ಮಡಿಕೇರಿ, ಫೆ. ೨೮: ಕಾಫಿ ಮಂಡಳಿ ವಿಸ್ತರಣಾ ವಿಭಾಗ, ಶ್ರೀಮಂಗಲ ಇವರ ವತಿಯಿಂದ ಕಾಫಿ ಬೆಳೆಗಾರರಿಗೆ ತಾವಳಗೇರಿ ಸಮುದಾಯ ಭವನದಲ್ಲಿ (ಒಂಟಿಯAಗಡಿ) ಮಾರ್ಚ್ ೧ ರಂದು ಬೆಳಿಗ್ಗೆ ೧೦ ಗಂಟೆಗೆ ಮಣ್ಣು ಪರೀಕ್ಷೆ ಅಭಿಯಾನ ಮತ್ತು ಕಾಫಿ ಬೆಳೆಯ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀಮಂಗಲ ವ್ಯಾಪ್ತಿಯ ಕಾಫಿ ಬೆಳೆಗಾರರು ತಮ್ಮ ತೋಟದ ಮಣ್ಣಿನ ಮಾದರಿಯನ್ನು ಕಾಫಿ ಮಂಡಳಿ ಶಿಫಾರಸ್ಸು ಮಾಡಿದ ಮಾದರಿಯಲ್ಲಿ ಮಣ್ಣಿನ ಮಾದರಿ ಸಂಗ್ರಹಣೆಯನ್ನು ತಂದು ಅ ದಿನವೇ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ.

ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಲು ಬೆಳಿಗ್ಗೆ ೧೦ ಗಂಟೆಗೆ ಹಾಜರಿರಬೇಕಿದೆ ಎಂದು ಕಿರಿಯ ಸಂಪರ್ಕ ಅಧಿಕಾರಿ ಸುನಿಲ್ ಕುಮಾರ್ ಎಸ್. ತಿಳಿಸಿದ್ದಾರೆ.