ಗೋಣಿಕೊಪ್ಪಲು, ಫೆ. ೨೮: ಖೇಲೊ ಇಂಡಿಯಾ ದಕ್ಷಿಣ ವಲಯ ಟ್ಯಾಲೆಂಟ್ ಹಂಟ್ ಮುಕ್ತ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಗೋಣಿಕೊಪ್ಪ ಲಯನ್ಸ್ ಪದವಿ ಪೂರ್ವ ಕಾಲೇಜಿನ ಮನ್ನಕ್ಕಮನೆ ಬಿ.ಪ್ರಜ್ವಲಾ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಜಯಪ್ರಕಾಶ್ ನಾರಾಯಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯಿಂದ ಗೋಣಿಕೊಪ್ಪ ಕಾವೇರಿ ಕಾಲೇಜಿನ ಯು.ಎನ್. ಮೋನಿಕ, ಯು.ಆರ್. ಮಂದಣ್ಣ, ಪೊನ್ನಂಪೇಟೆ ಸಂತ ಅಂತೋಣಿ ಶಾಲೆಯ ಎಂ.ಎಸ್. ಪ್ರಜ್ವಲ್ ಹಾಗೂ ಪೊನ್ನಂಪೇಟೆ ಪದವಿ ಪೂರ್ವ ಕಾಲೇಜಿನ ಪಿ.ಎಸ್. ಕಾರ್ತಿಕ್ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು.

ಬೆಳ್ಳಿ ಪದಕವನ್ನು ಪಡೆದಿರುವ ಮನ್ನಕ್ಕಮನೆ ಎಂ.ಬಿ. ಪ್ರಜ್ವಲಾ ೫ ಬಾರಿ ರಾಷ್ಟಿçÃಯ ಬಾಕ್ಸಿಂಗ್‌ನಲ್ಲಿ ಭಾಗವಹಿಸಿದ್ದಾರೆ. ಗೋಣಿಕೊಪ್ಪಲುವಿನ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯಬಾಲು ಹಾಗೂ ಬಾಲಕೃಷ್ಣ ದಂಪತಿಯ ಪುತ್ರಿ.