ಮಡಿಕೇರಿ, ಫೆ. ೨೯: ಈಗಾಗಲೇ ಬಾಂಗ್ಲಾ ದೇಶದ ಅಂತರರಾಷ್ಟಿçÃಯ ಚಲನಚಿತ್ರೋತ್ಸವದಲ್ಲಿ ವರ್ಲ್ಡ್ ಪ್ರೀಮಿಯರ್ ಶೋ ಕಂಡು ಹೆಸರು ಮಾಡಿರುವ ಕೂರ್ಗ್ ಕಾಫಿ ವುಡ್ ಮೂವಿಸ್‌ನ ಬ್ಯಾನರ್ ಅಡಿಯಲ್ಲಿ ತಯಾರಾದ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ “ಬೇರ್” ಕೊಡವ ಸಿನಿಮಾ ಇದೀಗ ೧೫ನೇ ಬೆಂಗಳೂರು ಅಂತರರಾಷ್ಟಿçÃಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಮಾರ್ಚ್ ೭ರವರೆಗೆ ಬೆಂಗಳೂರಿನ ಒರಿಯಾನ್ ಮಾಲ್‌ನಲ್ಲಿ ನಡೆಯುವ ಚಲನಚಿತ್ರೋತ್ಸವದ Uಟಿsuಟಿg Iಟಿಛಿಡಿeಜibಟe Iಟಿಜiಚಿ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ. ಇದು ಕೊಡವ ಸಿನಿಮಾ ರಂಗದಲ್ಲಿ ಬಹುದೊಡ್ಡ ಸಾಧನೆಯಾಗಿದೆ ಎಂದು ಚಿತ್ರತಂಡ ಹರ್ಷವ್ಯಕ್ತಪಡಿಸಿದೆ.
ಚಿತ್ರದಲ್ಲಿ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ವಾಂಚೀರ ವಿಠಲ್ ನಾಣಯ್ಯ, ಮಂಡೀರ ಪದ್ಮ ಬೋಪಯ್ಯ, ಮೊಣ್ಣಂಡ ನೇಹ ಮೋಟಯ್ಯ, ಉಳುವಂಗಡ ಅಮಿತ್ ಬೋಪಣ್ಣ, ಗುಮ್ಮಟ್ಟಿರ ಕಿಶು ಉತ್ತಪ್ಪ ಹಾಗೂ ತೊರೇರ ಕವನ, ಬಾಲನಟರಾಗಿ ತೇಜಲ್ ಕಾರ್ಯಪ್ಪ ಹಾಗೂ ತನಮ್ ಕಾರ್ಯಪ್ಪ ನಟಿಸಿದ್ದಾರೆ.
ಈರಮಂಡ ಹರಿಣಿ ವಿಜಯ್ ಮತ್ತು ಇತಿಹಾಸ ಶಂಕರ್ ಸಹ ನಿರ್ದೇಶಕರಾಗಿ, ಶಿವಕುಮಾರ್ ಅಂಬಲಿ ಹಾಗೂ ಸಂತೋಷ್ ಬಪ್ಪು ಛಾಯಾಗ್ರಾಹಕರಾಗಿ, ಪ್ರದೀಪ್ ಆರ್ಯನ್ ಸಂಕಲನಕಾರರಾಗಿ ಮತ್ತು ವಿಠಲ್ ರಂಗದೊಳ್ ಸಂಗೀತ ನಿರ್ದೇಶಕರಾಗಿ, ಕಲರಿಂಗ್ ನಿಕಿಲ್ ಕಾರ್ಯಪ್ಪ, ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ಈರಮಂಡ ವಿಜಯ್ ಉತ್ತಯ್ಯ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.