ಕುಶಾಲನಗರ, ಫೆ. ೨೮: ಕುಶಾಲನಗರ ಹಳೆಯ ಸಂತೆ ಮಾರುಕಟ್ಟೆಯಲ್ಲಿ ವಾರದ ಸಂತೆ ಮುಂದುವರಿಸುವAತೆ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಪ್ರಮುಖರು ಸೇರಿದಂತೆ ದಲಿತ ಸಂಘರ್ಷ ಸಮಿತಿ ಭೀಮವಾದ ವತಿಯಿಂದ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕುಶಾಲನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ . ಈ ಹಿಂದೆ ಹಳೆ ಸಂತೆಮಾಳದಲ್ಲಿ ಸಂತೆ ನಡೆಯುತ್ತಿದ್ದ ಸಂದರ್ಭ ವ್ಯಾಪಾರಸ್ಥರಿಗೂ ಸಾರ್ವಜನಿಕರಿಗೂ ತುಂಬಾ ಅನುಕೂಲವಾಗಿತ್ತು. ಸ್ಥಳೀಯ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಸಮೀಪವೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂತೆ ಮಾಳವನ್ನು ಬದಲಾವಣೆ ಮಾಡಿರುವುದರಿಂದ ಜನರಿಗೆ ಮತ್ತು ವ್ಯಾಪಾರಸ್ಥರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ಸಂಘದ ಅಧ್ಯಕ್ಷರಾದ ಇಕ್ಬಾಲ್ ಹೇಳಿದರು.
ಕೆಇಬಿ ಮುಂಭಾಗ ಇರುವ ಹಳೆಯ ಸಂತೆ ಮಾರುಕಟ್ಟೆಯಲ್ಲಿ ಸೇರಿದ ಕೆಲವು ವರ್ತಕರು ಸಂತೆಯನ್ನು ಕೂಡಲೇ ಸ್ಥಳಾಂತರಗೊಳಿಸುವAತೆ ಆಗ್ರಹಿಸಿದರು.
ಈ ಸಂದರ್ಭ ಸಂಘದ ಕಾರ್ಯದರ್ಶಿ ಮಹೇಶ್ ಖಜಾಂಚಿ ಪ್ರಶಾಂತ್ ವ್ಯಾಪಾರಸ್ಥರಾದ ಗಣೇಶ್, ವಿ.ಎನ್. ಪ್ರಸಾದ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಸಮಿತಿಯ ಸಂಚಾಲಕರಾದ ಕೆ.ಬಿ. ರಾಜು ಮತ್ತಿತರರು ಇದ್ದರು.