ಭಾಗಮಂಡಲ, ಮಾ. ೧ : ಭಾಗಮಂಡಲ ನಾಡು ಅಯ್ಯಂಗೇರಿ ಗ್ರಾಮದ ಶ್ರೀ ಕೃಷ್ಣ ಚಿನ್ನತಪ್ಪ ದೇವಸ್ಥಾನದ ೨೦೨೪ನೇ ವರ್ಷದ ವಾರ್ಷಿಕ ಉತ್ಸವವು ತಾ. ೩ ರಿಂದ ೫ರವರೆಗೆ ನಡೆಯಲಿದ್ದು, ತಾ. ೩ರಂದು ಬೆಳಗ್ಗಿನ ಹಬ್ಬವು ಬೆಳಿಗ್ಗೆ ೮ ಗಂಟೆಯಿAದ ೧೦.೩೦ರವರೆಗೆ ನಡೆಯುತ್ತದೆ. ಸಂಜೆ ೬ ಗಂಟೆಯಿAದ ರಾತ್ರಿ ೧೧ ಗಂಟೆಯವರೆಗೆ ದೇವರ ಹೊಳೆಯಲ್ಲಿ ಧಾರಾಪೂಜೆ ನಡೆಯಲಿದೆ. ತಾ. ೪ರಂದು ದೊಡ್ಡ ಹಬ್ಬ ಪಟ್ಟಣಿ ಹಬ್ಬ ಮಧ್ಯಾಹ್ನ ೧೨ ಗಂಟೆಗೆ ನಡೆಯುತ್ತದೆ. ತಾ. ೫ರಂದು ಕೊನೆಯ ದಿನ ಭಂಡಾರ ಇಡುವ ಕಾರ್ಯಕ್ರಮ ಮತ್ತು ಅನ್ನದಾನ ವ್ಯವಸ್ಥೆ ಇರುತ್ತದೆ ಎಂದು ಶ್ರೀ ಕೃಷ್ಣ ಚಿನ್ನತಪ್ಪ ದೇವಸ್ಥಾನ ತಕ್ಕಮುಖ್ಯಸ್ಥರು ಮತ್ತು ಆಡಳಿತ ಮಂಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.