ಮಡಿಕೇರಿ, ಫೆ. ೨೯: ಸೇನೆ., ಕ್ರೀಡೆ ಸೇರಿದಂತೆ ಕೊಡಗಿನ ಪ್ರತಿಭೆಗಳು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ., ಈಗಲೂ ಲಗ್ಗೆ ಯಿಡುತ್ತಲೇ ಇದ್ದಾರೆ. ಇದರೊಂದಿಗೆ ಸಾರ್ವಜನಿಕ ಮನ ರಂಜನಾ ಕ್ಷೇತ್ರ ವಾಗಿರುವ ಸಿನಿಮಾ ರಂಗದಲ್ಲೂ ಕೊಡಗಿನ ಅನೇಕ ಪ್ರತಿಭೆಗಳು ತಾರೆಗಳಾಗಿ ಮಿನುಗಿ ದ್ದಾರೆ. ಮಿನುಗುತ್ತಿದ್ದಾರೆ. ಈ ತಾರೆಗಳ ಸಾಲಿಗೆ ಇದೀಗ ಮತ್ತೊಂದು ಪ್ರತಿಭೆಯ ಪ್ರವೇಶವಾಗಿದೆ. ತೊತ್ತಿಯಂಡ ಕಿರಣ್ ಸೋಮಣ್ಣ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹೊಸ ಪ್ರತಿಭೆ. ‘ಕೆ ಕೆ’ (ಕೊಲೆಯಾದವನೇ ಕೊಲೆಗಾರ) ಚಿತ್ರದ ಮೂಲಕ ನಾಯಕನ ಪಾತ್ರದಲ್ಲಿ ಕನ್ನಡ ಚಿತ್ರ ಪ್ರೇಮಿಗಳಿಗೆ ಪರಿಚಯವಾಗುತ್ತಿದ್ದಾರೆ.

ಮೂಲತಃ ಜಿಲ್ಲೆಯ ಅಯ್ಯಂಗೇರಿ ನಿವಾಸಿಯಾಗಿರುವ ತೊತ್ತಿಯಂಡ ಆನಂದ ಹಾಗೂ ಯಶೋಧ ದಂಪತಿಯ ಪುತ್ರರಾಗಿರುವ ಕಿರಣ್ ಪಿಯುಸಿ ಶಿಕ್ಷಣದ ಬಳಿಕ ಐಟಿಐ ತರಬೇತಿ ಪಡೆದು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.

ಎಳವೆಯಿಂದಲೇ ಸಿನಿಮಾರಂಗದತ್ತ ಆಸಕ್ತಿ ಬೆಳೆಸಿಕೊಂಡಿರುವ ಕಿರಣ್‌ಗೆ ದಮಯಂತಿ ಎಂಬ ಚಿತ್ರದ ಮೂಲಕ ಮೊದಲ ಅವಕಾಶ ಸಿಕ್ಕಿತು. ನಂತರದಲ್ಲಿ ವೀರಂ, ಕಟ್ಲೆ, ಚತುರ, ಕಬ್ಜ, ಸೆಕ್ಟರ್-೭, ಚೂಮಂತರ್ ಚಿತ್ರಗಳಲ್ಲಿ ನಟಿಸುವ ಅವಕಾಶ ದೊರೆಯಿತು. ಆ ಬಳಿಕ ಅಮುಲ್ ಬೇಬಿ ಚಿತ್ರದಲ್ಲಿ ಖಳ ನಾಯಕನ ಗೆಳೆಯನ ಪಾತ್ರ, ಕಿರುದನಿ ಹಾಗೂ ಬಾಯ್, ಯಥಾಭವದÀಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿ ಗಮನ ಸೆಳೆದ ಹಿನ್ನೆಲೆಯಲ್ಲಿ ಇದೀಗ ‘ಕೆ.ಕೆ’ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಈ ಚಿತ್ರ ಮಾರ್ಚ್ ೮ರಂದು ಬಿಡುಗಡೆಯಾಗುತ್ತಿದ್ದು, ಸಿನಿ ಪ್ರೇಮಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

-ಸಂತೋಷ್