚಕ್ರ ವಾಹನಗಳ ಮಳಿಗೆ ತೆರೆಯಲು ಮುಂದಾಗಿರುವದು ಗಮನಕ್ಕೆ ಬಂದಿದ್ದು, ಈ ಮಳಿಗೆ ತೆರೆಯಲು ಅನುಮತಿ ನೀಡಬಾರದು. ಅಥವಾ ಸ್ಥಳಾಂತರಗೊಳಿಸಬೇಕೆAದು ಪ್ರತಿಭಟನಾಕಾರರು ಒತ್ತಾಯಿಸಿದರು. ನಂತರ ಮನವಿ ಪತ್ರವನ್ನು ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಸಲ್ಲಿಸಿದರು.ಕಟ್ಟಲಾಗದೆ ತೊಂದರೆ ಅನುಭವಿಸು ವಂತಾಗಿದೆ. ಇದೀಗ ಬೆಲೆ ಏರಿಕೆ ನಡುವೆ ಪರದಾಡುವಂತಾಗಿದೆ. ಈ ನಡುವೆ ಬಾಡಿಗೆ ದ್ವಿಚಕ್ರ ವಾಹನಗಳಿಂದಾಗಿ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಹಳೆ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲೇ ಎರಡು ದ್ವಿಚಕ್ರ ವಾಹನಗಳ ಮಳಿಗೆ ತೆರೆಯಲು ಮುಂದಾಗಿರುವದು ಗಮನಕ್ಕೆ ಬಂದಿದ್ದು, ಈ ಮಳಿಗೆ ತೆರೆಯಲು ಅನುಮತಿ ನೀಡಬಾರದು. ಅಥವಾ ಸ್ಥಳಾಂತರಗೊಳಿಸಬೇಕೆAದು ಪ್ರತಿಭಟನಾಕಾರರು ಒತ್ತಾಯಿಸಿದರು. ನಂತರ ಮನವಿ ಪತ್ರವನ್ನು ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಸಲ್ಲಿಸಿದರು.